ದಸರಾ: ಚಿನ್ನ ಗೆದ್ದ ಜಿಲ್ಲೆಯ ಕುಸ್ತಿ, ವುಶು ಕ್ರೀಡಾಪಟುಗಳು

KannadaprabhaNewsNetwork |  
Published : Oct 13, 2024, 01:06 AM IST
ಸಿಎಂ ದಸರಾ ಕ್ರೀಡಾಕೂಟಚಿನ್ನದ ಪದಕ ಬಾಚಿಕೊಂಡ ಜಿಲ್ಲೆಯ ಕುಸ್ತಿ, ವುಶು ಕ್ರೀಡಾ ಪಟುಗಳು  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಮೈಸೂರಿನ ಚಾಮುಂಡೇಶ್ವರಿ ಜಿಲ್ಲಾ ಕ್ರೀಡಾಂಗಣ ಅಕ್ಟೋಬರ 3 ರಿಂದ 6ರವರೆಗೆ ಜರುಗಿದ ರಾಜ್ಯಮಟ್ಟದ ಸಿಎಂ ದಸರಾ ಕ್ರೀಡಾಕೂಟಗಳಲ್ಲಿ ಬಾಗಲಕೋಟೆ ಜಿಲ್ಲೆಯ ಕುಸ್ತಿ, ವುಶು ಕ್ರೀಡಾಪಟುಗಳು ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮೈಸೂರಿನ ಚಾಮುಂಡೇಶ್ವರಿ ಜಿಲ್ಲಾ ಕ್ರೀಡಾಂಗಣ ಅಕ್ಟೋಬರ 3 ರಿಂದ 6ರವರೆಗೆ ಜರುಗಿದ ರಾಜ್ಯಮಟ್ಟದ ಸಿಎಂ ದಸರಾ ಕ್ರೀಡಾಕೂಟಗಳಲ್ಲಿ ಬಾಗಲಕೋಟೆ ಜಿಲ್ಲೆಯ ಕುಸ್ತಿ, ವುಶು ಕ್ರೀಡಾಪಟುಗಳು ಚಿನ್ನದ ಪದಕ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

70 ಕೆಜಿ ಕುಸ್ತಿಯಲ್ಲಿ ಜ್ಯೋತಿಬಾ ಜಾಂಬ್ರೆ, 53 ಕೆಜಿ ಕುಸ್ತಿಯಲ್ಲಿ ಗೋಪವ್ವ ಕೊಡಕಿ, 55 ಕೆಜಿ ಕುಸ್ತಿಯಲ್ಲಿ ಐಶ್ವರ್ಯ ಕರಿಗಾರ ಚಿನ್ನದ ಪದಕ ಪಡೆದರೆ, 86 ಕೆಜಿ ಕುಸ್ತಿಯಲ್ಲಿ ದರ್ಶನ ಅಡೇಕರ ಬೆಳ್ಳಿ ಪದಕ, 74 ಕೆಜಿ ಕುಸ್ತಿಯಲ್ಲಿ ಆದರ್ಶ ತೋಟದಾರ, 61 ಕೆಜಿ ಕುಸ್ತಿಯಲ್ಲಿ ಕಾರ್ತಿಕ ಪಡತಾರೆ, 55 ಕೆಜಿ ಕುಸ್ತಿಯಲ್ಲಿ ಬಾಳಿ ದಾಮನೇಕರ, ಹಣಮಂತ ತುಂಗಳ ಕಂಚಿನ ಪದಕ, 77 ಕೆಜಿ ಕುಸ್ತಿಯಲ್ಲಿ ಕಾಡೇಶ ಪಾಟೀಲ, 97 ಕೆಜಿ ಕುಸ್ತಿಯಲ್ಲಿ ಮಾರುತಿ ಶಿಂಧೆ, ಗಜಾನನ ಪಾಲಬಾವಿ, ಸೈಕ್ಲಿಂಗ್‌ನಲ್ಲಿ ಯಲಗೂರೇಶ ಗಡ್ಡಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಸೈಕ್ಲಿಂಗ್‌ನಲ್ಲಿ ಕೀರ್ತಿ ನಾಯಕ, ಪೂರ್ವಿ ಸಿದ್ದವಗೋಳ ಕಂಚಿನ ಪದಕ ಪಡೆದರೆ, ವುಶು ಕ್ರೀಡೆಯಲ್ಲಿ ನಿಂಗರಾಜ ರಾಜನಾಳ, ವಿನಾಯಕ ಗರಸಂಗಿ, ಮೇಘರಾಜ ಬಡಿಗೇರ, ಅಮೀತ ಆಡಿನ, ಮೌನೇಶ ಬಡಿಗೇರ, ಸುಮೀತ ಘೋರ್ಪಡೆ, ಸಂಜನಾ ಅಂಬೋರೆ, ಸುಹಾಸಿನಿ ರಜಪೂತ, ಶಿವಾನಿ ನ್ಯಾಮಗೌಡರ, ಸವಿತಾ ಹುಬ್ಬಳ್ಳಿ, ನಿಖಿತಾ ಮೊಕಾಶಿ, ಯಾಸೀಕ ನಾಯಕ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ವುಶು ಕ್ರೀಡೆಯಲ್ಲಿ ರಾಧಿಕಾ ಪೂಜಾರಿ, ನಿರ್ಮಲಾ ರಾಠೋಡ, ಭಾಗ್ಯಶ್ರೀ ಜಾಧವ, ಸುದೀಪ ನಡಗಡ್ಡಿ, ಅಕ್ಷಯ ಮಠ, ಬಾಲಪ್ಪ ಪೂಜಾರಿ, ಸುಹಾಸಿನಿ ರಜಪೂತ, ಆದ್ಯ ಗೌಡರ, ಭವಾನಿ ಪಡದಲಿ, ಭಗತ್ ನೆಟಕಟ್ಟಿ ಬೆಳ್ಳಿ ಪದಕ ಪಡೆದಿದ್ದಾರೆ. ಅರೋನ್ ಫರ್ನಾಂಡೀಸ್‌, ಸುಷ್ಮಿತಾ ಮುರಗೊಂಡ, ಜ್ಯೋತಿ ಘಾಟಗೆ ವುಶು ಕ್ರೀಡೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಪದಕ ಪಡೆದ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಅಭಿನಂದನೆ ಸಲ್ಲಿಸಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌