ಮತದಾರರ ಪರಿಷ್ಕರಣೆ ವೇಳೆ ಡುಪ್ಲಿಕೇಟ್‌, ಮೃತರ ಹೆಸರು ಡಿಲಿಟ್

KannadaprabhaNewsNetwork |  
Published : Jun 05, 2026, 02:30 AM IST
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಮಾತನಾಡಿದರು. | Kannada Prabha

ಸಾರಾಂಶ

ಜನಗಣತಿಗೆ ನೇಮಕವಾದ ಅಧಿಕಾರಿಗಳು ಮತ್ತು ಸಿಬ್ಬಂದಿಯು 2002ರ ಮತ್ತು 2025ರ ಈ ಎರಡು ಮತದಾರರ ಪಟ್ಟಿಗಳನ್ನು ಇಟ್ಟುಕೊಂಡು ಮ್ಯಾಪಿಂಗ್ ಕಾರ್ಯ ಮಾಡುತ್ತಿದ್ದಾರೆ

ಕೊಪ್ಪಳ: ಒಂದೇ ಹೆಸರು ಎರಡು ಕ್ಷೇತ್ರಗಳಲ್ಲಿ ಇದ್ದರೆ, ನಿಧನದ ನಂತರವೂ ಹೆಸರು ಇರುವುದನ್ನು ಮತದಾರರ ಪರಿಷ್ಕರಣೆಯ ವೇಳೆಯಲ್ಲಿ ಪತ್ತೆ ಮಾಡಿ, ಸರಿಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದ್ದಾರೆ.

ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿ, ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ಕೆ ವೇಳಾಪಟ್ಟಿ ನಿಗದಿಪಡಿಸಿದೆ. ದೇಶದಲ್ಲಿ 2002ರಲ್ಲಿ ಈ ಹಿಂದೆ ಎಸ್.ಐ.ಆರ್. ಆಗಿತ್ತು. 2025ರ ಮತದಾರರ ಪಟ್ಟಿಯಲ್ಲಿ ಇರುವವರು 2010 ಮತದಾರರ ಪಟ್ಟಿಯಲ್ಲಿ ಎಲ್ಲಿದ್ದರು ಎಂದು ಈಗ ಮ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಹೇಳಿದರು.

ಜನಗಣತಿಗೆ ನೇಮಕವಾದ ಅಧಿಕಾರಿಗಳು ಮತ್ತು ಸಿಬ್ಬಂದಿಯು 2002ರ ಮತ್ತು 2025ರ ಈ ಎರಡು ಮತದಾರರ ಪಟ್ಟಿಗಳನ್ನು ಇಟ್ಟುಕೊಂಡು ಮ್ಯಾಪಿಂಗ್ ಕಾರ್ಯ ಮಾಡುತ್ತಿದ್ದಾರೆ. ಜೂ. 30ರಿಂದ ಒಂದು ತಿಂಗಳ ಕಾಲ ಬಿ.ಎಲ್.ಒ. ಮನೆಮನೆಗೆ ಭೇಟಿ ಕೊಡುತ್ತಾರೆ. ಮ್ಯಾಪಿಂಗ್ ಮಾಡಿದ ಎಲ್ಲರಿಗೂ ಜನಗಣತಿ ಫಾರ್ಮ ಕೊಡಲಾಗುತ್ತದೆ. ಬಿಎಲ್‌ಒಗಳು ಮತದಾರರಿಗೆ ಗೈಡ್ ಮಾಡಿ, ಜನಗಣತಿ ಫಾರ್ಮ್‌ ತುಂಬಿಸುತ್ತಾರೆ. ಗಣತಿ ವೇಳೆಯಲ್ಲಿ, ಮತದಾರರು ನಾನು ಯಾವುದೆ ದೇಶದಲ್ಲಿ ಪೌರತ್ವ ಹೊಂದಿಲ್ಲ. ನನ್ನ ಹೆಸರು ಒಂದೇ ಕಡೆ ಇದ್ದು ಬೇರೆಡೆ ಇಲ್ಲ ಎನ್ನುವಂತಹ ಡಿಕ್ಲರೇಶನ್‌ ನೀಡಬೇಕು ಎನ್ನುವಂತಹ ಮಾರ್ಗಸೂಚಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಯ ಈ ಸಂದರ್ಭದಲ್ಲಿ ಹೆಸರು ಸೇರಿಸಲು, ಹೆಸರು ತೆಗೆಯಲು ಮತ್ತು ಹೆಸರನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. ತೀರಿಕೊಂಡ ಅಥವಾ ಬೇರೆಡೆ ಸ್ಥಳಾಂತರವಾದ ಅಥವಾ ಡುಪ್ಲಿಕೇಟ್ ಮತದಾರರು ಯಾರು ಎಂಬುದನ್ನು ಪತ್ತೆ ಹಚ್ಚಿ ಮತದಾರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಈ ಪರಿಷ್ಕರಣಾ ಕಾರ್ಯದಲ್ಲಿ ರಾಜಕೀಯ ಪಕ್ಷಗಳಿಂದ ನೇಮಕಗೊಂಡ ಬಿ.ಎಲ್.ಎ.ಗಳು ಸಹ ಭಾಗಿಯಾಗುತ್ತಾರೆ ಎಂದರು.

ಕೊಪ್ಪಳ ಜಿಲ್ಲೆಯಲ್ಲಿ 2025 ಮತದಾರರ ಪಟ್ಟಿಯಲ್ಲಿ ಒಟ್ಟು 11,92,307 ಮತದಾರರ ಪೈಕಿ ಇದುವರೆಗೆ 11,34,937 ಮತದಾರರಿಗೆ ಈಗಾಗಲೇ ಮ್ಯಾಪಿಂಗ್ ಮಾಡಿದ್ದು, 57,370 ಮತದಾರರಿಗೆ ಮ್ಯಾಪಿಂಗ್ ಕಾರ್ಯ ಬಾಕಿ ಇದೆ ಎಂದು ಹೇಳಿದರು.

ಈ ವೇಳೆ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹಾಗೂ ಮಾಧ್ಯಮ ಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಥಿ ತಂದು ಕೊಟ್ಟಿದ್ದ ಮಾವಿನ ಹಣ್ಣು ಸೇವಿಸಿ ಇಬ್ಬರು ಬಾಲಕಿಯರು ಸಾವು!
ಮೆಡಿಕಲ್‌ ಸೀಟು ಶುಲ್ಕ ಈ ವರ್ಷ ಹೆಚ್ಚಿಸದಿರಲು ಸರ್ಕಾರ ನಿರ್ಧಾರ