ರಸ್ತೆ ಬದಿ, ಖಾಲಿ ನಿವೇಶನ ಆವರಿಸುವ ಖಾಲಿ ಬಾಟಲಿ, ಪ್ಲಾಸ್ಟಿಕ್ ಕವರ್ ರಾಶಿಗಳು
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಸ್ವಚ್ಛತೆಗೆ ಹೆಸರಾದ ನರಸಿಂಹರಾಜಪುರ ಪಟ್ಟಣದ ಕೆಲವು ವಾರ್ಡುಗಳ ರಸ್ತೆಗಳ ಬದಿ, ಖಾಲಿ ನಿವೇಶನಗಳಲ್ಲಿ ಕುಡುಕರು ಖಾಲಿ ಬಾಟಲಿ, ಪ್ಲಾಸ್ಟಿಕ್ ಕವರ್ ಹಾಕಿ ನಗರದ ಅಂದವನ್ನು ಕೆಡಿಸುತ್ತಿದ್ದಾರೆ. ಪಟ್ಟಣದಲ್ಲಿ ಪ್ರತಿ ನಿತ್ಯ ಬೆಳಗಿನಜಾವ ಪೌರ ಕಾರ್ಮಿಕರು ಬಸ್ಸು ನಿಲ್ದಾಣದಿಂದ ಹಿಡಿದು 11 ವಾರ್ಡುಗಳಲ್ಲೂ ಸಂಚರಿಸುತ್ತಾ ರಸ್ತೆ, ಚರಂಡಿಗಳನ್ನು ಸ್ವಚ್ಛ ಗೊಳಿಸಿದರೂ ಇದಾವುದರ ಪರಿವೇ ಇಲ್ಲದೆ ರಾತ್ರಿಯಾಗುತ್ತಿದ್ದಂತೆ ಕತ್ತಲೆ ಪ್ರದೇಶ ಹುಡುಕಿ ಕುಡಿದು ಬಾಟಲಿಗಳನ್ನು ರಸ್ತೆ ಬದಿ ಹಾಕುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿಯಾಗಿ ಸ್ವಚ್ಛತೆ ಧಕ್ಕೆ ಯಾಗಿದೆ.ಇತ್ತ ಪೌರ ಕಾರ್ಮಿಕರ ನಿರಂತರ ಸ್ವಚ್ಛತಾ ಕಾರ್ಯಕ್ಕೂ ಬೆಲೆ ಇಲ್ಲದೆ ರಸ್ತೆ ಬದಿಯಲ್ಲಿ ಮತ್ತೆ ಬಾಟಲಿ, ಪ್ಲಾಸ್ಟಿಕ್ ರಾಶಿ ಬೀಳುತ್ತದೆ. ಜತೆಗೆ ಕೆಲವು ಕುಡುಕರು ಬಾಟಲಿಗಳನ್ನು ಒಡೆದು ರಸ್ತೆ ಬದಿ ಹಾಕುತ್ತಿರುವುದು ತೀವ್ರ ತೊಂದರೆ ಉಂಟುಮಾಡಿದೆ. ಅದರಲ್ಲೂ ಹಳೇ ಪೋಸ್ಟ್ ಆಫೀಸ್ ರಸ್ತೆಯಿಂದ ಮುಖ್ಯರಸ್ತೆಗೆ ಬರುವ ಬೈಪಾಸ್ ರಸ್ತೆ ಬದಿ ಬಾಟಲಿ, ಪ್ಲಾಸ್ಟಿಕ್ ರಾಶಿಯೇ ಬಿದ್ದಿದೆ. ಪಕ್ಕದಲ್ಲಿ ಇರುವ ಖಾಸಗಿಯವರ ಖಾಲಿ ನಿವೇಶನದಲ್ಲೂ ಸಹ ಖಾಲಿ ಬಾಟಲಿಗಳು, ಕಸದ ರಾಶಿ ಬಿದ್ದಿದ್ದು ಸಮೀಪದ ನಿವಾಸಿಗಳಿಗೆ ದುರ್ವಾಸನೆ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.
ಹಳೇ ಪೋಸ್ಟ್ ಆಫೀಸ್ ರಸ್ತೆಯಿಂದ ಮುಖ್ಯ ರಸ್ತೆಯ ಲಿಂಕ್ ರಸ್ತೆಯಲ್ಲಿ ಬೀದಿ ದೀಪ ಇಲ್ಲ. ಇದರಿಂದ ಕುಡುಕರು ರಾತ್ರಿ ಮದ್ಯಪಾನ ಮಾಡಿ ಬಾಟಲಿಯನ್ನು ರಸ್ತೆ ಬದಿ ಹಾಕುತ್ತಾರೆ. ಸಂಜೆ ಮಹಿಳೆಯರು ಈ ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾಗುತ್ತದೆ. ಕೆಲವರು ಬೆಳಿಗ್ಗೆ 7 ರಿಂದ 8 ರವರೆಗೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡಬೇಕು.
-- ಕೋಟ್ --
ಪ್ರಶಾಂತಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ,