ಕನ್ನಡಪ್ರಭ ವಾರ್ತೆ ಕುಶಾಲನಗರ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ದುಬಾರೆ ಶಿಬಿರದ ಆನೆಗಳು ಗುರುವಾರ ಸಂಜೆ ಶಿಬಿರಕ್ಕೆ ಹಿಂತಿರುಗಿದವು. ದುಬಾರೆ ಆನೆ ಶಿಬಿರದ ಧನಂಜಯ, ಗೋಪಿ, ಕಂಚನ್, ಪ್ರಶಾಂತ್ ಮತ್ತು ಹಾರಂಗಿ ಶಿಬಿರದ ವಿಜಯ ಆನೆಗಳು ಕ್ಷೇಮವಾಗಿ ಶಿಬಿರ ಸೇರಿದವು. ಮೈಸೂರಿನಿಂದ ಮಾಲ್ದಾರೆ ಮೂಲಕ ದುಬಾರೆಗೆ ಆಗಮಿಸಿದ ಆನೆಗಳನ್ನು ಉಪ ವಲಯ ಅರಣ್ಯ ಅಧಿಕಾರಿ ಕನ್ನoಡ ರಂಜನ್ ಮತ್ತು ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು. ಹಾರಂಗಿ ಶಿಬಿರಕ್ಕೆ ಹಿಂತಿರುಗಿದ ವಿಜಯ ಆನೆಯನ್ನು ಉಪ ವಲಯ ಅರಣ್ಯ ಅಧಿಕಾರಿ ಅನಿಲ್ ಡಿಸೋಜ ಮತ್ತು ಸಿಬ್ಬಂದಿ ಬರಮಾಡಿಕೊಂಡರು. ----------- ಚಿತ್ರ ಲಾರಿ ಮೂಲಕ ಶಿಬಿರಕ್ಕೆ ಹಿಂತಿರುಗಿದ ಆನೆಗಳ ದೃಶ್ಯ