ಧಾರವಾಡದಲ್ಲೂ ದಸರಾ ಗೊಂಬೆ ಸಂಪ್ರದಾಯ ಶುರು

KannadaprabhaNewsNetwork |  
Published : Oct 17, 2026, 01:45 AM IST
ಧಾರವಾಡದ ಶ್ರೀರಾಮ ನಗರದಲ್ಲಿರುವ ಡಾ.ವಿಶ್ವನಾಥ ಪಾಟೀಲ ಅವರ ಮನೆಯಲ್ಲಿ ದಸರಾ ಗೊಂಬೆಗಳ ಸಂಭ್ರಮ. | Kannada Prabha

ಸಾರಾಂಶ

ದಸರಾ ಗೊಂಬೆ ಸಂಪ್ರದಾಯವು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಇದೊಂದು ಅತ್ಯಂತ ಸುಂದರ ಮತ್ತು ಸಾಂಪ್ರದಾಯಿಕ ಆಚರಣೆ ಹೌದು. ಇತ್ತೀಚಿನ ವರ್ಷಗಳಲ್ಲಿ ಧಾರವಾಡದಲ್ಲೂ ದಸರಾ ಗೊಂಬೆಗಳ ದರ್ಶನವಾಗುತ್ತಿದೆ.

ಧಾರವಾಡ:

ದಸರಾ ಗೊಂಬೆ ಸಂಪ್ರದಾಯವು ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಆಚರಿಸಲಾಗುತ್ತದೆ. ಇದೊಂದು ಅತ್ಯಂತ ಸುಂದರ ಮತ್ತು ಸಾಂಪ್ರದಾಯಿಕ ಆಚರಣೆ ಹೌದು. ಇತ್ತೀಚಿನ ವರ್ಷಗಳಲ್ಲಿ ಧಾರವಾಡದಲ್ಲೂ ದಸರಾ ಗೊಂಬೆಗಳ ದರ್ಶನವಾಗುತ್ತಿದೆ.

ಈ ಪೈಕಿ ಖ್ಯಾತ ಮೂಳೆ ಮತ್ತು ಎಲುಬು ತಜ್ಞರಾದ ಡಾ. ವಿಶ್ವನಾಥ ಪಾಟೀಲ ಕುಟುಂಬವು ತಮ್ಮ ಕಲ್ಯಾಣ ನಗರದ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಂದದ-ಚೆಂದದ ಗೊಂಬೆಗಳನ್ನು ಕೂರಿಸಿ ಪೂಜಿಸುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಡಾ. ವಿಶ್ವನಾಥ ಅವರ ಪತ್ನಿ ಕಾತ್ಯಾಯಿನಿ ಅವರು ಮೂಲತಃ ಮೈಸೂರಿನವರು. ಹೀಗಾಗಿ ಧಾರವಾಡದಲ್ಲೂ ತಮ್ಮ ಮನೆಯಲ್ಲಿ ವಿವಿಧ ಕಲ್ಪನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಿದ್ದು, ಮನೆಯ ಮಂದಿಯೆಲ್ಲರೂ ಸಂಪ್ರದಾಯಕ್ಕೆ ಕೈ ಜೋಡಿಸುತ್ತಿದ್ದಾರೆ.

ಯಾವ್ಯಾವ ಗೊಂಬೆ:

ಪ್ರಸ್ತುತ ಮೈಸೂರು ಅರಮನೆ, ಮಹಾರಾಜ, ಅಂಬಾರಿ ಹೊತ್ತ ಆನೆಗಳು, ಸಾಂಸ್ಕೃತಿಕ, ಜಾನಪದ ನೃತ್ಯಗಳು ಸೇರಿದಂತೆ ದಸರಾ ವೈಭವ ಪ್ರದರ್ಶಿಸುವ ಗೊಂಬೆಗಳು ಹಾಗೂ ಒಂಭತ್ತು ದಿನಗಳ ಕಾಲ ದೇವಿ ಅವತಾರದ ಗೊಂಬೆಗಳು ಇವರ ಮನೆಯಲ್ಲಿ ಆಕರ್ಷಿಸುತ್ತಿವೆ. ಜತೆಗೆ ವಿಶೇಷವಾಗಿ ರಾಮಾಯಣದಲ್ಲಿ ಕಂಡು ಬರುವ ಪ್ರಮುಖ ದೃಶ್ಯಗಳನ್ನು ಸಹ ಗೊಂಬೆಗಳ ಮೂಲಕ ಪ್ರದರ್ಶಿಸಲಾಗಿದೆ. ರಾಮನ ವಿದ್ಯಾಭ್ಯಾಸ, ಸೀತಾ ಸ್ವಯಂವರ, ರಾಮ-ಸೀತಾ, ಲಕ್ಷ್ಮಣ, ತದನಂತರ ತಿರುಪತಿ ತಿಮ್ಮಪ್ಪನ ಮದುವೆ, ವಿಷ್ಣುವಿನ ದಶಾವತಾರ ಹೀಗೆ ಹಲವು ಕಲ್ಪನೆಯ ಗೊಂಬೆಗಳು ಕಣ್ಮನ ಸೆಳೆಯುತ್ತಿವೆ. ಸೊಸೆ ಡಾ. ಕಾತ್ಯಾಯಿನಿ ಸೇರಿದಂತೆ ನಾವು ಮೈಸೂರು, ಹಂಪಿ, ರಾಜಸ್ಥಾನ ಸೇರಿದಂತೆ ವಿವಿಧೆಡೆ ಹೋದಾಗ ಇಷ್ಟಪಟ್ಟು ತಂದ ಗೊಂಬೆಗಳಿವು. ನಾಲ್ಕು ವರ್ಷಗಳಿಂದ ಈ ಗೊಂಬೆಗಳನ್ನು ದಸರಾ ಸಮಯದಲ್ಲಿಟ್ಟು ಪೂಜೆ ಸಲ್ಲಿಸುತ್ತಿದ್ದು, ಕುಟುಂಬದ ಸದಸ್ಯರನ್ನು ಒಗ್ಗೂಡಿಸಿ ಖುಷಿ ವ್ಯಕ್ತಪಡಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಡಾ. ವಿಶ್ವನಾಥ ಪಾಟೀಲ ಅವರ ತಾಯಿ ಮೀನಾ ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಬದ್ಧತೆ ಮುಖ್ಯ: ಬಿ.ಕೆ. ಶಿವಕುಮಾರ್
ದಸರಾ ಆಚರಣೆ ನಮ್ಮ ಸಂಸ್ಕೃತಿಯ ಪ್ರತಿಬಿಂಬ: ಮಧು ಜಿ.ಮಾದೇಗೌಡ