ಅಂಕೋಲಾದಲ್ಲಿ ₹16 ಲಕ್ಷ ಮೌಲ್ಯದ ಮಾದಕ ವಸ್ತು ನಾಶ

KannadaprabhaNewsNetwork |  
Published : Feb 10, 2024, 01:49 AM IST
ಉಕ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಶಪಡಿಸಿಕೊಂಡಿದ್ದ ಮಾಧಕ ವಸ್ತುಗಳನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ವಿಷ್ಣುವರ್ಧನ ಅವರ ನೇತ್ರತ್ವದಲ್ಲಿ ಸುಟ್ಟು ನಾಶಪಡಿಸಲಾಯಿತು. | Kannada Prabha

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಶುಕ್ರವಾರ ನಾಶಪಡಿಸಲಾಯಿತು. ಒಟ್ಟೂ ₹15.162 ಲಕ್ಷ ಮೌಲ್ಯದ 16 ಕೆಜಿ 295 ಗ್ರಾಂ 495 ಮಿ.ಗ್ರಾಂ ಮಾದಕ ದ್ರವ್ಯ ನಾಶಪಡಿಸಿದರು.

ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಶುಕ್ರವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ ನೇತೃತ್ವದಲ್ಲಿ ನಾಶಪಡಿಸಲಾಯಿತು. ಒಟ್ಟೂ ₹15.162 ಲಕ್ಷ ಮೌಲ್ಯದ 16 ಕೆಜಿ 295 ಗ್ರಾಂ 495 ಮಿ.ಗ್ರಾಂ ಮಾದಕ ದ್ರವ್ಯ ನಾಶಪಡಿಸಿದರು.

ಸುಪ್ರೀಂಕೋರ್ಟ್ ಆದೇಶದಂತೆ ವಶಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ಪೊಲೀಸ್ ಅಧೀಕ್ಷಕರು ಹಾಗೂ ಉತ್ತರ ಕನ್ನಡ ಮಾದಕ ವಸ್ತು ವಿಲೇವಾರಿ ಸಮಿತಿ ಮತ್ತು ಪಂಚರ ಸಮಕ್ಷಮ ಅಂಕೋಲಾ ತಾಲೂಕಿನ ಬೊಗ್ರಿಬೈಲನ ಕೆನರಾ ಐಎಂಎ (ಯು.ಕೆ) ಕಾನ್ ಟ್ರೀಟ್‌ಮೆಂಟ್ ಫೆಸಿಲಿಟಿರವರ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಯಿತು.ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿನ ಒಟ್ಟು 34 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 14 ಕೆಜಿ 221 ಗ್ರಾಂ ಗಾಂಜಾ ಹಾಗೂ 1 ಕೆಜಿ 501 ಗ್ರಾಂ ನಷ್ಟು ಚರಸ್ ಹಾಗೂ 573 ಗ್ರಾಂನ 48 ಗಾಂಜಾ ಗಿಡ ( ಒಟ್ಟು ಮೌಲ್ಯ ₹15.16200 ಲಕ್ಷ ) ಮೌಲ್ಯದ ಮಾದಕ ವಸ್ತುಗಳನ್ನು ನಿಯಮಾನುಸಾರ ಸುಡಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಮಾತನಾಡಿ, ಸುಪ್ರೀಂಕೋರ್ಟ್‌ ಆದೇಶದಂತೆ ನಿಯಮಾನುಸಾರ ಒಟ್ಟು 34 ಪ್ರಕರಣಗಳಲ್ಲಿನ ಮಾದಕ ದ್ರವ್ಯ ನಾಶಪಡಿಸಲಾಗಿದೆ. ಜಿಲ್ಲೆಯನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಮಾದಕ ವಸ್ತು ಮಾರಾಟ ಮಾಡುವುದಾಗಲಿ ಅಥವಾ ಸೇವಿಸುತ್ತಿರುವ ಬಗ್ಗೆ ಕಂಡು ಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರವಂತಾಗಬೇಕು. ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನದ ಜತೆಗೆ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ. ಜಗದೀಶ, ಕುಮಟಾ ವಿಭಾಗದ ಡಿವೈಎಸ್ಪಿ ವೆಲೈಂಟನ್ ಡಿಸೋಜಾ, ಶಿರಶಿ ವಿಭಾಗದ ಡಿವೈಎಸ್ಪಿ ಕೆ.ಎಲ್. ಗಣೇಶ, ಭಟ್ಕಳ ವಿಭಾಗದ ಡಿವೈಎಸ್ಪಿ ಮಹೇಶ ಎಂ.ಕೆ, ಅಂಕೋಲಾ ಸಿಪಿಐ ಶ್ರೀಕಾಂತ ತೋಟಗಿ, ವಿಲೇವಾರಿ ಘಟಕದ ವ್ಯವಸ್ಥಾಪಕ ಪ್ರವೀಣ ಕಾಂಬ್ಳೆ, ಮೇಲ್ವಿಚಾರಕ ಪ್ರಸನ್ನಾ ನಾಯಕ, ಆಪರೇಟರ್ ನಾಗರಾಜ್ ನಾಯ್ಕ, ಘಟಕದ ನಿಲೇಶ ನಾಯಕ ಸೇರಿದಂತೆ ಜಿಲ್ಲೆಯ ಪೊಲೀಸ್ ನೀರಿಕ್ಷಕರು, ಉಪ ನಿರೀಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

PREV