ದೇವಸ್ಥಾನ-ರಸ್ತೆ ಅಭಿವೃದ್ಧಿಗೆ ಚಾಲನೆ

KannadaprabhaNewsNetwork |  
Published : Jul 15, 2026, 02:45 AM IST
ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿನ ವಿವಿಧ ಕಾಮಗಾರಿಗಳಿಗೆ ಶಾಸಕ ಎನ್.ಎಚ್. ಕೋನರಡ್ಡಿ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಗ್ರಾಮದ ಚಕ್ಕಡಿ ರಸ್ತೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು ₹4. 76 ಕೋಟಿ ವೆಚ್ಚದಲ್ಲಿ ಮೊರಬ-ಅಮ್ಮಿನಬಾವಿ ರಸ್ತೆ ಡಾಂಬರಿಕರಣ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದರು.

ನವಲಗುಂದ:

ಜನರ ಬೇಡಿಕೆಯಂತೆ ತಾಲೂಕಿನ ಮೊರಬ ಗ್ರಾಮಕ್ಕೆ ₹ 2.50 ಕೋಟಿ ಅನುದಾನ ಬಿಡುಗಡೆ ಮಾಡಿ ದೇವಸ್ಥಾನ ಹಾಗೂ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದ ಪ್ರಮುಖ ದೇವಸ್ಥಾನಗಳಾದ ಯೋಗೀಶ್ವರ ದೇವಸ್ಥಾನಕ್ಕೆ ₹40 ಲಕ್ಷ, ವೆಂಕಟೇಶ್ವರ ದೇವಸ್ಥಾನಕ್ಕೆ ₹20 ಲಕ್ಷ, ಹಿರೇಮಸೂತಿಗೆ ₹20 ಲಕ್ಷ, ಮಹಾಲಿಂಗರಾಯ ದೇವಸ್ಥಾನಕ್ಕೆ ₹5 ಲಕ್ಷ, ವಿಠ್ಠಲ ದೇವಸ್ಥಾನಕ್ಕೆ ₹5 ಲಕ್ಷ, ದುರ್ಗಾದೇವಿ ದೇವಸ್ಥಾನಕ್ಕೆ ₹15 ಲಕ್ಷ, ನೂತನ ನಾಡಕಚೇರಿಯ ಕಟ್ಟಡ ನಿರ್ಮಾಣಕ್ಕೆ ₹15 ಲಕ್ಷ, ಸರ್ಕಾರಿ ಪಿ.ಯು ಕಾಲೇಜಿಗೆ ₹13 ಲಕ್ಷ, ರೈತರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ₹5 ಲಕ್ಷ, ಹಂಚಿನಾಳವರ ಪ್ಲಾಟ್‌ನಲ್ಲಿ ₹50 ಲಕ್ಷ, ಶಿರಕೋಳ ರಸ್ತೆಯಿಂದ ಬಡೆಮಿಯ್ಯಾ ಅವರ ಮನೆವರೆಗೆ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹೀಗೆ ಅಂದಾಜು ₹2.50 ಕೋಟಿ ವೆಚ್ಚದಲ್ಲಿ ಅನುದಾನ ಬಿಡುಗಡೆ ಮಾಡಿ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

ಗ್ರಾಮದ ಚಕ್ಕಡಿ ರಸ್ತೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು ₹4. 76 ಕೋಟಿ ವೆಚ್ಚದಲ್ಲಿ ಮೊರಬ-ಅಮ್ಮಿನಬಾವಿ ರಸ್ತೆ ಡಾಂಬರಿಕರಣ ಮಾಡಲು ಟೆಂಡರ್ ಕರೆಯಲಾಗಿದೆ. ಅಲ್ಲದೆ ಮೊರಬ-ಬ್ಯಾಹಟ್ಟಿ, ಮೊರಬ-ಹಳಕಟ್ಟಿ, ಮೊರಬ-ಕೆರಿದಾರಿ ಸೇರಿದಂತೆ ಮುಂತಾದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಗ್ರಾಮದ ನಿವೇಶನ ರಹಿತ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದಕ್ಕಾಗಿ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು. ಮೊರಬ ಗ್ರಾಮದ ಜಡಿಮಠದ ಮಹೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ದಮಾನಗೌಡ ಹಿರೇಗೌಡರ, ಮಲಪ್ರಭಾ ನೀರುಬಳಕೆ ದಾರರ ಸಂಘದ ಅಧ್ಯಕ್ಷ ಸದುಗೌಡ ಪಾಟೀಲ, ಮಾಲತೇಶ ಹಂಚಿನಾಳ, ಮುರಗಯ್ಯ ವಿರಕ್ತಮಠ, ಎಂ.ಎಸ್. ರೋಣದ, ಶಾಂತವ್ವ ಗುಜ್ಜಳ, ಸೋಮಣ್ಣ ಬಳಿಗೇರ, ಬಸವರಾಜ ಗುಡೆಣ್ಣವರ, ಗಿರೀಶ ಮಾಸ್ತಿ, ಖಾಜಾಮಿಯಾ ಬಡೇಮಿಯಾ, ಯೋಗಪ್ಪ ಗೋಲನಾಯ್ಕರ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ಅರ್ಥಧಾರಿಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ
ಯಕ್ಷಗಾನ ಕಲಾರಂಗದ 51ನೇ ವಾರ್ಷಿಕ ಮಹಾಸಭೆ