ತಾಳಿಕೋಟೆಯಲ್ಲಿ ದುರ್ಗಾಮಾತಾ ದೌಡ ಸಂಭ್ರಮ

KannadaprabhaNewsNetwork |  
Published : Sep 24, 2025, 01:04 AM IST
ದುರ್ಗಾ | Kannada Prabha

ಸಾರಾಂಶ

ತಾಳಿಕೋಟೆ: ನವರಾತ್ರಿ ಅಂಗವಾಗಿ ದುರ್ಗಾ ಮಾತಾ ದೌಡ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ದುರ್ಗಾಮಾತಾ ದೌಡ ಸುಮಂಗಲೆಯರಿಂದ ಹಾಗೂ ಯುವಕರಿಂದ ಜರುಗಿತು. ಕಾರ್ಯಕ್ರಮದ ನಿಮಿತ್ತ ರಾಜವಾಡೆಯ ಶಿವಭವಾನಿ ಮಂದಿರದಿಂದ ಪ್ರಾರಂಭಗೊಂಡ ಭಗವಾಧ್ವಜ ಮೆರವಣಿಗೆಗೆ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಚಾಲನೆ ನೀಡಿದರು.

ತಾಳಿಕೋಟೆ: ನವರಾತ್ರಿ ಅಂಗವಾಗಿ ದುರ್ಗಾ ಮಾತಾ ದೌಡ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ದುರ್ಗಾಮಾತಾ ದೌಡ ಸುಮಂಗಲೆಯರಿಂದ ಹಾಗೂ ಯುವಕರಿಂದ ಜರುಗಿತು. ಕಾರ್ಯಕ್ರಮದ ನಿಮಿತ್ತ ರಾಜವಾಡೆಯ ಶಿವಭವಾನಿ ಮಂದಿರದಿಂದ ಪ್ರಾರಂಭಗೊಂಡ ಭಗವಾಧ್ವಜ ಮೆರವಣಿಗೆಗೆ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಚಾಲನೆ ನೀಡಿದರು.

ರಾಜವಾಡೆಯಿಂದ ಪ್ರಾರಂಭವಾದ ಪಥ ಸಂಚಲನವು ಕಾಮನಕಟ್ಟಿ ಬಡಾವಣೆ, ಖಾಸ್ಗತೇಶ್ವರ ಮಠದ ರಸ್ತೆ, ರಜಪೂತ ಗಲ್ಲಿದ ಮೂಲಕ ಸಾಗಿ ಮರಳಿ ಕತ್ರಿ ಭಜಾರ ಮಾರ್ಗವಾಗಿ ವಿಠ್ಠಲ ಮಂದಿರಕ್ಕೆ ಆಗಮಿಸಿತು. ಇಲ್ಲಿ ಸಾರ್ವಜನಿಕ ಸಭೆ ನಡೆಸಲಾಯಿತು.ಸಭೆಯಲ್ಲಿ ಯುವ ಮುಖಂಡರಾದ ರಾಘವೇಂದ್ರ ವಿಜಾಪೂರ ಮಹಾಂತೇಶ ಮುರಾಳ ಮಾತನಾಡಿದರು. ದುರ್ಗಾದೌಡ ಕಾರ್ಯಕ್ರಮದಲ್ಲಿ ರಜಪೂತ ಗಲ್ಲಿಯಲ್ಲಿ ಮತ್ತು ಅಂಬಾಭವಾನಿ ಮಂದಿರದ ಮುಂದೆ ಭಗವಾದ್ವಜಕ್ಕೆ ಆರುತಿ ಬೆಳಗಿ ಭವ್ಯ ಸ್ವಾಗತಿಸಲಾಯಿತು. ನೇತೃತ್ವವನ್ನು ರಾಘವೇಂದ್ರ ಮಾನೆ, ವಾಸುದೇವ ಹೆಬಸೂರ, ರವಿ ಚಂದೂಕರ, ಲಂಕೇಶ ಪಾಟೀಲ, ಯಲ್ಲೇಶ ದಾಯಪುಲೆ, ಪ್ರಮೋದ ಅಗರವಾಲಾ, ಮಾನಸಿಂಗ್ ಕೊಕಟನೂರ, ವಿಠ್ಠಲ ಮೋಹಿತೆ, ಜೈಸಿಂಗ್ ಮೂಲಿಮನಿ, ರಾಘು ಚವ್ಹಾಣ, ಮಂಜು ಶೆಟ್ಟಿ, ಸುರೇಶ ಹಜೇರಿ, ಸುದೀರ ದೇಶಪಾಂಡೆ, ತಮ್ಮಣ್ಣ ದೇಶಪಾಂಡೆ, ಹಾಗೂ ಸುವರ್ಣಾ ಬಿರಾದಾರ, ಗೀತಾಬಾಯಿ ಗೌಡಗೇರಿ, ಬೋರಮ್ಮ ಕುಂಬಾರ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಪಿಎಸ್‌ಐ ಜ್ಯೋತಿ ಖೋತ್ ನೇತೃತ್ವದಲ್ಲಿ ಬಂದೋಬಸ್ತ್‌ ಒದಗಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಅಕ್ರಮ ಮನೆಗಳ ತೆರವು ಎನ್‌ಐಎ ತನಿಖೆಗೆ ನೀಡಲು ಆಗ್ರಹ
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್