ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನ ಶಿರೋಳ ಗ್ರಾಮದ ದ್ಯಾಮಣ್ಣ ಮುತ್ಯಾ (ಕಟ್ಟಿಮುತ್ಯಾ) ಜಾತ್ರಾ ಮಹೋತ್ಸವದ ನಿಮಿತ್ತ ಏರ್ಪಡಿಸಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹದಿಂದ ಜನರು ಭವಿಷ್ಯದಲ್ಲಿ ನೆಮ್ಮದಿಯ ಜೀವನ ನಡೆಸಬಹುದಾಗಿದೆ. ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕವಾಗಿದ್ದು, ಸಮಾಜದಲ್ಲಿಸಮಾನತೆ ಸಹಕಾರ, ಸಹಬಾಳ್ವೆ ಬರಬೇಕಾದರೆ ಪ್ರತಿ ನಗರ, ಹಳ್ಳಿಗಳಲ್ಲಿ ವರ್ಷಕ್ಕೆ ಕನಿಷ್ಠ ಒಂದು ಬಾರಿ ಎಲ್ಲರೂ ಒಂದೆಡೆ ಸೇರಿ ಒಗ್ಗಟ್ಟಿನಿಂದ ಇಂಥ ಮಾದರಿ ಮದುವೆ ಮಾಡುವುದು ಅಗತ್ಯವಾಗಿದೆ. ಜೊತೆಗೆ ಯಾರು ವರದಕ್ಷಿಣೆ ಪಡೆದುಕೊಳ್ಳದೇ ವಿವಾಹವಾಗುತ್ತಾರೆ ಅವರು ಶ್ರೇಷ್ಠರು ಎಂಬುದನ್ನು ಅರಿತುಕೊಳ್ಳಬೇಕು. ಭಗವಂತನು ಶ್ರೀಮಂತಿಕೆ ಕೊಟ್ಟಾಗ ಸಮಾಜದಲ್ಲಿ ಹಿಂದುಳಿದ ಮತ್ತು ಬಡಜನರಿಗೆ ನೆರವಾಗುವ ಕಲ್ಯಾಣ ಕೆಲಸ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ. ಎಷ್ಟೋ ಜನ ಸಾಕಷ್ಟು ಸ್ಥಿತಿವಂತರಿದ್ದರೂ ಸೇವೆ ಮಾಡುವ ಗುಣ ಇರುವುದಿಲ್ಲ. ಮಾನವ ಜನ್ಮ ತಾಳಿದ ನಾವೆಲ್ಲ ಹೆತ್ತ ತಂದೆ-ತಾಯಿ, ವಿದ್ಯೆ ನೀಡಿದ ಗುರು ಹಾಗೂ ಸಮಾಜದ ಋಣ ತೀರಿಸಿದಾಗ ಬದುಕು ಸಾರ್ಥಕವಾಗೊಳ್ಳುತ್ತದೆ. ಅದರಲ್ಲೂ ಕಷ್ಟಪಟ್ಟು ಸಂಪಾದಿಸಿದ ಸಂಪತ್ತಿನಲ್ಲಿ ಬಡವರಿಗೆ ದಾನ, ಧರ್ಮ ಮಾಡುವ ಗುಣ ನಮ್ಮದಾಗಬೇಕು ಎಂದು ಹೇಳಿದರು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಅವರು ಮಾತನಾಡಿ, ಸಧ್ಯ ಗ್ರಾಮದ ದ್ಯಾಮಣ್ಣ ಮುತ್ಯಾ ಜಾತ್ರೆ ಮತ್ತು ಜಾತ್ರಾ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಭಕ್ತ ಹಾಗೂ ಸಮಾಜಸೇವಕ ರಾಮಣ್ಣ ರಾಜನಾಳ ನೇತೃತ್ವದಲ್ಲಿ ಹಲವು ವರ್ಷಗಳಿಂದ ನೆರವೆರಿಸಿಕೊಂಡು ಬರಲಾಗುತ್ತಿದೆ ಅವರ ಸಾಮಾಜಿಕ ಕಾರ್ಯ ನಿಜಕ್ಕೂ ಶ್ಲಾಘನಿಯ. ಮುಂಬರುವ ಒಂದು ವರ್ಷದೊಳಗಾಗಿ ಶಾಸಕ ಸಿ.ಎಸ್.ನಾಡಗೌಡರಿಂದ ಶಾಸಕರ ನಿಧಿಯಿಂದ ₹೧೦ ಲಕ್ಷ ವಿಶೇಷ ಅನುದಾನ ಬಿಡುಗಡೆಗೊಳಿಸುವ ಮೂಲಕ ಶಿರೋಳ ಗ್ರಾಮದಲ್ಲಿ ಸಮೂದಾಯ ಭವನ ನಿರ್ಮಿಸುವುದರ ಜೊತೆಗೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಈ ವೇಳೆ ನಿಡಗುಂದಿಯ ರುದ್ರೇಶ ಸಂಸ್ಥಾನಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಪಡೇಕನೂರದ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬೆಕಿನಾಳದ ಮಹೇಶ ಮುತ್ಯಾಗಳು, ಶರಣೆ ರಾಜೇಶ್ವರಿ ಮಾತೆಯರು, ಲಾಲಲಿಂಗೇಶ್ವರ ಶರಣರು ಸಾನ್ನಿಧ್ಯವಹಿಸಿದ್ದರು, ಜಾತ್ರಾ ಮುಖ್ಯಸ್ಥ ರಾಮಣ್ಣ ರಾಜನಾಳ, ಸಮಾಜಸೇವಕ ಶಾಂತಗೌಡ ಪಾಟೀಲ (ನಡಹಳ್ಳಿ) ಗ್ರಾಮ ಪಂಚಾಯಿತಿ ಅಧ್ಯಕ್ಷೇ ಶಕುಂತಲಾ ಚಂದಾಲಿಂಗ ಹಂಡರಗಲ್ಲ, ನಿಂಗಪ್ಪಗೌಡ ಬಪ್ಪರಗಿ, ಗಿರಿಜಾ ಬಂಡಿ, ದೇವೆಂದ್ರರ ವಾಲಿಕಾರ, ಸಿಪಿಐ ಮಲ್ಲಿಕಾರ್ಜುನ ತಳಸಿಗೇರಿ, ಮುತ್ತಣ್ಣ ನಾವದಗಿ, ಸೇರಿ ಹಲವರು ಉಪಸ್ಥಿತರಿದ್ದರು.