ಲಾರಿ ಡಿಕ್ಕಿ ಹೊಡೆದು ಚಾಲಕ ಸಾವು

KannadaprabhaNewsNetwork |  
Published : Nov 06, 2025, 02:45 AM IST
5ಎಚ್.ಎಲ್.ವೈ-1: ಈಐಡಿ ಸಕ್ಕರೆ ಕಾರ್ಖಾನೆಯಲ್ಲಿ  ನಡೆದ ದುರ್ಘಟನೆಯಲ್ಲಿ ಮೃತಪಟ್ಟ ದುರ್ಧೈವಿ  ಚಾಲಕ ಮಲ್ಲಿಕಾರ್ಜುನ ಮೆಣಸಿನಕಾಯಿ | Kannada Prabha

ಸಾರಾಂಶ

ಪಟ್ಟಣದಲ್ಲಿರುವ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವೇ ಬ್ರಿಡ್ಜ್ ಹತ್ತಿರದ ಸಿಮೆಂಟ್ ರಸ್ತೆಯಲ್ಲಿ ನಡೆದ ಆಕಸ್ಮಿಕ ದುರ್ಘಟನೆಯೊಂದರಲ್ಲಿ ಲಾರಿ ಚಾಲಕನೊರ್ವ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ದುರ್ಘಟನೆಕನ್ನಡಪ್ರಭ ವಾರ್ತೆ ಹಳಿಯಾಳ

ಪಟ್ಟಣದಲ್ಲಿರುವ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ವೇ ಬ್ರಿಡ್ಜ್ ಹತ್ತಿರದ ಸಿಮೆಂಟ್ ರಸ್ತೆಯಲ್ಲಿ ನಡೆದ ಆಕಸ್ಮಿಕ ದುರ್ಘಟನೆಯೊಂದರಲ್ಲಿ ಲಾರಿ ಚಾಲಕನೊರ್ವ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

ಮೃತ ಲಾರಿ ಚಾಲಕ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಮಲ್ಲಿಕಾರ್ಜುನ ಪರಪ್ಪ ಮೆಣಸಿನಕಾಯಿ(26) ಎನ್ನಲಾಗಿದೆ. ಮೃತರು ಹೆಂಡತಿ ಹಾಗೂ ಚಿಕ್ಕ ಅವಳಿ ಮಕ್ಕಳನ್ನು ಅಗಲಿದ್ದಾರೆ.

ಮಲ್ಲಿಕಾರ್ಜುನ ತನ್ನ ಲಾರಿಯ ಬಂಪರ್ ಒರೆಸುತ್ತಿದ್ದಾಗ ಮುಂದುಗಡೆಯಿದ್ದ ಲಾರಿಯೊಂದು ವೇಗವಾಗಿ ಹಿಂಬದಿಗೆ ರಿವರ್ಸ್‌ ಬಂದು ಡಿಕ್ಕಿ ಹೊಡೆದಿದ್ದರಿಂದ ಮಲ್ಲಿಕಾರ್ಜುನ ತಲೆಗೆ ಮಾರಣಾಂತಿಕ ಗಾಯವಾಗಿದ್ದರಿಂದ ತಕ್ಷಣ ಅವರನ್ನು ತಾಲೂಕಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು, ವೈದ್ಯಾಧಿಕಾರಿಗಳು ಬಂದು ತಪಾಸಣೆ ನಡೆಸಿದಾಗ ಗಾಯಾಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸಕ್ಕರೆ ಕಾರ್ಖಾನೆಯ ಸೆಕ್ಯೂರಿಟಿ ಸಿಬ್ಬಂದಿ ವಿಠ್ಠಲ ತೇರಗಾಂವಕರ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರನ್ವಯ ಆರೋಪಿತ ಚಾಲಕ ಕಲಘಟಗಿ ತಾಲೂಕಿನ ಹಿರೆಹೊನ್ನಾಳಿಯ ನಿವಾಸಿ ಶಿವಲಿಂಗಪ್ಪ ಸಂಗಪ್ಪ ಎಮ್ಮೆಟ್ಟಿ(45)ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಹಳಿಯಾಳ ಸಿಪಿಐ ಜಯಪಾಲ ಪಾಟೀಲ ಹಾಗೂ ಪಿಎಸ್‌ಐ ಬಸವರಾಜ ಮಬನೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗಾಂಜಾ ಸೇವನೆ, ನಾಲ್ವರ ಬಂಧನ:

ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟ ಹಿನ್ನೆಲೆ ಶಿರಸಿ ನಗರ ಠಾಣೆ ಪೊಲೀಸರು ಬುಧವಾರ 2 ಪ್ರತ್ಯೇಕ ಪ್ರಕರಣ ದಾಖಲಿಸಿ, ನಾಲ್ವರನ್ನು ಬಂಧಿಸಿದ್ದಾರೆ.ನಗರದ ಕೋರ್ಟ್ ರೋಡ್ ನಿವಾಸಿ ಕಿಶನ್ ನಾರಾಯಣ ಹರಿಜನ (23) ಹಾಗೂ ಶಿರಸಿ ಬಾಪೂಜಿನಗರದ ನಿವಾಸಿ ಮುತ್ತಣ್ಣ (ಮುತ್ತು) ಭೀಮಪ್ಪ ಭೋವಿ (27) ಬಂಧಿತರು. ಇವರು ನಗರದ ಕ್ಯಾಪ್ಟನ್ ಕ್ಯಾಂಪಸ್‌ಗೆ ಹೋಗುವ ಕಚ್ಚಾ ರಸ್ತೆಯಲ್ಲಿ ಗಾಂಜಾ ಸೇವಿಸಿದ ಅನುಮಾನದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನೊಂದು ಪ್ರಕರಣದಲ್ಲಿ ಇಲ್ಲಿನ ನೆಹರು ನಗರದ ನಿವಾಸಿ ಮನೋಜ್ ರಾಮಾ ಮೇತ್ರಿ (22) ಹಾಗೂ ಶಿರಸಿ ಐದು ರಸ್ತೆ ನಿವಾಸಿ ಸಮೀರ್ ಅಮೀನುದ್ದಿನ ಫಿರ್ಜದೆ (19) ಬಂಧಿತರು. ಇವರು ನಗರದ ಆನೆಹೊಂಡದ ಹತ್ತಿರ ಗಾಂಜಾ ಅಮಲಿನಲ್ಲಿರುವ ವೇಳೆ ವಶಕ್ಕೆ ಪಡೆದು ನಗರದ ಪಂಡಿತ ಸಾರ್ವಜನಿ‌ಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ನಾಲ್ವರು ಗಾಂಜಾ ಸೇವಿಸಿರುವುದನ್ನು ದೃಢಪಡಿಸಿದ್ದಾರೆ. ಈ ಹಿನ್ನೆಲೆ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ