ಹಾವೇರಿ: ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟಕ ಸಂಘದ ಸಹಾಯಾರ್ಥವಾಗಿ ಅ. 10ರಿಂದ ಮೂರು ದಿನಗಳ ಕಾಲ ಹಾವೇರಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ `ಖಾನಾವಳಿ ಚೆನ್ನಿ'''''''' ಎಂಬ ನಾಟಕ ಪ್ರದರ್ಶನಗೊಳ್ಳಲಿದ್ದು, ಕಲಾ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಚಿತ್ತರಗಿಯ ಶ್ರೀ ಕುಮಾರ ವಿಜಯ ನಾಟಕ ಕಂಪನಿಯ ಅಧ್ಯಕ್ಷ ಮಂಜುನಾಥ ಜಾಲಿಹಾಳ ಮನವಿ ಮಾಡಿದರು.
ಹಾವೇರಿ ನಗರದಲ್ಲಿ ಇನ್ನು ಮೂರು ದಿನ ಮಾತ್ರ ನಾಟಕ ಪ್ರದರ್ಶನ ನಡೆಯಲಿದ್ದು, ಅ.10ರಿಂದ ಮೂರು ದಿನಗಳ ಕಾಲ ಬಿ.ಆರ್. ಅರಶಿಣಗುಡಿ ವಿರಚಿತ `ಖಾನಾವಳಿ ಚೆನ್ನಿ'''''''' ಎಂಬ ನಾಟಕವನ್ನು ಪ್ರತಿದಿನ ಎರಡು ಪ್ರದರ್ಶನ ನಡೆಯಲಿದ್ದು, ಖಾಸಗಿ ವಾಹಿನಿಯ ಖ್ಯಾತ ಹಾಸ್ಯ ನಟಿ ಕಸ್ತೂರಿ ಹಾಗೂ ವಿಜಯ್ ಮುಖ್ಯ ಹಾಸ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಕಾರಣ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಕಲಾವಿದರಿಗೂ ತಟ್ಟಿದ ಬರ..ಮಳೆ ಕೊರತೆಯಿಂದಾಗಿ ಆವರಿಸಿರುವ ಬರ ಕಲಾವಿದರಿಗೂ ಸಂಕಷ್ಟ ತಂದಿದೆ. ನಾವೂ ಮೂರು ತಿಂಗಳಿಂದ ನಗರದಲ್ಲಿ ನಾಟಕ ಪ್ರದರ್ಶನ ನಡೆಸುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ತೀರಾ ಕಡಿಮೆಯಾಗಿದೆ. ನಾವು ಪ್ರದರ್ಶಿಸಿದ ಎಲ್ಲಾ ನಾಟಕಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಮೊದಲು ಮಳೆ ಇದ್ದಾಗ ಒಂದೂವರೆ ತಿಂಗಳ ಕಾಲ ಜನರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಬರ ಬಿದ್ದ ಬಳಿಕ ಪ್ರೇಕ್ಷರ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ. ಹೀಗಾಗಿ ನಮ್ಮ ಬದುಕು ಸಹ ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಜಾಲಿಹಾಳ, ಮಂಜುನಾಥ ಜಾಲಿಹಾಳ, ಮಹಾದೇವ ಜಾಲಿಹಾಳ, ಸಂಗಮೇಶ ಗಜೇಂದ್ರಗಡ, ಶ್ರೀಶೈಲ ವಿಜಯಪುರ, ರುಘುವೀರ ಬನಹಟ್ಟಿ, ನೂತನಕುಮಾರ ರಾಯಚೂರು, ಸುನೀಲ ವಿಜಯಪುರ, ಈಶ್ವರ, ಕೆಂಪು ಪೂಜಾರಿ ಇತರರಿದ್ದರು.