ಇ- ಸ್ವತ್ತು ತಿದ್ದುಪಡಿ ಪರಿಶೀಲನೆ

KannadaprabhaNewsNetwork | Published : Jun 2, 2024 1:46 AM

ಸಾರಾಂಶ

ಕನಕಪುರ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿವೇಶನದ ಇ-ಸ್ವತ್ತು ಪರಿಷ್ಕರಣೆ ಮಾಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಆದೇಶದ ಮೇರೆಗೆ ತಾಪಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕನಕಪುರ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿವೇಶನದ ಇ-ಸ್ವತ್ತು ಪರಿಷ್ಕರಣೆ ಮಾಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಆದೇಶದ ಮೇರೆಗೆ ತಾಪಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಅಡಿಕೆಹಳ್ಳ ಗ್ರಾಮದ ಶಿವಮ್ಮ ಕೋ ಶಿವಣ್ಣ ಅವರಿಗೆ ಸೇರಿದ ಆಸ್ತಿಗೆ ಉಯ್ಯಂಬಳ್ಳಿ ಗ್ರಾಪಂ ವತಿಯಿಂದ ಕಳೆದ ಡಿ.28ರಂದು ಇ- ಸ್ವತ್ತು ಮಾಡಿಕೊಡಲಾಗಿತ್ತು, ನ್ಯಾಯಾಲಯದಲ್ಲೂ ನಮ್ಮ ಪರವಾಗಿ ಆದೇಶವಾಗಿತ್ತು. ಈ ಆಸ್ತಿಯ ಇ-ಸ್ವತ್ತನ್ನು ಯಾವುದೇ ರೀತಿ ತಿದ್ದುಪಡಿ ಮಾಡದಂತೆ ಉಯ್ಯಂಬಳ್ಳಿ ಗ್ರಾಪಂ ಅಧಿಕಾರಿಗಳಿಗೆ ಕಳೆದ ಮೇ 9ರಂದು ದೂರು ಸಲ್ಲಿಸಲಾಗಿತ್ತು.

ದೂರು ನೀಡಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಎದುರುದಾರರಿಗೆ ಇ-ಸ್ವತ್ತು ತಿದ್ದುಪಡಿ ಮಾಡಿಕೊಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ನ್ಯಾಯಾಲಯದ ಆದೇಶಕ್ಕೆ ವಿರುದ್ಧ ನಡೆದುಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳನ್ನು ಈ ಕೂಡಲೇ ಸೇವೆಯಿಂದ ವಜಾ ಮಾಡಿ ಶಿಸ್ತು ಕ್ರಮ ಕೈ ಗೊಳ್ಳುವಂತೆ ಶಿವಮ್ಮ ಮಗ ಅಡಿಕೆಹಳ್ಳ ಗ್ರಾಮದ ಪವನ್ಕುಮಾರ್ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ದೂರನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿಗಳು ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯ್ತಿ ಇಒ ಸೂಚನೆ ಮೇರೆಗೆ ಯೋಜನಾಧಿಕಾರಿ ಕುಮಾರ್, ವ್ಯವಸ್ಥಾಪಕ ಮುತ್ತುರಾಜ್, ವಿಷಯ ನಿರ್ವಾಹಕ ಶೋಭರಾಜು ಸ್ಥಳೀಯ ಅಧಿಕಾರಿಗಳು ಹಾಗೂ ದೂರುದಾರರ ಸಮ್ಮುಖದಲ್ಲಿ ಅಡಿಕೆಹಳ್ಳ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.ಕೋಟ್‌..........

ತಾಲೂಕು ಪಂಚಾಯ್ತಿ ಇಒ ಆದೇಶದ ಮೇರೆಗೆ ಇ-ಸ್ವತ್ತು ತಿದ್ದುಪಡಿ ದೂರಿನ ಸಂಬಂಧ ಅಡಿಕೆ ಹಳ್ಳ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ.

-ಕುಮಾರ್, ಯೋಜನಾಧಿಕಾರಿ, ತಾಪಂಕೆ ಕೆ ಪಿ ಸುದ್ದಿ 03:

ನ್ಯಾಯಾಲಯದ ಆದೇಶ ಉಲ್ಲಂಘಿಸಿ ಇ-ಸ್ವತ್ತು ತಿದ್ದು ಪಡಿಮಾಡಿರುವ ದೂರಿನನ್ವಯ ತಾಲೂಕು ಪಂಚಾಯ್ತಿ ಅಧಿಕಾರಿಗಳು ಅಡಿಕೆ ಹಳ್ಳ ಗ್ರಾಮಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Share this article