ಆರೋಗ್ಯಕರ ಆಹಾರ ಸೇವಿಸಿ, ಜಂಕ್‌ ಫುಡ್‌ ತ್ಯಜಿಸಿ: ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Dec 06, 2025, 01:15 AM IST
4 | Kannada Prabha

ಸಾರಾಂಶ

ಆರೋಗ್ಯ ವರ್ಲ್ಡ್‌ಬೆಂಗಳೂರು ನಗರದಲ್ಲಿ ಸಾಂಕ್ರಮಿಕವಲ್ಲದ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡು, ಅದರ ಯಶಸ್ಸಿನ ಬಳಿಕ ಮೈಸೂರಿನಲ್ಲಿ ಸ್ವಸ್ಥ ಮೈಸೂರು ಶೀರ್ಷಿಕೆಯಡಿ ಮುಂದುವರೆಸುತ್ತಿರುವುದು ಶ್ವಾಘನೀಯ.

ಫೋಟೋ- 5ಎಂವೈಎಸ್4ಮೈಸೂರಿನ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್‌ ನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ಮತ್ತು ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸಹಯೋಗದಲ್ಲಿ ಆರಂಭಿಸಿರುವ ಸ್ವಸ್ಥ ಮೈಸೂರು ಅಭಿಯಾನವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಿದರು. ಪ್ರಮೋದಾ ದೇವಿ ಒಡೆಯರ್, ನಳಿನಿ ಸಾಲಿಗ್ರಾಮ, ಜಿ. ಲಕ್ಷ್ಮೀಕಾಂತ ರೆಡ್ಡಿ ಇದ್ದರು.----ಕನ್ನಡಪ್ರಭ ವಾರ್ತೆ ಮೈಸೂರುಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಆರೋಗ್ಯಕರ ಆಹಾರ ಸೇವಿಸಿ, ಜಂಕ್‌ ಫುಡ್‌ಸೇವನೆ ತ್ಯಜಿಸುವ ಮನಸ್ಥೈರ್ಯ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್‌ ಕರೆ ನೀಡಿದರು.ನಗರದ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್‌ ನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ಮತ್ತು ಆರೋಗ್ಯ ವರ್ಲ್ಡ್ ಇಂಡಿಯಾ ಟ್ರಸ್ಟ್ ಸಹಯೋಗದಲ್ಲಿ ಆರಂಭಿಸಿರುವ ಸ್ವಸ್ಥ ಮೈಸೂರು ಅಭಿಯಾನವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.ಆರೋಗ್ಯ ವರ್ಲ್ಡ್‌ಬೆಂಗಳೂರು ನಗರದಲ್ಲಿ ಸಾಂಕ್ರಮಿಕವಲ್ಲದ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡು, ಅದರ ಯಶಸ್ಸಿನ ಬಳಿಕ ಮೈಸೂರಿನಲ್ಲಿ ಸ್ವಸ್ಥ ಮೈಸೂರು ಶೀರ್ಷಿಕೆಯಡಿ ಮುಂದುವರೆಸುತ್ತಿರುವುದು ಶ್ವಾಘನೀಯ. ಈ ಅಭಿಯಾನವನ್ನು ಇನ್ನಷ್ಟು ಯಶಸ್ವಿಗೊಳಿಸಲು ಆರೋಗ್ಯ ಇಲಾಖೆಯ ಸಹಕಾರವನ್ನು ನೀಡಲು ಒಪ್ಪಂದ ಮಾಡಿಕೊಂಡಿದ್ದೇವೆ. ಮುಂದಿನ ಎರಡು ವರ್ಷದಲ್ಲಿ ಮೈಸೂರಿನ ಜನರ ಆರೋಗ್ಯಕರ ಜೀವನ ಉತ್ತೇಜಿಸುವ ಕೆಲಸ ಈ ಮೂಲಕ ಆಗಲಿದೆ ಎಂದರು.ಆರೋಗ್ಯ ಇಲಾಖೆಯು ಈಗಾಗಲೇ ರಾಜ್ಯಾದ್ಯಂತ ಗೃಹ ಆರೋಗ್ಯ ಜಾರಿ ಮಾಡಿದ್ದು, 30 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಧುಮೇಹ, ಅಧಿಕ ರಕ್ತದೊತ್ತಡ, ಕೆಲವು ಕ್ಯಾನ್ಸರ್‌ಸೇರಿದಂತೆ 14 ಅಸಾಂಕ್ರಮಿಕ ರೋಗಿಗಳ ತಪಾಸಣೆ ನಡೆಸಿ, ಉಚಿತ ಔಷಧ ನೀಡುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ 1 ಕೋಟಿ ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದು ಅವರು ಹೇಳಿದರು. ಈ ದೇಶದ ಬೆನ್ನೆಲುಬು ಶಿಕ್ಷಣ ಹಾಗೂ ಆರೋಗ್ಯ, ಈ ಎರಡೂ ಉತ್ತಮವಾಗಿದ್ದರೆ ಮಾತ್ರ ಆ ದೇಶ ಸುಭೀಕ್ಷವಾಗಿರಲು ಸಾಧ್ಯ. ಕೇವಲ ಸರ್ಕಾರದಿಂದ ಮಾತ್ರ ಆರೋಗ್ಯ ಸಂಬಂಧಿಸಿದ ಚಟುವಟಿಕೆ ನಡೆಸುವುದು ಕಷ್ಟ. ಸಮಾಜಮುಖಿ ಸಂಸ್ಥೆಗಳೂ ಸ್ವಯಂಪ್ರೇರಿತವಾಗಿ ಇಂತಹ ಜಾಗೃತಿ ಕಾರ್ಯಕ್ರಮ ನಡೆಸಬೇಕು ಎಂದರು.ಆರೋಗ್ಯ ಮತ್ತು ಶಿಕ್ಷಣ ದೇಶದ ಅಭಿವೃದ್ಧಿಯ ಸಂಕೇತ. ಆದರೆ, ಯಾವ ದೇಶ ಜಿಡಿಪಿ ಮತ್ತು ಆರ್ಥಿಕ ಪ್ರಗತಿಯನ್ನು ಸಾಧಿಸುವತ್ತ ಹೆಜ್ಜೆ ಹಾಕುತ್ತಿರುತ್ತದೆಯೋ ಅಂತಹ ಕಡೆ ಅಸಾಂಕ್ರಮಿಕ ರೋಗಗಳು ಹೆಚ್ಚಾಗುತ್ತಿರುವುದ್ನು ಕಾಣುತ್ತಿದ್ದೇವೆ. ಅದರಲ್ಲಿ ಭಾರತವೂ ಹೊರತಾಗಿಲ್ಲ ಎಂದು ಅವರು ತಿಳಿಸಿದರು.ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗಿದ್ದು, ಜನರು ಡಯಾಬಿಟಿಸಿ, ರಕ್ತದೊತ್ತಡ, ಕಿಡ್ನಿ ವೈಫಲ್ಯ, ಕ್ಯಾನ್ಸರ್, ಹೃದಯಾಘಾತ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲ ಪ್ರಮುಖ ಕಾರಣ ಪ್ಯಾಕೆಟ್ ಆಹಾರ ಸೇವನೆ, ಫಾಸ್ಟ್ ಪುಡ್, ಬೀದಿ ಬದಿಯ ಆಹಾರ, ಕರಿದ ಪದಾರ್ಥಗಳು, ಅತಿಯಾದ ತಂಪು ಪಾನಿಯಾಗಳ ಸೇವನೆ ಹಾಗೂ ಒತ್ತಡದ ಜೀವನಶೈಲಿ ಕಾರಣ. ಹೀಗಾಗಿ, ಮದ್ಯಪಾನ, ಧೂಮಪಾನಗಳಂತಹ ಇತರೆ ದುಶ್ಚಟಗಳಿಂದ ದೂರ ಇರಬೇಕು ಎಂದು ಅವರು ಹೇಳಿದರು.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ಅಧ್ಯಕ್ಷೆ ಪ್ರಮೋದಾ ದೇವಿ ಒಡೆಯರ್, ಆರೋಗ್ಯ ವರ್ಲ್ಡ್‌ಸಂಸ್ಥಾಪಕಿ ನಳಿನಿ ಸಾಲಿಗ್ರಾಮ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆ ಕಟಾವು ಪ್ರಯೋಗ ನಿರ್ಲಕ್ಷಿಸಿದರೆ ಕಠಿಣ ಕ್ರಮ
ಜಿಐ ಟ್ಯಾಗ್ ಉತ್ಪನ್ನಗಳ ಬೆಳವಣಿಗೆಯಿಂದ ಆರ್ಥಿಕ ಸ್ವಾವಲಂಬನೆ