ದುಬಾರೆ ಶಿಬಿರ: ಎರಡು ಸಾಕು ಆನೆಗಳ ಭೀಕರ ಕಾದಾಟ! ಶಿಬಿರದಲ್ಲಿ ಹೆಣ್ಣಾನೆಗಳ ಕೊರತೆ ಕಾರಣ

KannadaprabhaNewsNetwork |  
Published : Oct 24, 2024, 12:32 AM ISTUpdated : Oct 24, 2024, 10:47 AM IST
ಆನೆಗಳ ನಡುವೆ ಭೀಕರ ಕಾದಾಟ | Kannada Prabha

ಸಾರಾಂಶ

ಕುಶಾಲನಗರ ತಾಲೂಕು ನಂಜರಾಯಪಟ್ಟಣ ಗ್ರಾಮ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಬುಧವಾರ ಆನೆಗಳ ನಡುವೆ ಭೀಕರ ಕಾದಾಟ ನಡೆದಿದೆ. ಇಲ್ಲಿನ ಧನಂಜಯ ಆನೆ ಏಕಾಏಕಿ ಕಂಜನ್ ಎಂಬ ಆನೆ ಮೇಲೆ ದಾಳಿ ಮಾಡಿದೆ. ದಾಳಿ ಹಿನ್ನೆಲೆಯಲ್ಲಿ ಕಂಜನ್ ಆನೆಗೆ ಸಣ್ಣಪುಟ್ಟ ಗಾಯಗಳು ಉಂಟಾಗಿವೆ.

 ಕುಶಾಲನಗರ : ಕುಶಾಲನಗರ ತಾಲೂಕು ನಂಜರಾಯಪಟ್ಟಣ ಗ್ರಾಮ ಸಮೀಪದ ದುಬಾರೆ ಸಾಕಾನೆ ಶಿಬಿರದಲ್ಲಿ ಬುಧವಾರ ಆನೆಗಳ ನಡುವೆ ಭೀಕರ ಕಾದಾಟ ನಡೆದಿದೆ. ಇಲ್ಲಿನ ಧನಂಜಯ ಆನೆ ಏಕಾಏಕಿ ಕಂಜನ್ ಎಂಬ ಆನೆ ಮೇಲೆ ದಾಳಿ ಮಾಡಿದೆ.

ದಾಳಿ ಹಿನ್ನೆಲೆಯಲ್ಲಿ ಕಂಜನ್ ಆನೆಗೆ ಸಣ್ಣಪುಟ್ಟ ಗಾಯಗಳು ಉಂಟಾಗಿವೆ. ಶಿಬಿರದಲ್ಲಿ ಆನೆಗಳು ಕಾಡಿನಿಂದ ಮರಳಿದ ನಂತರ ಕಾವಾಡಿಗರು ಆಹಾರ ನೀಡಿದ್ದಾರೆ.

ಇದೆ ವೇಳೆ ಧನಂಜಯ ಏಕಾಏಕಿ ಕಂಜನ್ ಮೇಲೆ ಕಾದಾಟಕ್ಕೆ ಇಳಿದಿದೆ. ಧನಂಜಯ್ ಮಾವುತ ಮತ್ತು ಕಂಜನ್ ಆನೆಯ ಸಿಬ್ಬಂದಿ ಧನಂಜಯ್ ಆನೆಯನ್ನು ಸಮಾಧಾನ ಪಡಿಸಲು ಶತ ಪ್ರಯತ್ನ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ.

ಕಂಜನ್ ಆನೆಗೆ ಧನಂಜಯ್ ಆನೆಯ ಸೊಂಡಿಲಿನಿಂದ ಸತತವಾಗಿ ದಾಳಿ ನಡೆಸಿದೆ. ದಸರಾಕ್ಕೂ ಮುನ್ನ ಮೈಸೂರಿನಲ್ಲೂ ಈ ಆನೆಗಳೂ ಕಾದಾಟ ನಡೆಸಿದ್ದವು.

ಧನಂಜಯ್ ಆನೆಗೆ ಮದ ಏರಿದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಶಿಬಿರ ಉಸ್ತುವಾರಿ ಅಧಿಕಾರಿ ಉಮಾಶಂಕರ್ ತೀಳಿಸಿದ್ದಾರೆ.

ಈ ರೀತಿಯ ಘಟನೆಗಳು ಶಿಬಿರದಲ್ಲಿ ಸಾಮಾನ್ಯ ಎಂದು ತಿಳಿಸಿರುವ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಶಿಬಿರದಲ್ಲಿ ಹೆಣ್ಣಾನೆಗಳ ಕೊರತೆ ಇರುವುದು ಕೂಡ ಗಂಡಾನೆಗಳ ವರ್ತನೆಗೆ ಕಾರಣ ಎಂದು ಹೇಳಿದ್ದಾರೆ 

ಅರಣ್ಯದ ಬೆಟ್ಟದ ಅಂಚಿನಲ್ಲಿ ಕ್ಯಾಮರಾ ಕಣ್ಗಾವಲು

ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯ ದೇವನೂರು ಗ್ರಾಮದಲ್ಲಿ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯ ಸೆರೆಗೆ ನಡೆಸುತ್ತಿರುವ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಹುಲಿಯ ಸುಳಿವು ಪತ್ತೆಯಾಗಿಲ್ಲ.

ಅತ್ತ ಶ್ರೀಮಂಗಲ ವ್ಯಾಪ್ತಿಯಲ್ಲಿ ಹುಲಿ ಮತ್ತೆ ಗ್ರಾಮಕ್ಕೆ ನುಸುಳುವ ಸುಳಿವು ಅರಿಯಲು ಬ್ರಹ್ಮಗಿರಿ ಅರಣ್ಯದ ಬೆಟ್ಟದ ಅಂಚಿನಲ್ಲಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಉಭಯ ಸ್ಥಳಗಳಿಗೆ ಶನಿವಾರ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದೇವನೂರು ವ್ಯಾಪ್ತಿಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಮೃಗಾಲಯ ಅಭಿಮನ್ಯು ಮತ್ತು ಅಶೋಕ ಎಂಬ ಎರಡು ಸಾಕಾನೆಗಳನ್ನು ಮತ್ತು 25ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಬಳಸಿಕೊಂಡು ಆನೆ ಚೌಕೂರು ವಲಯ ಅರಣ್ಯ ಅಧಿಕಾರಿ ದೇವರಾಜ್ ಅವರ ನೇತೃತ್ವದಲ್ಲಿ ಎರಡನೇ ದಿನದ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಭೇಟಿ ನೀಡಿ ಕೂಂಬಿಂಗ್ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭ ಮಾತನಾಡಿದ ಅವರು, ಈಗಾಗಲೇ ಈ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿಯನ್ನು ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾ ಟ್ರ್ಯಾಪ್ ನಲ್ಲಿ ಚಹರೆ ಪತ್ತೆಯಾಗಿದ್ದು, ಇದನ್ನು ನಾಗರಹೊಳೆ ‘‘ಯು 61 ಗಂಡು ಗ ಹುಲಿ”ಯೆಂದು ಗುರುತಿಸಲಾಗಿದೆ. ಹುಲಿಯ ಸುಳಿವು ದೊರೆಯುವವರೆಗೂ ಕಾರ್ಯಾಚರಣೆ ನಡೆಸಲಾಗುವುದು. ಮೊದಲ ಆದ್ಯತೆಯಾಗಿ ಅರಣ್ಯಕ್ಕೆ ಹುಲಿಯನ್ನು ಹಿಂತಿರುಗಿಸುವುದು ಹಾಗೂ ಕಾರ್ಯಾಚರಣೆಯ ಎರಡನೇ ಭಾಗವಾಗಿ ಹುಲಿಯನ್ನು ಬೋನು ಅಥವಾ ಅರವಳಿಕೆ ಮೂಲಕ ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿಸಿದರು.

PREV