ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಇ-ಖಾತಾ ಅಭಿಯಾನದಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಅಭಿಪ್ರಾಯ ಪಟ್ಟರು.
ಮಂಗಳವಾರ ಪುರಸಭೆಯಿಂದ ನಡೆದ ಇ-ಖಾತಾ ಅಭಿಯಾನ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ 2500 ಅನಧಿಕೃತ ಖಾತೆಗಳು ಇವೆ. ಅನೇಕ ಲೇಔಟ್.ಗಳ ಮನೆಗಳು ಅನಧಿಕೃತವಾಗಿವೆ. ಎ, ಬಿ ಖಾತಾ ವರ್ಗಾವಣೆ, ಅನಧಿಕೃತ ಆಸ್ತಿಗಳಿಗೆ ಇ-ಖಾತೆ ಪಡೆಯಲು ಈ ಅಭಿಯಾನ ಪೂರಕವಾಗಿದೆ ಎಂದು ಹೇಳಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಎಲ್ಲರಿಗೂ ಅವಕಾಶವಿದೆ. ಇ-ಖಾತಾ ಮೂಲಕ ಆಸ್ತಿ ಅಧಿಕೃತ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾದಿಕಾರಿ ಎಚ್.ಪ್ರಶಾಂತ್ ಮಾತನಾಡಿ ಇ-ಖಾತಾ ಅಭಿಯಾನಕ್ಕೆ ಅದೇಶ ನೀಡಿ, ಸರ್ಕಾರ ಕೂಡ ಆಸಕ್ತಿ ವಹಿಸಿದೆ, ಜನರಿಗೆ ದಾಖಲೆ ಒದಗಿಸಬೇಕು, ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಇ-ಖಾತೆ ಪಡೆಯಬೇಕು ಎಂದು ಹೇಳಿದರು.ವಿಶೇಷ ಚೇತನರಿಗೆ ದ್ವಿಚಕ್ರ ವಾಹನ ಮತ್ತು ವಿದ್ಯಾರ್ಥಿ ವೇತನ ವಿತರಣೆ ನರವೇರಿಸಲಾಯಿತು. ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್, ಶ್ರೀನಿವಾಸ್ ಭಾಗವಹಿಸಿದ್ದರು. 25ಕೆಟಿಆರ್.ಕೆ.10ಃ
ತರೀಕೆರೆಯಲ್ಲಿ ಪುರಸಭೆಯಿಂದ ನಡೆದ ಇ-ಖಾತಾ ಅಭಿಯಾನ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮವನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಇದ್ದರು.