ವೈ.ಸೋಮಶೇಖರ್ ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕಿನಲ್ಲಿ ಈ ಸಲ ಮುಂಗಾರು ಮಳೆ ಸಕಾಲದಲ್ಲಿ ಬೀಳದೆ ಅನ್ನದಾತರಿಗೆ ದಿಕ್ಕು ಕಾಣದಾಗಿದೆ. ಕೃಷಿಕರು ಮತ್ತು ಕೂಲಿಕಾರ್ಮಿಕರು ಕಂಗಾಲಾಗಿದ್ದು ಮತ್ತೆ ತಾಲೂಕಿನಲ್ಲಿ ಬರದ ಕರಿನೆರಳು ಆವರಿಸಲಿದೆಯೇ ಎಂಬ ಆತಂಕ ರೈತರನ್ನು ಕಾಡುತ್ತಿದೆ.ಈ ಸಲ ಮಳೆ ಕೈ ಕೊಟ್ಟಿದ್ದು ಎಲ್ಲಿ ನೋಡಿದರೂ ಮಳೆರಾಯನ ದರ್ಶನವಿಲ್ಲ, ಕೃಷಿಕರು ಉಳುಮೆ ಮಾಡಿ ಬಿತ್ತಿ ಉತ್ತುವ ಕಾಲದಲ್ಲಿ ದುಡಿವ ಕೈಗಳಿಗೆ ಕೆಲಸವಿಲ್ಲದೆ ತಲೆ ಮೇಲೆ ಕೈ ಹೊತ್ತು ಕೂತಿದ್ದು ಬೇಸಾಯ ಬೇಜರಾಗಿ ಜೀವನ ನಿರ್ವಹಣೆಗೆ ಪರದಾಡುವ ದೃಶ್ಯ ಕಂಡು ಬರುತ್ತಿದೆ. ಪ್ರಸ್ತುತ ಮಳೆ ಪ್ರಾರಂಭವಾದ್ದು,ಇದೂ ಕೂಡ ಕಪ್ಪು ಬಿಳುಪು ಮೋಡ ಹೊರ ಸೂಸುತ್ತಿವೆ. ರೈತರು ಬೆಳಿಗ್ಗೆ ಎದ್ದು ಆಕಾಶದಲ್ಲಿ ಓಡುವ ಕಪ್ಪು ಮೋಡಗಳತ್ತ ಮುಖ ಮಾಡಿ ಸೋತು ಸುಣ್ಣವಾಗಿ ಪ್ರತಿ ನಿತ್ಯ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ದೊಡ್ಡ ಪ್ರಮಾಣದ ಮಳಯೇ ಬೀಳಲಿಲ್ಲ, ರೈತರು ಸಾಲ ಸೂಲ ಮಾಡಿ ಬಿತ್ತನೆ ಮಾಡಲು ತಂದಿದ್ದ ಬೀಜಗಳು ಮತ್ತೆ ಮಾರುಕಟ್ಟೆಗೆ ಬರುವ ಲಕ್ಷಣಗಳು ಕಾಣುತ್ತಿವೆ. ಈಗಾಗಲೇ ಅಲ್ಪ ಪ್ರಮಾಣದ ತೆವಾಂಶಕ್ಕೆ ಬಿತ್ತಿದ ಬೀಜಗಳು ಮಣ್ಣು ಪಾಲಾಗುತ್ತಿವೆ. ಮಳೆ ಕೊರತೆಯಿಂದ ಬೇಸಾಯ ಮಾಡಲು ಕೃಷಿಕರು ಹಿಂಜರಿಯುತ್ತಿದ್ದಾರೆ. ಪ್ರಕೃತಿ ತನ್ನ ಕಾಲದ ಮಹಿಮೆ ಪರಿಪಾಲನೆ ಮಾಡದೇ ಕೈ ಚಲ್ಲಿದ ಪರಿಣಾಮ ಮತ್ತೆ ಬರದ ದವಡೆಗೆ ತಾಲೂಕು ಸಿಲುಕಿ ಮಳೆ ಮುಗಿಲು ಸೇರಿದರೆ ಭೂಮಿ ಬಂಜರಾದರೆ ರೈತನ ಸ್ಥಿತಿ ಗತಿ ಏನೂ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.ವರ್ಷದ ವಾಡಿಕೆ ಮಳೆ 655 ಮಿಮೀ ಇದ್ದು ಇವರೆಗೆ ಕೇವಲ 195ಮಿಮೀ ಮಳೆಬಿದ್ದಿದೆ ಇದು ಯಾತಕ್ಕೂ ಸಾಲದು. ಕಳೆದ ವರ್ಷ ಈ ವೇಳೆಗೆ ಸಾಕಷ್ಟು ಮಳೆ ಸುರಿದು ರೈತರು ಸಂತಸದಿಂದ ಬೀಜ ಬಿತ್ತಿದ್ದರು.ಆದರೆ ಈಗ ಮಳೆಯೇ ಬೀಳುತ್ತಿಲ್ಲ, ಬೇರೆ ರಾಜ್ಯ ಮ್ತತು ನಮ್ಮ ಮಲೆನಾಡು ಕರಾವಳಿ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದರೆ ಇಲ್ಲಿ ಮೋಡ ಮುಚ್ಚಿದ ವಾತವರಣ ನಿರ್ಮಾಣವಾಗಿ ಮಳೆ ಬಾರದೇ ಬರದ ಛಾಯೆ ಆವರಿಸುವ ಲಕ್ಷಣ ಕಂಡು ಬರುತ್ತಿದೆ. ಈ ಸಲ 31.44 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಿದ್ದು,ಈವರೆಗೆ 5 ಸಾವಿರ ಹೆಕ್ಟೇರ್ ಬಿತ್ತನೆ ಮಾಡಲಾಗಿದ್ದು ರೈತರು ಮುಂಗಾರು ಮಳೆ ಬಿತ್ತನೆ ನಿರೀಕ್ಷೆಯಲ್ಲಿದ್ದಾರೆ.
===========ಕಲರ್ ಬಾಕ್ಸ್... 1
ಹೋಬಳಿ ಮಳೆ ಪ್ರಮಾಣಮಧುಗಿರಿ 21ಮಿಮೀ,
ದೊಡ್ಡೇರಿ 21ಮಿಮೀ,ಐ.ಡಿ.ಹಳ್ಳಿ 25ಮೀಮೀ,
ಕೊಡಿಗೇನಹಳ್ಳಿ 22ಮಿಮೀ,ಮಿಡಿಗೇಶಿ 34ಮಿಮೀ,
ಪುರವರ 34ಮಿಮೀಒಟ್ಟು 195 ಮಿಮೀಟರ್
---------------------------------ಕಲರ್ ಬಾಕ್ಸ್ 2
ಬಿತ್ತನೆ ಬೀಜ ದಾಸ್ತಾನು ( ಕ್ವಿಂಟಲ್‌ಗಳಲ್ಲಿ)ಬೀಜ ದಾಸ್ತಾನು ವಿತರಣೆ
ಶೇಂಗಾ 472 171ಭತ್ತ 51 17
ರಾಗಿ 28 9ಮೆಕ್ಕೆಜೋಳ 219 , 50
ತೊಗರಿ 50 20--------------------------
ಕಾನೂನುಕ್ರಮರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ,ರೈತರಿಗೆ ಸರ್ಕಾರ ನಿಗದಿ ಪಡಿಸಿದ ದರದಲ್ಲಿ ವಿತರಣೆ ಮಾಡಲು ಸೂಚಿಸಿದ್ದು ಅಕ್ರಮ ದಾಸ್ಥಾನು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೃಷಿ ಸಹಾಯ ನಿರ್ದೇಶಕ ಡಿ.ಹನುಮಂತರಾಯಪ್ಪ ಕನ್ನಡಪ್ರಭಕ್ಕೆ ತಿಳಿಸಿದರು. ರೈತರು ಬಿತ್ತನೆ ಮಾಡಿದ ನಂತರ ಸಂಬಂಧಪಟ್ಟ ಬ್ಯಾಂಕುಗಳಲ್ಲಿ ಅಥವಾ ಗ್ರಾಮಾಡಳಿತ ನಂ.1ರಲ್ಲಿ ಬೆಳೆ ವಿಮೆ ಮಾಡಿಸಬಹುದು.