ಕನ್ನಡಪ್ರಭ ವಾರ್ತೆ ಉಡುಪಿ
15ಕ್ಕೂ ಹೆಚ್ಚು ಆ್ಯಪ್ ಗಳ ಮೂಲಕ ಇಲಾಖೆಯ ಕಾರ್ಯಕ್ರಮಗಳು ನಡೆಯುತ್ತಿದ್ದು, ನಮಗೆ ಇಲ್ಲಿಯವರೆಗೆ ಯಾವುದೆ ಮೊಬೈಲ್ ಫೋನ್ ಗಳ ಸರಬರಾಜು ಮಾಡಿಲ್ಲ, ಹಾಗಿರುವಾಗ ಜನರ ಕೆಲಸಗಳನ್ನು ಹೇಗೆ ಮಾಡುವುದು ಎಂದು ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ದೂರಿದರು.
ತಮ್ಮಿಂದ ಇಲಾಖೆಯು ರಜಾ ದಿನಗಳಲ್ಲಿಯೂ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಹೆಚ್ಚುವರಿ ಸೌಲಭ್ಯ ನೀಡುತ್ತಿಲ್ಲ, ಅಂತರ್ ಜಿಲ್ಲಾ ವರ್ಗಾವಣೆ ನಿಲುಗಡೆ ಮಾಡಿದ್ದು, ನಾವು ಕೆಲವರಂತೂ 15 - 20 ವರ್ಷಗಳಿಂದ ತವರು ಜಿಲ್ಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ತಾವು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಅವರು ಸಂಸದರನ್ನು ವಿನಂತಿಸಿದರು.ಮನವಿ ಸ್ವೀಕರಿಸಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸಂಬಂಧಪಟ್ಟ ಕಂದಾಯ ಸಚಿವರ ಜೊತೆ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳ ಕೋರಿಕೆಯನ್ನು ಮನವರಿಕೆ ಮಾಡುತ್ತೇನೆ ಎಂದು ಭರವಸೆ ನೀಡಿದರು.