ವಿಶೇಷ ವರದಿ
ಸೂಕ್ತ ಕಾಲದಲ್ಲಿ ಡ್ರೈವಿಂಗ್ ಲೈಸೆನ್ಸ್(ಡಿಎಲ್) ನವೀಕರಣಗೊಳ್ಳದೆ ಲೈಸೆನ್ಸ್‌ದಾರರು ಪರದಾಟ ನಡೆಸುವಂತಾಗಿದೆ. ಕಳೆದ ಎರಡು ತಿಂಗಳಿಂದ ಮಂಗಳೂರಿನಲ್ಲಿ ಡಿಎಲ್ ಹೊಂದಿದವರು ಲೈಸೆನ್ಸ್ ನವೀಕರಣಕ್ಕೆ ಬವಣೆಪಡುತ್ತಿದ್ದಾರೆ.
ಪುಸ್ತಕದ ಡಿಎಲ್ ಹೊಂದಿದವರು ಹಾಗೂ ಹಳೆ ಸ್ಮಾರ್ಟ್‌ಕಾರ್ಡ್ ಹೊಂದಿದವರು ಅವಧಿ ಮುಕ್ತಾಯಗೊಂಡ ಬಳಿಕ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈಗಲೂ ಅರ್ಜಿ ಸಲ್ಲಿಕೆಯಾಗುತ್ತಲೇ ಇದೆ. ಇದೊಂದು ನಿರಂತರ ಪ್ರಕ್ರಿಯೆಯಾದರೂ ಅಂತಹವರಿಗೆ ಡಿಎಲ್ ನವೀಕರಣಗೊಂಡು ಹೊಸ ಸ್ಮಾರ್ಟ್‌ಕಾರ್ಡ್ ಸಿಕ್ಕಿಲ್ಲ. ಹೊಸ ಸ್ಮಾರ್ಟ್‌ಕಾರ್ಡ್ ಇಲ್ಲದಿದ್ದರೆ ಸಾರಿಗೆ ನಿಯಮ ಪ್ರಕಾರ ವಾಹನ ಚಾಲನೆ ಮಾಡುವಂತಿಲ್ಲ. ಇಂತಹ ಇಕ್ಕಟ್ಟಿನ ಪರಿಸ್ಥಿಯನ್ನು ಎದುರಿಸುವಂತಾಗಿದೆ.ಮಂಗಳೂರು ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ಡಿಎಲ್ ನವೀಕರಣ ಕೋರಿ ಅನೇಕ ಮಂದಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಕೆಯಾದ ಬಳಿಕ ನವೀಕರಣ ಪ್ರಕ್ರಿಯೆ ನಡೆಯಬೇಕು. ಪುಸ್ತಕದ ಪರವಾನಿಗೆ ದಾಖಲೆ, ಆಧಾರ್ ಲಿಂಕ್, ವೈದ್ಯಕೀ ಸರ್ಟಿಫಿಕೆಟ್ ಲಿಂಕ್ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಅರ್ಜಿ ವಿಲೇವಾರಿ ಹಂತದಲ್ಲಿ ಚಲನ್ ಮೂಲಕ ಹಣ ಪಾವತಿಸಬೇಕು. ಕೊನೆಗೆ ಹೊಸ ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆಗಳಿಗೆ 15 ರಿಂದ 1 ತಿಂಗಳು ಅವಧಿ ಬೇಕು. ಆದರೆ ಮಂಗಳೂರು ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿ ಎರಡು ತಿಂಗಳು ಕಳೆದರೂ ಇನ್ನೂ ಅರ್ಜಿ ವಿಲೇವಾರಿಯೇ ಆಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಅಧಿಕಾರಿಗಳ ಟೇಬಲ್‌ನಲ್ಲೇ ಇದೆ ಎನ್ನುವ ಸಮಜಾಯಿಷಿ ಸಿಗುತ್ತದೆ ಎನ್ನುತ್ತಾರೆ ನೊಂದ ಅರ್ಜಿದಾರರು. ನವೀಕರಣವಾಗದೆ ತೊಡಕು:
ಅರ್ಜಿ ಸಲ್ಲಿಸಿದ ಬಳಿಕ ಡಿಎಲ್ ನವೀಕರಣ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಅರ್ಜಿದಾರರಿಗೆ ಎಸ್‌ಎಂಎಸ್ ರವಾನೆಯಾಗುತ್ತದೆ. ನವೀಕರಣ ಅನುಮೋದನೆಗೊಂಡ ಬಳಿಕ ಅರ್ಜಿದಾರರ ಡಿಎಲ್ ಡಿಜಿ ಲಾಕರ್ ಅಥವಾ ಇ ಪರಿವಾಹನ್ ಪೋರ್ಟಲ್‌ನಲ್ಲೂ ಲಭ್ಯವಿರುತ್ತದೆ. ಆದರೆ ಇಲ್ಲಿ ನವೀಕರಣ ಅನುಮೋದನೆಗೊಳ್ಳದಿದ್ದರೆ ನವೀಕೃತ ಡಿಎಲ್ ಪೋರ್ಟಲ್ ಅಥವಾ ಡಿಜಿ ಲಾಕರ್‌ನಲ್ಲೂ ಸಿಗುವುದಿಲ್ಲ.
ಸಾರಿಗೆ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಿದ ಬಳಿಕ ಸ್ಮಾರ್ಟ್‌ಕಾರ್ಡ್ ಪೂರೈಕೆಯನ್ನು ಹೊರಗುತ್ತಿಗೆಗೆ ನೀಡಲಾಗಿದೆ.
ಪುತ್ತೂರು, ಬಂಟ್ವಾಳದಲ್ಲಿ ಸಮಸ್ಯೆ ಇಲ್ಲ:
-ಶ್ರೀಧರ ಮಲ್ನಾಡ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು