ಕನ್ನಡಪ್ರಭ ವಾರ್ತೆ, ತರೀಕೆರೆ
ಭಾನುವಾರ ತರೀಕೆರೆ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ, ಪುರಸಭೆ ಹಾಗೂ ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಏರ್ಪಾಡಾಗಿದ್ದ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲಿ ನಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ಹೊರ ರಾಜ್ಯಗಳಿಂದಲೂ ಅನೇಕ ಕುಸ್ತಿ ಪಟುಗಳು ಭಾಗವಹಿಸುತ್ತಾರೆ. ಮೈಸೂರು ದಸರಾ ಬಿಟ್ಟರೆ ತರೀಕೆರೆ ಕುಸ್ತಿ ಸ್ಪರ್ಧೆಗಳು ಎಲ್ಲಡೆ ಪ್ರಖ್ಯಾತಿ ಪಡೆದಿದೆ ಎಂದು ಅವರು ಹೇಳಿದರು.ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಿರುವುದು ಸಂತೋಷ ತಂದಿದೆ, ಮೈಸೂರು ದಸರಾ ಬಿಟ್ಟರೆ ತರೀಕೆರೆಯಲ್ಲಿ ಬಯಲು ಕುಸ್ತಿ ಸ್ಪರ್ಧೆ ನೆಡೆಯುತ್ತದೆ, ಕುಸ್ತಿ ಕ್ರೀಡೆಯು ಗ್ರಾಮೀಣ ಕ್ರೀಡೆಯಾಗಿದೆ. ಪುರಸಭೆ ವತಿಯಿಂದ ನಾಗರಿಕರ ಪರವಾಗಿ ಕುಸ್ತಿ ಸ್ಪರ್ಧೆಗೆ ಬೆಳ್ಳಿ ಗದೆಯನ್ನು ಪ್ರತಿವರ್ಷ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಪುರಸಭೆ ನಾಮನಿರ್ದೇಶನ ಸದಸ್ಯ ಟಿ.ಜಿ. ಮಂಜುನಾಥ್ ಮಾತನಾಡಿ, ಇಡೀ ರಾಜ್ಯದಲ್ಲೇ ಪಟ್ಟಣದಲ್ಲಿ ಕುಸ್ತಿ ಸ್ಪರ್ಧೆಗಳು ಬಹಳ ಚೆನ್ನಾಗಿ ನಡೆಯುತ್ತವೆ. ಮಹಾರಾಷ್ಟ್ರ ಇತ್ಯಾದಿ ಹೊರ ರಾಜ್ಯಗಳಿಂದಲೂ ಕುಸ್ತಿ ಪಟುಗಳು ಭಾಗವಹಿಸುತ್ತಾರೆ. ಎಲ್ಲ ಕುಸ್ತಿ ಪಟುಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ತರೀಕೆರೆ ಕುಸ್ತಿಗೆ ಇತಿಹಾಸವಿದೆ. ಕುಸ್ತಿ ಕಲೆ ನಶಿಸಿಹೋಗಬಾರದು. ಎಲ್ಲಾ ಕ್ರೀಡಾಪಟುಗಳಿಗೂ ಪ್ರಾತಿನಿಧ್ಯ ಸಿಗಲಿ ಎಂದು ಹೇಳಿದರು.ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಜಯಸ್ವಾಮಿ ಸಿ.(ಕಾರೆ) ಮಾತನಾಡಿ, ಮೂರು ದಿನಗಳ ಕಾಲ ಕುಸ್ತಿ ಸ್ಪರ್ಧೆ ನಡೆಯುತ್ತದೆ. ಎಲ್ಲಾ ಸಮಾಜದ ಬಂಧುಗಳು ಸಹಕರಿಸಿದ್ದಾರೆ ಎಂದು ಅವರು ಹೇಳಿದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿದರು. ಮಾಜಿ ಪೈಲ್ವಾನರಾದ ವಗ್ಗಪ್ಪರ ಮಂಜಣ್ಣ, ಪುರಸಭೆ ಸದಸ್ಯರಾದ ಚೇತನ್, ಬಸವರಾಜ್, ನಾಮನಿರ್ದೇಶನ ಸದಸ್ಯರಾದ ಆದಿಲ್ ಪಾಷ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಪದಾಧಿಕಾರಿಗಳು, ಸದಸ್ಯರು, ಶ್ರೀನಿವಾಸ್, ಟಿ.ಸಿ.ದರ್ಶನ್, ಶಂಕರ್ (ಆಟೋ) ಗಿರೀಶ್, ರಾಕೇಶ್, ಬಾಬು, ಪ್ರವೀಣ್ ಭಾಗವಹಿಸಿದ್ದರು.