ಇಂದಿನಿಂದ 11ರವರೆಗೆ ದಶಮಾನೋತ್ಸವದ ದುರ್ಗಾಮಾತಾ ದೌಡ

KannadaprabhaNewsNetwork |  
Published : Oct 03, 2024, 01:19 AM IST
29ಬಿಎಲ್‌ಎಚ್6 | Kannada Prabha

ಸಾರಾಂಶ

ಹಿಂದೂ ಧರ್ಮದ ಅರಿವು ಮೂಡಿಸುತ್ತಾ ಧರ್ಮ, ಸಂಸ್ಕೃತಿ ಉಳಿವು, ಬೆಳವಣಿಗೆಗೆ ಒತ್ತು ನೀಡುವ ಮೂಲಕ ಸಮಾಜದ ಉದ್ಧಾರಕ್ಕಾಗಿ ಶ್ರಮಸುತ್ತಿರುವ ವಿಶ್ವಹಿಂದೂ ಪರಿಷತ್ ಸಂಘಟಣೆಗೆ 60 ವರ್ಷ ತುಂಬಿ ಷಷ್ಠಬ್ಧಿ ಸಂಭ್ರಮದಲ್ಲಿರುವ ಹಿನ್ನೆಲೆಯಲ್ಲಿ ಭಜರಂಗದಳ ಸಂಘಟಣೆಯೊಂದಿಗೆ ಪಟ್ಟಣದಲ್ಲಿ 10 ವರ್ಷದ ದಶಮಾನೋತ್ಸವದ ದುರ್ಗಾಮಾತಾ ದೌಡ ಕಾರ್ಯಕ್ರಮವನ್ನು ಅ.3 ರಿಂದ 11 ರವರೆಗೆ 9 ದಿನಗಳ ಕಾಲ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ ಜಿಲ್ಲಾಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅ.3 ರಂದು ಜವಳಿಖೂಟದಲ್ಲಿರುವ ಗ್ರಾಮದೇವಿ ದೇವಸ್ಥಾನದಲ್ಲಿ ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ ಕಾರ್ಯಕ್ರಮ ಉದ್ಘಾಟಿಸಿ, ಚಾಲನೆ ನೀಡಲಿದ್ದಾರೆ. ದೌಡ ಅಂಬೇಡ್ಕರ್‌ ನಗರದ ಗಾಳಿ ದುರ್ಗಾದೇವಿ ದೇವಸ್ಥಾನ ತಲುಪುವುದು. ಅ.4 ರಂದು ಗಾಳಿ ದುರ್ಗಾದೇವಿ ದೇವಸ್ಥಾನದಿಂದ ಇಂದಿರಾನಗರದ ಶಕ್ತಿದೇವಿ ದೇವಸ್ಥಾನ ತಲುಪುವುದು. ಅ.5 ರಂದು ಶಕ್ತಿ ದೇವಸ್ಥಾನದಿಂದ ಗೊಂಬಿಗುಡಿ ಹತ್ತಿರದ ಕಲ್ಲದೇಮವ್ವನ ದೇವಸ್ಥಾನ ತಲುಪುವುದು. ಅ.6 ರಂದು ಕಲ್ಲದೇಮವ್ವನ ದೇವಸ್ಥಾನ ದಿಂದ ವಾಸನಖೂಟದ ಕರೆಮ್ಮನ ದೇವಸ್ಥಾನ ತಲುಪುವುದು. ಅ.7 ರಂದು ಕರೆಮ್ಮನ ದೇವಸ್ಥಾನದಿಂದ ಬಸವನಗರದ ಅನ್ನಪೂಣೇಶ್ವರಿ ದೇವಸ್ಥಾನ ತಲಪುವುದು. ಅ.8 ರಂದು ಅನ್ನಪೂಣೇಶ್ವರಿ ದೇವಸ್ಥಾನದಿಂದ ನಂದೆಮ್ಮಾ ನಗರದ ನಂದೆಮ್ಮಾ ದೇವಸ್ಥಾನ ತಲುಪುವುದು. ಅ.9 ರಂದು ನಂದೆಮ್ಮಾ ದೇವಸ್ಥಾನದಿಂದ ಇಂಚಲ ಕ್ರಾಸ್‌ದ ಮಹಾಲಕ್ಷ್ಮೀ ದೇವಸ್ಥಾನ ತಲುಪುವುದು. ಅ.10 ರಂದು ಮಹಾಲಕ್ಷ್ಮೀ ದೇವಸ್ಥಾನದಿಂದ ವಿದ್ಯಾನಗರದ ಈಶ್ವರ ದೇವಸ್ಥಾನ ತಲುಪುವುದು. ಅ.11 ರಂದು ಈಶ್ವರ ದೇವಸ್ಥಾನದಿಂದ ಜವಳಿ ಖೂಟದ ಗ್ರಾಮದೇವಿ ದೇವಸ್ಥಾನಕ್ಕೆ ಬಂದು ಸಮಾರೋಪ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ವಿಎಚ್‌ಪಿ ತಾಲೂಕಾಧ್ಯಕ್ಷ ಕಾಶೀನಾಥ ಬಿರಾದಾರ, ಮಹಾಂತೇಶ ಹೊಸೂರ, ವಿವೇಕಾನಂದ ಪೂಜಾರ, ಅಶೋಕ ಸವದತ್ತಿ, ವಿಜಯ ಪತ್ತಾರ, ಗಿರೀಶ ಹರಕುಣಿ, ಮಲ್ಲಿಕಾರ್ಜುನ ಏಣಗಿಮಠ, ಗೌತಮ ಇಂಚಲ, ಸಚಿನ ಚೀಲದ, ಆನಂದ ಗುಂಡ್ಲೂರ, ರಾಜು ಹರಕುಣಿ, ಮಂಜುನಾಥ ಆದರಗಿ, ಮಹೇಶ ಜಾಧವ, ಮಂಜುನಾಥ ಕುರಿ ಇತರರು ಇದ್ದರು.ಮಹಿಳೆಯರು ಮನೆಯ ಮುಭಾಂಗದಲ್ಲಿ ರಂಗೊಲಿ, ತಳಿರು ತೋರಣಗಳಿಂದ ಸಿಂಗಾರ ಮಾಡಬೇಕು. ಭಾಗವಹಿಸುವ ಯುವಕ, ಯುವತಿಯರು ಬಿಳಿ ವಸ್ತ್ರದೊಂದಿಗೆ ದೌಡ ನಡಿಗೆಯಲ್ಲಿ ಶಿಸ್ತು ಪಾಲಿಸಬೇಕು.

-ಪ್ರಮೋದಕುಮಾರ ವಕ್ಕುಂದಮಠ, ವಿಶ್ವ ಹಿಂದೂ ಪರಿಷತ ಜಿಲ್ಲಾಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ