ಕನ್ನಡಪ್ರಭ ವಾರ್ತೆ, ಕಡೂರು
ಕ್ಷೇತ್ರದ ಭೋವಿ ಜನಾಂಗದ ಕುಲ ಕಸಬುದಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಶಾಸಕ ಕೆ.ಎಸ್.ಆನಂದ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಶೋಷಿತ ಭೋವಿ ಸಮಾಜದ ಧ್ವನಿಯಾಗಿದ್ದಾರೆ ಎಂದು ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎಮ್ಮೆದೊಡ್ಡಿ ನಾಗರಾಜ್ ತಿಳಿಸಿದರು.ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಲ್ಲು ಹೊಡೆಯುವ ವೃತ್ತಿ ಭೋವಿ ಸಮಾಜದ ಕುಲ ಕಸುಬಾಗಿದ್ದು. ಕ್ಷೇತ್ರದಲ್ಲಿ ಸುಮಾರು 800 ಕುಟುಂಬಗಳು ದಿನ ನಿತ್ಯ ಕಲ್ಲು ಹೊಡೆದು ಜೀವನ ಸಾಗಿಸುತ್ತಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ 31-ಜಡ್‍ಸಿ ನಿಯಮದಿಂದ ಇವರ ಜೀವನಕ್ಕೆ ಕುತ್ತು ಬಂದಿದೆ ಎಂದು ವಿಧಾನಸಭೆ ಕಲಾಪದಲ್ಲಿ ನಮ್ಮ ಭೋವಿ ಸಮಾಜದ ಪರವಾಗಿ ಧ್ವನಿ ಎತ್ತಿದ್ದು, ಸಚಿವರು ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿರು ವುದಕ್ಕೆ ಶಾಸಕರಿಗೆ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ತಾಲೂಕಿನ ತುರುವನಹಳ್ಳಿ,ಚೌಡ್ಲಾಪುರ, ಮಲ್ಲೇಶ್ವರ ಸೇರಿದಂತೆ ಮತ್ತಿತರ ಗ್ರಾಮದ ಭೋವಿ ಜನಾಂಗದವರು 50-60 ವರ್ಷಗಳಿಂದ ಈ ವೃತ್ತಿ ಮಾಡುತ್ತಿದ್ದು. ಭೂ ಮತ್ತು ಗಣಿ ಇಲಾಖೆ 31-ಜಡ್‍ಸಿ ಅಡಿ ಕ್ರಶರ್ ಸ್ಥಾಪಿಸಲು ಹಾಗೂ ಎಂ.ಸ್ಯಾಂಡ್ ತೆಗೆಯಲು ಅರ್ಜಿ ಹಾಕಿಕೊಂಡವರಿಗೆ ಬಂಡೆ ಇರುವ ಭೂಮಿ ನೀಡುತ್ತಿದೆ. ಇದರಿಂದ ಮೂಲ ಕಸುಬುದಾರರಾದ ಭೋವಿ ಜನಾಂಗ ಬೀದಿಗೆ ಬೀಳುತ್ತಿದೆ. ಕ್ರಷರ್ ಮಾಲೀಕರಿಗೆ 31ಜಡ್‍ಸಿ ಅಡಿ ಹಾಕಿದ ಅರ್ಜಿ ತಿರಸ್ಕರಿಸಿ ಭೋವಿ ಜನಾಂಗಕ್ಕೆ ಉಳಿಸಿ ಕೊಳ್ಳಬೇಕೆಂದು ಮನವಿ ಮಾಡಿದರು.ರಾಜ್ಯದ ಇತರೆ ಭಾಗಗಳಲ್ಲಿಯೂ ಇದೇ ಸಮಸ್ಯೆ ಇದ್ದು 31 ಜಡ್‍ಸಿ ವಾಪಸ್ ಪಡೆಯಬೇಕೆಂದು ಶಾಸಕ ಆನಂದ್ ಅವರ ಬೆಂಬಲಕ್ಕೆ ಅನೇಕ ಶಾಸಕರು ನಿಂತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಜಯಣ್ಣ ಮಲ್ಲೇಶ್ವರ, ಆರ್.ಕೆ.ಕುಮಾರ್,ಕೊಲ್ಲಾಭೋವಿ,ತಿಮ್ಮಪ್ಪ ಲಕ್ಷ್ಮಿಪುರ,ಗುಡ್ಡದಹಟ್ಟಿ ರತ್ನಮ್ಮ,ಆಟೋ ಸತೀಶ್ ಮತ್ತಿತರರು ಇದ್ದರು.22ಕೆಕೆಡಿಯು1.
ಭೋವಿ ಸಮಾಜದ ತಾಲೂಕು ಅಧ್ಯಕ್ಷ ಎಮ್ಮೆದೊಡ್ಡಿ ನಾಗರಾಜ್