)
ಕನ್ನಡಪ್ರಭ ವಾರ್ತೆ ಬೆಂಗಳೂರು
ಐದು ವರ್ಷದ ಪಶು ವಿಜ್ಞಾನ ಪದವಿಯಲ್ಲಿ ಅನುತ್ತೀರ್ಣಗೊಂಡು ಪೂರಕ ಪರೀಕ್ಷೆಗಳಲ್ಲಿ ತಿಣುಕಾಡಿ ಕೆಲವರು ಉತ್ತೀರ್ಣರಾಗಿದ್ದರು. ಆದರೆ ಪಶುವೈದ್ಯಾಧಿಕಾರಿಗಳ ಹುದ್ದೆ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಮಾತ್ರ ಟಾಪರ್ಸ್‌ಗಳಾಗಿ ಆಯ್ಕೆಯಾಗಿರುವುದು ತೀವ್ರ ಶಂಕೆಗೆ ಕಾರಣವಾಗಿದೆ. ಈ ಶಂಕೆಯೇ ನೇಮಕಾತಿ ಭಾನಗಡಿ ಹೊರಬರಲು ಎಡೆ ಮಾಡಿಕೊಟ್ಟಿದೆ ಎನ್ನಲಾಗಿದೆ. ಈ ಶಂಕಾಸ್ಪದ ಕೆಲ ವಿದ್ಯಾರ್ಥಿಗಳ ವಿವರ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.
ಟಾಪರ್ಸ್‌ಗಳಲ್ಲಿ ಸಂಬಂಧಿಕರೇ ಹೆಚ್ಚು:ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಬಹುತೇಕರು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಸಂಬಂಧಿಕರಾಗಿರುವ ಅಭ್ಯರ್ಥಿಗಳೇ ಉತ್ತೀರ್ಣರಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಆಯ್ಕೆಯಾದವರ ಪಟ್ಟಿ ಜಾಲಾಡಿದಾಗ ಸಿಐಡಿಗೆ ಕೆಲವು ಪುರಾವೆ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಈ ಅನುಮಾನ ಪುಷ್ಟಿಕರಿಸುವಂತೆ ಏಳು ಅಭ್ಯರ್ಥಿಗಳು ಪದವಿಯಲ್ಲಿ ಸಾಧಾರಣ ಸಾಧನೆ ಮಾಡಿದ್ದಾರೆ. ಅಲ್ಲದೆ ಕೆಲವರು ಎರಡು ಬಾರಿ, ಮತ್ತೆ ಮೂರು ಬಾರಿ ಪದವಿಯಲ್ಲಿ ಫೇಲ್ ಆಗಿ ಪೂರಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆದರೆ ಕೆಪಿಎಸ್‌ಸಿ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಭರ್ಜರಿ 450ಕ್ಕಿಂತ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಭಾರೀ ಅನುಮಾನಕ್ಕೆ ಗ್ರಾಸವಾಗಿದೆ.-ಬಾಕ್ಸ್-
1.ಎರಡು ಬಾರಿ468.75
3ಐದು ಬಾರಿ411.75
5. ಎರಡು ಬಾರಿ466.50
7. ಒಂದು ಬಾರಿ454.500