ಪಾವಗಡ ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಕಾರ್ಮಿಕನ ಸಾವು, ಮತ್ತೋರ್ವರಿಗೆ ಗಂಭೀರ ಗಾಯ

KannadaprabhaNewsNetwork |  
Published : Jan 28, 2025, 12:47 AM IST
ಫೋಟೋ 27ಪಿವಿಡಿ7ಪಾವಗಡ,ಸೋಲಾರ್‌ ಪಾರ್ಕ್‌ ನಿರ್ಮಾಣದ ಹಿನ್ನಲೆ ತಾಲೂಕಿನ ತಿರುಮಣಿಯ ಜಮೀನೊಂದರಲ್ಲಿ ಸ್ಪೂಟಕ ವಸ್ತುಗಳು ಬ್ಲಾಸ್‌ ಆಗಿ ಕಾರ್ಮಿಕರೊಬ್ಬರು ಸಾವು,ಮತ್ತೊರ್ವ ವ್ಯಕ್ತಿಗೆ ಗಂಭೀರಗಾಯಗಳಾದ ಘಟನೆ ಸಂಭವಿಸಿದೆ.ಫೋಟೋ 27ಪಿವಿಜಿ7ಪಾವಗಡ ತಿರುಮಣಿ ಸಮೀಪದ ಜಮೀನೊಂದರಲ್ಲಿ ಸ್ವೂಟಕ ವಸ್ಸು ಬ್ಲಾಸ್ಟ್‌ ಆಗಿ ಅಕ್ಕಪಕ್ಕದ ಬೆಟ್ಟಗಳಿಗೆ ಬೆಂಕಿ ವ್ಯಾಪಿಸಿದೆ. | Kannada Prabha

ಸಾರಾಂಶ

ಸೋಲಾರ್‌ ಪಾರ್ಕ್‌ ನಿರ್ಮಿಸುವ ಸಲುವಾಗಿ ಇಲ್ಲಿನ ಕೆಪಿಡಿಸಿಎಲ್‌ ವತಿಯಿಂದ ತಾಲೂಕಿನ ತಿರುಮಣಿ ವ್ಯಾಪ್ತಿಯ ರೈತರಿಗೆ ಸೇರಿದ್ದ 1,002 ಎಕರೆ ಜಮೀನು ಗುತ್ತಿಗೆ ಅಧಾರದ ಮೇಲೆ ಜೆಎಸ್‌ಡ್ಲೂ ಕಂಪನಿಗೆ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಪಾವಗಡ

ಪಾವಗಡ ತಾಲೂಕಿನ ತಿರುಮಣಿ ಸಮೀಪದ ಸೋಲಾರ್ ಪಾರ್ಕ್ ನಿರ್ಮಾಣದ ವೇಳೆ ಸೋಮವಾರ ರಾತ್ರಿ ಬಂಡೆ ಬ್ಲಾಸ್ಟ್ ದುರಂತ ಸಂಭವಿಸಿದ್ದು ಕಾರ್ಮಿಕರೊಬ್ಬರು ಸ್ಥಳದಲ್ಲಿಯೇ ಸಾವನ್ನಪಿದ್ದಾರೆ.

ಈ ಘಟನೆಯಲ್ಲಿ ರಾಯಚೂರು ಮೂಲದ ಬಸವರಾಜು ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ತಾಲೂಕಿನ ಅಚ್ಚಮ್ಮನಹಳ್ಳಿಯ ಶಿವಯ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ:

ಸೋಲಾರ್‌ ಪಾರ್ಕ್‌ ನಿರ್ಮಿಸುವ ಸಲುವಾಗಿ ಇಲ್ಲಿನ ಕೆಪಿಡಿಸಿಎಲ್‌ ವತಿಯಿಂದ ತಾಲೂಕಿನ ತಿರುಮಣಿ ವ್ಯಾಪ್ತಿಯ ರೈತರಿಗೆ ಸೇರಿದ್ದ 1,002 ಎಕರೆ ಜಮೀನು ಗುತ್ತಿಗೆ ಅಧಾರದ ಮೇಲೆ ಜೆಎಸ್‌ಡ್ಲೂ ಕಂಪನಿಗೆ ನೀಡಲಾಗಿತ್ತು. ಪಾರ್ಕ್‌ ನಿರ್ಮಾಣಕ್ಕಾಗಿ ಬಂಡೆ ಬ್ಲಾಸ್ಟ್ ಮಾಡುತ್ತಿದ್ದ ವೇಳೆ ಸ್ಫೋಟಕ ಸಿಡಿದು ಸಮೀಪದಲ್ಲಿದ್ದ ಬಸವರಾಜು (48) ಸ್ಥಳದಲ್ಲಿ ಸಾವನ್ನಪ್ಪಿದ್ದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕ ಶಿವಯ್ಯ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಪರಿಣಾಮ ಅಕ್ಕಪಕ್ಕದ ಪ್ರದೇಶ ಹಾಗೂ ಬೆಟ್ಟಕ್ಕೂ ಬೆಂಕಿ ವ್ಯಾಪಿಸಿದ್ದು ಘಟನೆ ತಿಳಿಯುತ್ತಿದ್ದಂತೆ ಅಗ್ಮಿ ಶಾಮದ ದಳದ ಅಧಿಕಾರಿಗಳು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದರು.ಈ ವೇಳೆ ಸ್ಥಳೀಯ ಠಾಣೆಯ ಪೊಲೀಸರು ಸ್ಥಳೀಯರನ್ನು ಸ್ಥಳಕ್ಕೆ ಬರದಂತೆ ತಡೆದಿದ್ದು,

ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನ ಬ್ಲಾಸ್ಟ್ ಮಾಡುವ ವೇಳೆ ಬಳಸಿರುವುದರಿಂದ ದುರಂತಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗುತ್ತಿದೆ.

ಸದ್ಯ ಘಟನಾ ಸ್ಥಳಕ್ಕೆ ಕೆಎಸ್‌ಪಿಡಿಸಿಎಲ್‌ನ ಎಇಇ ಮಹೇಶ್‌ ಹಾಗೂ ಗ್ರಾಮಾಂತರ ಸಿಪಿಐ ಗಿರೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಫೋಟೋ 27ಪಿವಿಡಿ7

ಪಾವಗಡ ಸೋಲಾರ್‌ ಪಾರ್ಕ್‌ ನಿರ್ಮಾಣದ ಹಿನ್ನಲೆ ತಾಲೂಕಿನ ತಿರುಮಣಿಯ ಜಮೀನೊಂದರಲ್ಲಿ ಸ್ಪೂಟಕ ವಸ್ತುಗಳು ಬ್ಲಾಸ್‌ ಆಗಿ ಕಾರ್ಮಿಕರೊಬ್ಬರು ಸಾವು,ಮತ್ತೊರ್ವ ವ್ಯಕ್ತಿಗೆ ಗಂಭೀರಗಾಯಗಳಾದ ಘಟನೆ ಸಂಭವಿಸಿದೆ.

ಫೋಟೋ 27ಪಿವಿಡಿಡಿ7

ಪಾವಗಡ,ತಾಲೂಕಿನ ತಿರುಮಣಿ ಗ್ರಾಮದ ಸಮೀಪದ ಜಮೀನೊಂದರಲ್ಲಿ ಸ್ವೂಟಕ ವಸ್ಸು ಬ್ಲಾಸ್ಟ್‌ ಆಗಿ ಅಕ್ಕಪಕ್ಕದ ಬೆಟ್ಟಗಳಿಗೆ ಬೆಂಕಿ ವ್ಯಾಪಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ