- ನೀತಿಗೆರೆಯಲ್ಲಿ ಸೋಯಾಬಿನ್ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಸೋಯಾಬಿನ್ ಬೆಳೆಯು ನವೀನ ತಳಿಯಾದ ಡಿ.ಎಸ್.ಬಿ-34 ರೈತರಿಗೆ ವರದಾನವಾಗಿದೆ. ಈ ಬೆಳೆ ಬಗ್ಗೆ ರೈತರಿಗೆ ಹೆಚ್ಚು ಆಸಕ್ತಿ ಮೂಡಿದೆ. 90 ದಿವಸಗಳಲ್ಲಿ ಕಟಾವಿಗೆ ಬರುವುದರಿಂದ ಪ್ರತಿ ಎಕರೆಗೆ 7ರಿಂದ 8 ಕ್ವಿಂಟಲ್ ಇಳುವರಿ ದೊರೆಯುವುದು. ಆದ್ದರಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸುವಂತಹ ಸೋಯಾಬಿನ್ ಬೆಳೆ ಬೆಳೆದು ಆರ್ಥಿಕ ಸಬಲತೆ ಸಾಧಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಹೇಳಿದರು.ಶುಕ್ರವಾರ ತಾಲೂಕಿನ ನೀತಿಗೆರೆಯಲ್ಲಿ ಎಣ್ಣೆಕಾಳು ಬೆಳೆ ಸೋಯಾಬಿನ್ ಬೆಳೆ ಕ್ಷೇತ್ರೋತ್ಸವ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮೆಕ್ಕೆಜೋಳಕ್ಕೆ ಪರ್ಯಾಯ ಬೆಳೆಯಾಗಿ ಸೋಯಾಬಿನ್ ಬೆಳೆ ಉತ್ತಮವಾದ ಬೆಲೆ ನೀಡುವಂತಹ ಬೆಳೆಯಾಗಿದೆ ಎಂದರು.
ಪ್ರಗತಿಪರ ಕೃಷಿಕ ರುದ್ರೇಶ್ ಮಾತನಾಡಿ, ಸೋಯಾಬಿನ್ ಬೆಳೆ 1 ಎಕರೆ ಪ್ರದೇಶದಲ್ಲಿ ಬೆಳೆದಿದ್ದು ಬಿತ್ತನೆ, ಗೊಬ್ಬರ ಮತ್ತು ಕಳೆ ನಿರ್ವಹಣೆ, ಕಟಾವಿನ ಖರ್ಚು ಸೇರಿ 1 ಎಕರೆಗೆ ₹10ರಿಂದ ₹12 ಸಾವಿರ ಖರ್ಚು ಬರುತ್ತದೆ. 8ರಿಂದ 10 ಕ್ವಿಂ. ಇಳುವರಿ ಪಡೆದಿದ್ದು, 1 ಕ್ವಿಂ.ಗೆ ₹4ರಿಂದ ₹5 ಸಾವಿರ ಮಾರುಕಟ್ಟೆ ಬೆಲೆ ಇದೆ ಎಂದು ತಿಳಿಸಿದರು.ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ.ಸುಪ್ರೀಯ ಪಾಟೀಲ್ ಮಾತನಾಡಿ, ಸೋಯಾಬಿನ್ ಬೆಳೆಯ ಮೌಲ್ಯವರ್ಧನೆ ಹಾಗೂ ಆರೋಗ್ಯದ ಮೇಲಾಗುವ ಪರಿಣಾಮ ವಿಚಾರವಾಗಿ ಮಾತನಾಡಿದರು.
ಹೊನ್ನಾಳಿಯ ಕೃಷಿ ಉಪನಿರ್ದೇಶಕ ರೇವಣಸಿದ್ದನಗೌಡ, ಕೃಷಿ ಅಧಿಕಾರಿ ಕುಮಾರ್, ಗ್ರಾಪಂ ಸದಸ್ಯರಾದ ಕುಬೇಂದ್ರಪ್ಪ, ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಗ್ರಾಮದ ಮುಖಂಡ ಚಂದ್ರಪ್ಪ ವಹಿಸಿದ್ದರು. ಕ್ಷೇತ್ರೋತ್ಸವ ಅಂಗವಾಗಿ ರೈತ ಮಹಿಳೆಯರು ಮಾಡಿದ ಕೃಷಿ ಉಪ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.ಕಾರ್ಯಕ್ರಮದಲ್ಲಿ ಸುತ್ತಮುತ್ತಲ ಗ್ರಾಮಗಳಾದ ನೀತಿಗೆರೆ, ನುಗ್ಗಿಹಳ್ಳಿ, ಬೊಮ್ಮೇನಹಳ್ಳಿ, ಹೊನ್ನೆಮರದ ಹಳ್ಳಿ ಗ್ರಾಮದ ರೈತರು ಕೃಷಿ ಸಖಿಯರು, ಪಶುಸಖಿಯರು, ಪ್ರಗತಿಪರ ರೈತ ಮಹಿಳೆಯರು ಭಾಗವಹಿಸಿದ್ದರು.
- - --19ಕೆಸಿಎನ್ಜಿ3:
ಸಮಾರಂಭವನ್ನು ಕೃಷಿ ವಿಜ್ಞಾನ ಕೇಂದ್ರ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಉದ್ಘಾಟಿಸಿದರು.