ಮಾದಕ ವಸ್ತು ಮುಕ್ತ ಜಿಲ್ಲೆ ಜಾಗೃತಿ ಉಪನ್ಯಾಸ

KannadaprabhaNewsNetwork |  
Published : May 01, 2026, 02:15 AM IST
 | Kannada Prabha

ಸಾರಾಂಶ

ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ಕಾಲೇಜ್ ಮಡಿಕೇರಿ ಎನ್ ಎಸ್ ಎಸ್ ಘಟಕಗಳು ಸಂಯುಕ್ತವಾಗಿ “ಮಾದಕ ವಸ್ತು ದುರುಪಯೋಗ ಮತ್ತು ಮಾದಕ ವಸ್ತು ಮುಕ್ತ ಜಿಲ್ಲೆ” ಕುರಿತು ಜಾಗೃತಿ ಉಪನ್ಯಾಸವನ್ನು ಆಯೋಜಿಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ಕಾಲೇಜ್ ಮಡಿಕೇರಿ ಎನ್ ಎಸ್ ಎಸ್ ಘಟಕಗಳು ಸಂಯುಕ್ತವಾಗಿ “ಮಾದಕ ವಸ್ತು ದುರುಪಯೋಗ ಮತ್ತು ಮಾದಕ ವಸ್ತು ಮುಕ್ತ ಜಿಲ್ಲೆ” ಕುರಿತು ಜಾಗೃತಿ ಉಪನ್ಯಾಸವನ್ನು ಆಯೋಜಿಸಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವೃತ್ತ ನಿರೀಕ್ಷಕರಾದ ಪಿ.ಕೆ. ರಾಜು ಅವರು ಭಾಗವಹಿಸಿ, ಯುವಕರಲ್ಲಿ ಹೆಚ್ಚುತ್ತಿರುವ ಮದ್ಯ/ಮಾದಕ ವಸ್ತುಗಳ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದಾದ ವಿವಿಧ ಸಹಾಯವಾಣಿ ಸಂಖ್ಯೆಗಳನ್ನು ಹಾಗೂ ಕೆಎಸ್‌ಪಿ ಆಪ್ ಸಂಬಂಧಿತ ಮಾಹಿತಿಯನ್ನು ನೀಡಿದರು.

ಅದೇ ಸಂದರ್ಭದಲ್ಲಿ “ಸಮ್ಮಿತ್ರಾ ಆಪ್” ಕುರಿತು ಮಾಹಿತಿ ನೀಡಿ, ಮಾದಕ ವಸ್ತುಗಳನ್ನು ದುರುಪಯೋಗಪಡಿಸುವವರ ಬಗ್ಗೆ ವಿವರಗಳನ್ನು ನೀಡುವ ಮೂಲಕ ಸಮಾಜದಲ್ಲಿ ಈ ಸಮಸ್ಯೆಯನ್ನು ನಿರ್ಮೂಲಗೊಳಿಸಲು ವಿದ್ಯಾರ್ಥಿಗಳು ಸಹಕರಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೇಜರ್ ಪ್ರೊ. ರಾಘವ ಬಿ. ಅವರು ಮಾತನಾಡಿ, ನಮ್ಮ ಜಿಲ್ಲೆಯನ್ನು ಡ್ರಗ್ ಮುಕ್ತ ಜಿಲ್ಲೆಯಾಗಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಡ್ರಗ್ ಬಳಕೆದಾರರು ಹಾಗೂ ಸರಬರಾಜು ಮಾಡುವವರ ಕುರಿತು ತಿಳಿದುಬಂದಲ್ಲಿ ಪೊಲೀಸ್ ಅಥವಾ ಪೋಷಕರು ಅಥವಾ ಬೋಧಕ ರಿಗೆ ಮಾಹಿತಿ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ಕಾರ್ಯಕ್ರಮದ ವೇಳೆ ಮುಖ್ಯ ಅತಿಥಿ ಪಿ ಕೆ ರಾಜು ಅವರು “ವ್ಯಸನದಿಂದ ದೂರವಿರಿ, ಜೀವನವನ್ನು ಆನಂದಿಸಿ ಪ್ರತಿಜ್ಞೆಯನ್ನು” ಎಂಬ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳಿಂದ ಸ್ವೀಕರಿಸಿದರು.ಎಂ ಡಿ ಗಣೇಶ್ , ಎಎಸ್‌ಐ ಹಾಜರಿದ್ದರು.

ಡಾ. ಪ್ರದೀಪ್ ಆರ್. ಭಂಡಾರಿ ಸ್ವಾಗತಿಸಿದರು. ಹಾಗೂ ಧನ್ಯವಾದಗಳನ್ನು ಎನ್ ಎಸ್ ಎಸ್ ಅಧಿಕಾರಿ ಆಲೋಕ್ ಬೆಜೈ ಅವರು ಸಲ್ಲಿಸಿದರು. ಡಾ. ಶೈಲಶ್ರೀ ಕೆ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಶಿಷ್ಯ ಸಂಬಂಧ ಕೃಷ್ಣಾರ್ಜುನರಂತಿರಲಿ: ಡಾ.ಶ್ರೀಧರ ಪೈ
ಆರೋಗ್ಯ ಇಲಾಖೆಗೆ ಕೆಬಿಎಲ್‌ 3 ವಾಹನ ಹಸ್ತಾಂತರ