ಸಮೀಕ್ಷೆ ವೇಳೆ ಮಾದಿಗ ಎಂದೇ ನಮೂದಿಸಬೇಕು

KannadaprabhaNewsNetwork |  
Published : May 13, 2025, 01:31 AM IST
12ಎಚ್ಎಸ್ಎನ್5 : ಹೊಳೆನರಸೀಪುರದ ಮಹಾತ್ಮಗಾಂಧಿ ವೃತ್ತದಲ್ಲಿ ಮಾದಿಗ ದಂಡೋರ ಸಮಿತಿಯ ಜಾಗೃತಿ ರಥವನ್ನು ಮಾದಿಗ ದಂಡೋರ ರಿಜರ್ವೇಷನ್ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ವಿಜಯ ಕುಮಾರ್ ನೇತೃತ್ವದಲ್ಲಿ ಸ್ವಾಗತಿಸಿದರು. ನಾಗರಾಜು ಕೆ.ಎಂ., ರವಿಕುಮಾರ್, ಕೆ.ಎನ್.ಸತೀಶ, ಕೆ.ಜೆ.ಸುನಿಲ್ ಕುಮಾರ ಇದ್ದರು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸಮೀಕ್ಷೆ ಆರಂಭಿಸಿದ್ದು ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ೩ ದಿನಗಳ ಕಾಲ ತಾಲೂಕಿನಲ್ಲಿ ಜಾಗೃತಿ ರಥ ಸಂಚರಿಸಲಿದೆ ಎಂದು ಮಾದಿಗ ದಂಡೋರ ಸಮಿತಿಯ ತಾಲೂಕು ವಕ್ತಾರ ನಾಗರಾಜು ಕೆ.ಎಂ. ತಿಳಿಸಿದರು. ಮಾದಿಗ ಸಮುದಾಯದವರು ಗಣತಿದಾರರರು ಬರುವ ಮುನ್ನ ಕುಟುಂಬದ ಬಿಪಿಎಲ್ ಪಡಿತರ ಚೀಟಿ, ಆಧಾರ್‌ ಕಾರ್ಡ್ ಅಥವಾ ಜಾತಿ ಪ್ರಮಾಣ ಪತ್ರವನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಸಮೀಕ್ಷೆಯ ಯಶಸ್ಸಿಗೆ ಹಾಗೂ ಮಾದಿಗ ಜನಾಂಗದ ಶ್ರೇಯಸ್ಸಿಗೆ ಸಹಕರಿಸಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರ ಸಮೀಕ್ಷೆ ಆರಂಭಿಸಿದ್ದು ಜನರಲ್ಲಿ ತಿಳಿವಳಿಕೆ ಮೂಡಿಸುವ ಸಲುವಾಗಿ ೩ ದಿನಗಳ ಕಾಲ ತಾಲೂಕಿನಲ್ಲಿ ಜಾಗೃತಿ ರಥ ಸಂಚರಿಸಲಿದೆ ಎಂದು ಮಾದಿಗ ದಂಡೋರ ಸಮಿತಿಯ ತಾಲೂಕು ವಕ್ತಾರ ನಾಗರಾಜು ಕೆ.ಎಂ. ತಿಳಿಸಿದರು.ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮಸ್ಕರಿಸಿ, ಮಾತನಾಡಿದರು. ಸಮೀಕ್ಷೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಒಳಪಡುವ ಆದಿ ದ್ರಾವಿಡ ಅಥವಾ ಆದಿ ಕರ್ನಾಟಕವಾಗಿರಲಿ ಅದನ್ನು ನಮೂದಿಸಿ ನಂತರ ಉಪ ಜಾತಿ ಕಾಲಂ ನಂಬರ್ ೦೬೧ ರಲ್ಲಿ ಮಾದಿಗ ಎಂದೇ ನಮೂದಿಸಬೇಕು.ಮಾದಿಗ ಸಮುದಾಯದವರು ಗಣತಿದಾರರರು ಬರುವ ಮುನ್ನ ಕುಟುಂಬದ ಬಿಪಿಎಲ್ ಪಡಿತರ ಚೀಟಿ, ಆಧಾರ್‌ ಕಾರ್ಡ್ ಅಥವಾ ಜಾತಿ ಪ್ರಮಾಣ ಪತ್ರವನ್ನು ಮೊದಲೇ ಸಂಗ್ರಹಿಸಿಟ್ಟುಕೊಂಡು ಸಮೀಕ್ಷೆಯ ಯಶಸ್ಸಿಗೆ ಹಾಗೂ ಮಾದಿಗ ಜನಾಂಗದ ಶ್ರೇಯಸ್ಸಿಗೆ ಸಹಕರಿಸಬೇಕಿದೆ ಎಂದರು.ಗ್ರಾಮೀಣ ಪ್ರದೇಶದಲ್ಲಿ ಸರ್ವರ್‌ ಸಮಸ್ಯೆ ಕಾಡುತ್ತಿದ್ದು, ಗಣತಿದಾರರು ಸಮೀಕ್ಷೆಗೆ ತೆರಳಿದ ಸಂದರ್ಭದಲ್ಲಿ ಮಾದಿಗ ಸಮುದಾಯದವರು ವಾಸವಿರುವ ಪ್ರದೇಶದ ಬಗ್ಗೆ ಅರಿತಿರುವ ಕಾರಣ ಆದಿ ದ್ರಾವಿಡ ಅಥವಾ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದರೂ ಸಹ ಉಪ ಜಾತಿ ಕಾಲಂ ನಂಬರ್ ೦೬೧ರಲ್ಲಿ ಮಾದಿಗ ಎಂದೇ ದಯವಿಟ್ಟು ನಮೂದಿಸಿ ಎಂದು ವಿನಂತಿಸಿದರು. ನ್ಯಾ. ನಾಗಮೋಹನ ದಾಸ್ ಆಯೋಗದ ವರದಿ ಪಡೆದು, ವಿಶೇಷ ಅಧಿವೇಶನ ಕರೆದು ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಜೂನ್ ೧೧ರ ಬುಧವಾರ ಹಾಸನದ ಕಲಾ ಭವನದಲ್ಲಿ ಹಾಸನ ಜಿಲ್ಲಾ ಸಮಾವೇಶ ನಡೆಯಲಿದ್ದು, ಮಾದಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬುವ ಜತೆಗೆ ಸಮಾವೇಶ ಯಶಸ್ಸಿಗೆ ಸಹಕರಿಸುವಂತೆ ಕೋರಿದರು.

ಮಾದಿಗ ದಂಡೋರ ರಿಜರ್ವೇ?ನ್ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ವಿಜಯ ಕುಮಾರ್, ಜಿಲ್ಲಾಧ್ಯಕ್ಷ ರವಿಕುಮಾರ್, ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಸತೀಶ, ವಿಧ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಕೆ.ಜೆ.ಸುನಿಲ್ ಕುಮಾರ, ಹಿರಿಯ ಮುಖಂಡರಾದ ಶ್ರೀನಿವಾಸ, ರಾಮದಾಸ್, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2259.56 ಕೋಟಿ ಅನುದಾನ ಮಂಜೂರು
ಮನರೇಗಾ ಮರುನಾಮಕರಣದಿಂದ ಬಡವರ ಅನ್ನದ ಬಟ್ಟಲಿಗೆ ಕನ್ನ: ಬಿಪಿನ್ ಚಂದ್ರ ಪಾಲ್‌