ಮಾದಕ ದ್ರವ್ಯ ಸೇವನೆಯಿಂದ ಜೀವಕ್ಕೆ ಹಾನಿ: ಪಿಎಸ್‌ಐ ಹೊಳೆಬಸಪ್ಪ ಸಲಹೆ

KannadaprabhaNewsNetwork |  
Published : Jun 11, 2026, 01:45 AM IST
ತಿಮ್ಮಜ್ಜರ ರುದ್ರಪ್ಪ(86) | Kannada Prabha

ಸಾರಾಂಶ

ಆಧುನಿಕ ಯುಗದಲ್ಲಿ ಯಾರೊಬ್ಬರೂ ಸುರಕ್ಷಿತರಲ್ಲ ಎನ್ನುವುದು ಕಟುಸತ್ಯವಾಗಿದೆ. ಜನರು ಒಂದಿಲ್ಲೊಂದು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಾದಕ ವಸ್ತುಗಳು ಮಾನವನ ಆರೋಗ್ಯ ಮತ್ತು ಜೀವಕ್ಕೆ ತುಂಬಾ ಹಾನಿಕರವಾಗಿದೆ ಎಂದು ನ್ಯಾಮತಿ ಆರಕ್ಷಕ ಠಾಣೆಯ ಪಿಎಸ್‌ಐ ಹೊಳೆಬಸಪ್ಪ ಹೇಳಿದ್ದಾರೆ.

- ನ್ಯಾಮತಿ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜಲ್ಲಿ ಜಾಗೃತಿ ಕಾರ್ಯಕ್ರಮ

- - -

ನ್ಯಾಮತಿ: ಆಧುನಿಕ ಯುಗದಲ್ಲಿ ಯಾರೊಬ್ಬರೂ ಸುರಕ್ಷಿತರಲ್ಲ ಎನ್ನುವುದು ಕಟುಸತ್ಯವಾಗಿದೆ. ಜನರು ಒಂದಿಲ್ಲೊಂದು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಾದಕ ವಸ್ತುಗಳು ಮಾನವನ ಆರೋಗ್ಯ ಮತ್ತು ಜೀವಕ್ಕೆ ತುಂಬಾ ಹಾನಿಕರವಾಗಿದೆ ಎಂದು ನ್ಯಾಮತಿ ಆರಕ್ಷಕ ಠಾಣೆಯ ಪಿಎಸ್‌ಐ ಹೊಳೆಬಸಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಾದಕ ವಸ್ತು ಮತ್ತು ಪೋಕ್ಸೋ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ನಮ್ಮ ಕುಟುಂಬದ ಸದಸ್ಯರು ಮಾದಕ ವಸ್ತು ವ್ಯಸನಕ್ಕೆ ಬಲಿ ಆಗದಂತೆ ತಡೆಯುವ ಜೊತೆಗೆ ಇತರರು ಚಟಕ್ಕೆ ಬಲಿಯಾಗದಂತೆ ತಡೆಯುವ ಹೊಣೆಗಾರಿಕೆ ನಮ್ಮ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲೂ ಮಾದಕ ಬಸ್ತು ಬಳಕೆ ಹೆಚ್ಚುತ್ತಿರುವ ಹಿನ್ನೆಲೆ 8ರಿಂದ 12ನೇ ತರಗತಿಯ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಡ್ರಗ್ಸ್‌ ಟೆಸ್ಟ್‌ಗೆ ಒಳಪಡಿಸಬೇಕು. ಶಾಲೆ ಕಾಲೇಜುಗಳಲ್ಲಿ ಮಾದಕ ದ್ರವ್ಯ ಮುಕ್ತಗೊಳಿಸಲು ಈ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮಕ್ಕಳು ಹೊರಗಿನ ಅಪರಿಚಿತ ವ್ಯಕ್ತಿಗಳಿಂದಷ್ಟೇ ಅಲ್ಲ, ಮನೆಯಲ್ಲಿ ಇರುವ ಪರಿಚಿತ ವ್ಯಕ್ತಿಗಳಿಂದಲೂ ಮಾನಸಿಕ, ದೈಹಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಹೀಗೆ ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಾಗೂ ಇತರೆ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ಬಂದಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಬಾಲಕಿಯರ ಕಾಲೇಜಿನ ಉಪ ಪ್ರಾಂಶುಪಾಲ ಬಿ.ಕೆ.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ನಾಗರತ್ನಮ್ಮ, ಎಂ.ಎಸ್‌.ರೂಪ, ರೂಪ ಎನ್‌.ಜೆ., ಶಿಕ್ಷಕ ಯು.ಕೆ. ಮಂಜುನಾಥ, ಠಾಣೆಯ ಸಿಬ್ಬಂದಿ, ಶಾಲಾ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

- - -

-ಚಿತ್ರ: ಕಾರ್ಯಕ್ರಮದಲ್ಲಿ ನ್ಯಾಮತಿ ಠಾಣೆ ಪಿಎಸ್‌ಐ ಹೊಳೆಬಸಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ನು ಕಾಯೋಕೆ ಆಗಲ್ಲ, ಬೇಗ ಮಿನಿಸ್ಟರ್ ಆಗಿ ಬನ್ನಿ
ಕೆಂಚವೀರಪ್ಪಗೆ ಪತಂಜಲಿಯಿಂದ ಸನ್ಮಾನ