ಸೋಮನಹಳ್ಳಿ, ಚಾಮನಹಳ್ಳಿ ಉಪಕಚೇರಿಗಳಲ್ಲಿ ಇ-ಖಾತಾ ಸೇವೆ ಆರಂಭ: ರಾಧಿಕಾ

KannadaprabhaNewsNetwork |  
Published : Apr 19, 2026, 01:45 AM IST
18ಕೆಎಂಎನ್ ಡಿ19 | Kannada Prabha

ಸಾರಾಂಶ

ಸೋಮನಹಳ್ಳಿ ಮತ್ತು ಚಾಮನಹಳ್ಳಿ ಗ್ರಾಮ ಪಂಚಾಯ್ತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇ-ಖಾತಾ ಸೇವೆ ಕಳೆದ ಎರಡು ದಿನಗಳಿಂದ ಈ ಗ್ರಾಮಗಳಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ನಗರಸಭಾ ವ್ಯಾಪ್ತಿಗೆ ಸೇರಿದ ಸೋಮನಹಳ್ಳಿ ಹಾಗೂ ಚಾಮನಹಳ್ಳಿ ಉಪಕಚೇರಿಗಳಲ್ಲಿ ಇ-ಖಾತಾ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ರಾಧಿಕಾ ಹೇಳಿದರು.

ಪಟ್ಟಣದ ನಗರಸಭಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮನಹಳ್ಳಿ ಮತ್ತು ಚಾಮನಹಳ್ಳಿ ಗ್ರಾಮ ಪಂಚಾಯ್ತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇ-ಖಾತಾ ಸೇವೆ ಕಳೆದ ಎರಡು ದಿನಗಳಿಂದ ಈ ಗ್ರಾಮಗಳಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ ಎಂದರು.

ಮದ್ದೂರು ನಗರಸಭೆ ಸೇರ್ಪಡೆ ಸಂಬಂಧ ಗೆಜ್ಜಲಗೆರೆ ಹಾಗೂ ಗೊರವನಹಳ್ಳಿ ಗ್ರಾಮಗಳಲ್ಲಿ ಸಹ ಇ- ಖಾತಾ ಸೇವೆ ಕಾರ್ಯ ಆರಂಭ ಮಾಡಲು ಮಾಡಲು ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಮೇಲ್ಕಂಡ ಗ್ರಾಮಗಳಿಂದ ಮದ್ದೂರು ನಗರಸಭೆಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಬೇಕೆಂಬು ಉದ್ದೇಶದಿಂದ ಆಯಾ ಗ್ರಾಪಂ ಕಚೇರಿಗಳಲ್ಲಿ ಉಪಕಚೇರಿಗಳನ್ನು ತೆರೆದು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಖಾತೆ ಬಯಸಿ ಅರ್ಜಿ ಸಲ್ಲಿಸಿರುವ ಸಾರ್ವಜನಿಕರಿಗೆ ಸುಲಭವಾಗಿ ಸೌಲಭ್ಯ ಸಿಗಬೇಕೆಂಬ ಉದ್ದೇಶದಿಂದ ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ವಿಲೇವಾರಿಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡುವುದರೊಂದಿಗೆ ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದರು.

ಉಪಕಚೇರಿಗಳಲ್ಲಿ ಕಂಪ್ಯೂಟರ್ ಸ್ಕ್ಯಾನರ್ ಸೇರಿ ಡೇಟಾ ಆಪರೇಟರ್ ಗಳನ್ನು ನಿಯೋಜಿಸಲಾಗಿದೆ. ಪ್ರತಿ ಅರ್ಜಿಗೆ 50 ರು. ಶುಲ್ಕ ನಿಗದಿಗೊಳಿಸುವುದರೊಂದಿಗೆ ಸಕಾಲದಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಕಂದಾಯ ಅಧಿಕಾರಿ ಪುಟ್ಟಸ್ವಾಮಿ, ಕಂದಾಯ ನಿರೀಕ್ಷಕ ಲೋಕೇಶ್ ಮತ್ತಿತರರಿದ್ದರು.ಸಿಬಿಎಸ್‌ಇ ಪರೀಕ್ಷೆ ಎಲ್‌ಕೆಆರ್ ಶಾಲೆಗೆ ಶೇ.100 ರಷ್ಟು ಫಲಿತಾಂಶ

ಪಾಂಡವಪುರ:ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ ಪಟ್ಟಣದ ವಿಸಿ ಕಾಲೋನಿ ಎಲ್‌ಕೆಆರ್ ಹೈಯರ್ ಫ್ರೈಮರಿ ಮತ್ತು ಸೆಕೆಂಡರಿ ಸಿಬಿಎಸ್‌ಇ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ.

ಶಾಲೆಯೂ ಕಳೆದ ೧೨ ವರ್ಷಗಳಿಂದಲೂ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆಯುತ್ತಿದೆ. ಪರೀಕ್ಷೆಯಲ್ಲಿ 12 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.ಶಾಲೆ ವಿದ್ಯಾರ್ಥಿಗಳಾದ ತನಿಷ ಶೇ.96 ಅಂಕಪಡೆದು ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಉಳಿದಂತೆ ಮಯೂರ್ ಎಲ್ ಶೇ.59, ಕಾರ್ತಿಕ್ ಎ.ಪಿ. ಶೇ.94, ಎಂ.ಸಾನಿಕ ಶೇ.91, ವೈಷ್ಣವಿ ಎಚ್.ಕೆ ಶೇ.90.02, ಇಂದರ ಆನಂದ್ ಶೇ.89.4, ಸ್ನೇಹಸತೀಶ್ ಶೇ.89, ಸಾಧನ ವಾಸುದೇವ್ ಶೇ.87.04, ಪ್ರತಿಗ್ಯಮೋಟಾವಟ್ ಶೇ.87.2, ಪುನೀತ್‌ಗೌಡ ಎಂ.ಎನ್. ಶೇ.87, ಕೃತಿಕ ಪಿ.ಆರ್ ಶೇ.85.2 ರಷ್ಟು ಅಂಕ ಪಡೆದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಶಾಲೆ ಆಡಳಿತ ಮಂಡಳಿಯವರು, ಶಿಕ್ಷಕ ವೃಂದವರು ಅಭಿನಂದಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು: ಪ್ರೊ.ಕೆ.ಶಿವಚಿತ್ತಪ್ಪ
ಹಬ್ಬಗಳ ಆಚರಣೆ ಗ್ರಾಮೀಣ ಜನರ ಒಗ್ಗಟ್ಟಿನ ಸಂಕೇತ: ಮಲ್ಲಿಕಾರ್ಜನ್