ದಾಬಸ್‍ಪೇಟೆ: ಗ್ರಾಮೀಣ ಪ್ರದೇಶದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ, ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕು. ಇದರಿಂದ ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಶಿವರಾಮು ರೈತರಿಗೆ ಸಲಹೆ ನೀಡಿದರು.
ಕಾಯಿಲೆ ಬಿದ್ದ ರಾಸುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯಲಿ ಎಂದು ಇಲಾಖೆಯಿಂದ ಆಂಬ್ಯುಲೆನ್ಸ್ ಸೇವೆ ದೊರೆಯುತ್ತಿದ್ದು, 1962 ನಂಬರ್‌ಗೆ ಕರೆ ಮಾಡಿದರೆ ಇದ್ದಲ್ಲಿಗೆ ಬಂದು ಚಿಕಿತ್ಸೆ ನೀಡಲಾಗುತ್ತದೆ. ಬಮುಲ್ ಮತ್ತು ಪಶುವೈದ್ಯ ಇಲಾಖೆಯಿಂದ ಶೇ.95ರಷ್ಟು ಹೆಣ್ಣು ಕರು ಹುಟ್ಟುವ ಸಮೆನ್ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವೈದ್ಯರ ಕೊರತೆ ನೀಗಿಸಿ ರೈತರ ಕೋರಿಕೆ: ಹಲವು ತಿಂಗಳಿಂದ ನರಸೀಪುರದ ಪಶು ಚಿಕಿತ್ಸಾಲಯದಲ್ಲಿ ವೈದರು ಇಲ್ಲದೆ ರೈತರಿಗೆ ತೊಂದರೆ ಆಗಿರುವ ಬಗ್ಗೆ ರೈತರು ಸಹಾಯಕ ನಿರ್ದೇಶಕ ಶಿವರಾಂ ಅವರ ಗಮನ ಸೆಳೆದಾಗ, ನಮ್ಮ ಗಮನಕ್ಕೂ ಇದೆ. ನಾವು ಹಲವು ವೈದ್ಯರನ್ನು ಸಂಪರ್ಕ ಮಾಡಲು ಮುಂದಾಗಿದ್ದೇವೆ. ಆದರೆ ಯಾರು ಬರಲು ಒಪ್ಪುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ 400 ಮಂದಿ ಪಶು ವೈದ್ಯರನ್ನು ನೇಮಿಸಿಕೊಳ್ಳಲಿದ್ದು, ಆಗ ಖಂಡಿತ ಒಬ್ಬ ವೈದ್ಯರನ್ನು ಇಲ್ಲಿಗೆ ಹಾಕಿಸುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.ಸೋಂಪುರ ರೋಟರಿ ಕ್ಲಬ್ ಅಧ್ಯಕ್ಷ ದೇವರಾಜು ಮಾತನಾಡಿ ನಮ್ಮ ರೋಟರಿ ಸಂಸ್ಥೆಯಿಂದ ಸಾಧ್ಯವಾದಷ್ಟು ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬಂದಿದ್ದೇವೆ. ಉಚಿತವಾಗಿ ಔಷಧಿ ಹಾಗೂ ಚಿಕಿತ್ಸೆ ಕೊಡಿಸಲು ರೋಟರಿ ಕ್ಲಬ್ ಸದಾ ಮುಂದಿರುತ್ತೆ ಎಂದರು
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಬಮುಲ್ ವೈದ್ಯರಾದ ಡಾ. ಸಾಗರ್, ಪಶು ಇಲಾಖೆಯ ಡಾ. ಮಸೂದ್ ಖಾನ್ ದುರಾನಿ, ಅರುಣ್ ಕುಮಾರ್, ಬಾಲಸುಬ್ರಹ್ಮಣ್ಯ, ನಯನಕುಮಾರ್, ಸಿಬ್ಬಂದಿಗಳಾದ ಬಸವರಾಜು, ಮಲ್ಲೇಶ್, ಹರೀಶ್, ನರಸೀಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಂದ್ರಹಾಸ ಗೌಡ, ಮುಖಂಡ ಜಿ.ಭೈರಣ್ಣ. ರೋಟರಿ ಪದಾಧಿಕಾರಿಗಳಾದ ಚನ್ನತಿಮ್ಮಯ್ಯ, ಶಶಿಧರ್, ಭೈರಣ್ಣ, ವಿಶ್ವನಾಥ ಬಾಬು, ಯುವರಾಜು ರೋಟರಿ ಕಾರ್ಯದರ್ಶಿ, ಯುವರಾಜ್ ರೈತರು ಹಾಜರಿದ್ದರು.
ಪೋಟೋ 1 : ಸೋಂಪುರ ಹೋಬಳಿಯ ನರಸೀಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಬರಡು ರಾಸುಗಳ ಉಚಿತ ಪಶು ಚಿಕಿತ್ಸಾ ಶಿಬಿರ ಮತ್ತು ಮಿಶ್ರ ತಳಿ ಕರುಗಳ ಪ್ರದರ್ಶನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಮು ಚಾಲನೆ ನೀಡಿದರು.