ಭೂಮಿ ನಮ್ಮ ಎಲ್ಲ ಜೀವಿಗಳ ಏಕೈಕ ಮನೆ

KannadaprabhaNewsNetwork |  
Published : Jun 07, 2024, 12:32 AM IST
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಯನ್ನು ನೆಡಲಾಯಿತು | Kannada Prabha

ಸಾರಾಂಶ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವದ ಕುರಿತು ಸರ್ವಲೋಕಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಅವರು ಜಾಗೃತಿ ಮೂಡಿಸಿ, ಸಸಿ ನೆಟ್ಟು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿಭೂಮಿ ನಮ್ಮ ಎಲ್ಲ ಜೀವಿಗಳ ಏಕೈಕ ಮನೆಯಾಗಿದೆ ಎಂದು ಸರ್ವಲೋಕಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಹೇಳಿದರು.ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವದ ಕುರಿತು ಜಾಗೃತಿ ಮೂಡಿಸಿ, ಸಸಿ ನೆಟ್ಟು ಮಾತನಾಡಿದ ಅವರು, ಇಡೀ ಜಗತ್ತು ವಿಶ್ವ ಪರಿಸರ ದಿನ ಆಚರಿಸುತ್ತಿದೆ. 50 ವರ್ಷಗಳ ಹಿಂದೆ ಒಂದೇ ಭೂಮಿ ಎಂಬ ಘೋಷಣೆಯೊಂದಿಗೆ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. 5 ದಶಕಗಳ ನಂತರವೂ ಆ ಮಾತು ಹಾಗೆ ಇದೆ ಎಂದರು.ನಾವೆಲ್ಲರೂ ಮಕ್ಕಳೊಂದಿಗೆ ಅಥವಾ ನಿಮ್ಮ ಪ್ರದೇಶದ ಜನರೊಂದಿಗೆ ಮಾತನಾಡುವ ಮೂಲಕ ನೀವು ಸಣ್ಣ ಮಟ್ಟದಲ್ಲಿ ಪರಿಸರ ದಿನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಸಲಹೆ ನೀಡಿದರು.ಪ್ರಾಚಾರ್ಯೆ ಪೂಜಾ ಪಾಟ್ಕರ್, ಗಣೇಶ ಕರಲೇಕರ್, ಬಲರಾಮ ಕಣಬರಕರ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ನಗರದಲ್ಲಿ ತೋಟ ಅಥವಾ ತೋಟ ಮಾಡಲು ಸ್ಥಳವನ್ನು ಹುಡುಕುವುದು ಕಷ್ಟ. ಆದರೆ, ತಾರಸಿಯಲ್ಲಿ ಸಣ್ಣ ಮಟ್ಟಿಗೆ ಹಸಿರನ್ನು ಬೆಳೆಸಬಹುದು. ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಬಹುದು. ವಿಶ್ವ ಪರಿಸರ ದಿನದಂದು ಸಾರ್ವಜನಿಕ ಸಾರಿಗೆಯನ್ನು ಬಳಸಲು ನಿರ್ಧರಿಸಿ. ಈ ಮೂಲಕ ಅನಗತ್ಯವಾಗಿ ವಾಹನ ಬಳಸಿ ಪರಿಸರಕ್ಕಾಗುವ ಮಾಲಿನ್ಯ ತಪ್ಪಿಸಿ.

-ವೀರೇಶ ಬಸಯ್ಯ ಹಿರೇಮಠ,

ಸರ್ವಲೋಕಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗ ಅಮರೇಶ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ
ಕಾರ್ಯಭಾರ ಆಧರಿಸಿ ಶಿಕ್ಷಕರ ನೇಮಕ - ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿ