-ರೆಡ್ಡಿ ಹೋಟೆಲ್ ಬಳಿ ರಸ್ತೆ ವಿಸ್ತರಣೆ: ನಗರಸಭೆಯಿಂದ ಹಳೆಯ ಕಟ್ಟಡ ತೆರವು
-----ಹಿರಿಯೂರು: ನಗರದ ಬಹುದೊಡ್ಡ ಸಮಸ್ಯೆಯಾಗಿರುವ ರಸ್ತೆ ಅಗಲೀಕರಣ ಕಾಮಗಾರಿ ನನಸಾಗುವ ಕಾಲ ಸನ್ನಿಹಿತವಾಗಿದೆ.
ರಸ್ತೆ ವಿಸ್ತರಣೆಗೆ ಕ್ಷಣಗಣನೆ ಶುರುವಾಗಿದ್ದು, ನಗರದ ರೆಡ್ಡಿ ಹೋಟೆಲ್ ನಿಂದ ಅಂಬೇಡ್ಕರ್ ವೃತ್ತದವರೆಗಿನ ಸರ್ಕಾರಿ ಕಟ್ಟಡಗಳ ತೆರವಿನ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ರೆಡ್ಡಿ ಹೋಟೆಲ್ ನಿಂದ ಗಾಂಧಿ ವೃತ್ತದರೆಗೆ ಎರಡು ಭಾಗದಲ್ಲೂ ರಸ್ತೆ ಅಗಲೀಕರಣದ ಅಂಗವಾಗಿ 50 ಅಡಿಯವರೆಗೆ ಕಟ್ಟಡ ನೆಲಸಮ ಕಾಮಗಾರಿ ಹಾಗೂ ರೆಡ್ಡಿ ಹೋಟೆಲ್ ನಿಂದ ಅಂಬೇಡ್ಕರ್ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ಸಚಿವರು ಸೋಮವಾರ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ತಿಳಿಸಿದರು.ನಗರದ ರಾಮಮಂದಿರದ ಬಳಿಯಲ್ಲಿ ಮಂಗಳವಾರ ಕಟ್ಟಡ ನೆಲಸಮ ಕಾರ್ಯ ಶುರು ಮಾಡಿ ಮಾತನಾಡಿದ ಅವರು ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಟಿಬಿ ವೃತ್ತದಿಂದ ತಾಲೂಕು ಕಛೇರಿ ಬಳಿಯಿರುವ ವೇದಾವತಿ ನದಿ ಸೇತುವೆವರೆಗೂ ಎರಡು ಬದಿಗಳಲ್ಲಿ ಪುಟ್ ಬಾತ್ ಅಂಗಡಿಗಳನ್ನು ತೆರವುಗೊಳಿಸಿ ಮರಗಳನ್ನು ಕಟಾವು ಮಾಡಲಾಗಿತ್ತು. ಇದೀಗ ರಸ್ತೆ ಅಗಲೀಕರಣದ ಮುಂದುವರಿದ ಭಾಗವಾಗಿ ಜೆಸಿಬಿಗಳನ್ನು ಬಳಸಿಕೊಂಡು ಸರ್ಕಾರಿ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯ ಶುರುವಾಗಿದೆ. ಮಧ್ಯ ರಸ್ತೆಯಿಂದ ಎರಡೂ ಕಡೆಗಳಲ್ಲಿ 50 ಅಡಿವರೆಗೂ ರಸ್ತೆ ಅಗಲೀಕರಣ ನಡೆಯಲಿದೆ.
ಮೊದಲ ಹಂತದಲ್ಲಿ ಕಟ್ಟಡಗಳ ನೆಲಸಮ ಕಾರ್ಯ ನಡೆಯಲಿದೆ. ನಂತರ ಗಾಂಧಿ ಸರ್ಕಲ್ ನಿಂದ ಹುಳಿಯಾರು ರಸ್ತೆಯ ಚಾನೆಲ್ ವರೆಗೆ ಎರಡನೇ ಹಂತದ ಕಾಮಗಾರಿ ನಡೆಯಲಿದೆ. ಲಕ್ಷಾಂತರ ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಅನುಕೂಲವಾಗುವ ರಸ್ತೆ ವಿಸ್ತರಣೆ ಕಾಮಗಾರಿ ಈ ಬಾರಿ ನಿರಂತರವಾಗಿ ಸಾಗಲಿದೆ ಎಂದು ನಗರಸಭೆ ಅಧ್ಯಕ್ಷರು ಪ್ರತಿಕ್ರಿಯಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜೇಶ್ ಕುಮಾರ, ಪೌರಾಯುಕ್ತ ವಾಸಿಂ, ನಗರಸಭೆ ಸದಸ್ಯರಾದ ಜಗದೀಶ್, ಸಣ್ಣಪ್ಪ, ಮಾಯಾವರ್ಮ ಮುಂತಾದವರು ಹಾಜರಿದ್ದರು.----
ಫೋಟೊ: ನಗರದ ರೆಡ್ಡಿ ಹೋಟೆಲ್ ಬಳಿ ರಸ್ತೆ ವಿಸ್ತರಣೆ ಅಂಗವಾಗಿ ಹಳೆಯ ಕಟ್ಟಡವನ್ನು ನಗರಸಭೆ ವತಿಯಿಂದ ತೆರವುಗೊಳಿಸಲಾಯಿತು.