ಋತುಮಾನಕ್ಕೆ ತಕ್ಕಂತೆ ಆಹಾರ ಸೇವಿಸಿ

KannadaprabhaNewsNetwork |  
Published : Aug 08, 2025, 01:01 AM IST
ಋತು ಮಾನಕ್ಕೆ ತಕ್ಕಂತೆ ಆಹಾರ ಉಪಯೋಗಿಸಿ | Kannada Prabha

ಸಾರಾಂಶ

ಋತುಮಾನಗಳಿಗೆ ತಕ್ಕಂತೆ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಜೊತೆಗೆ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು ಎಂದು ಪಿಎಂ ಪೋಷಣ್‌ ಶಕ್ತಿ ಯೋಜನೆ ಸಹಾಯಕ ನಿರ್ದೇಶಕ ಸತೀಶ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಋತುಮಾನಗಳಿಗೆ ತಕ್ಕಂತೆ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಜೊತೆಗೆ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯಕರ ಜೀವನ ನಡೆಸಬೇಕು ಎಂದು ಪಿಎಂ ಪೋಷಣ್‌ ಶಕ್ತಿ ಯೋಜನೆ ಸಹಾಯಕ ನಿರ್ದೇಶಕ ಸತೀಶ್ ಸಲಹೆ ನೀಡಿದರು.

ತಾಲೂಕಿನ ದೇಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ್ ಪಖ್ವಾಡ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಥಳೀಯವಾಗಿ ಸಿಗುವ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಮಕ್ಕಳು ಬಳಸಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಆಹಾರದಲ್ಲಿ ಕಲಬೆರಕೆ ಯಥೇಚ್ಛವಾಗಿ ನಡೆಯುತ್ತಿದೆ ಇದಕ್ಕೆ ನಾವರಲ್ಲರು ಕಡಿವಾಣ ಹಾಕಬೇಕಿದೆ ಎಂದರು.

ನಾವೆಲ್ಲ ರೈತಾಪಿ ಕುಟುಂಬದವರಾಗಿರುವ ಕಾರಣ ಸಾವಯವ ವಿಧಾನದಲ್ಲಿ ಹಣ್ಣು,ತರಕಾರಿ,ದವಸ,ಧಾನ್ಯ ಬೆಳೆದು ಆಹಾರದಲ್ಲಿ ಉಪಯೋಗಿಸಬೇಕು ಜೊತೆಗೆ ಶಾಲೆಗಳಲ್ಲಿ ನೀಡುವ ಪೌಷ್ಟಿಕ ಆಹಾರ ಸೇವಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪ್ರಸನ್ನ, ಮುಖ್ಯ ಶಿಕ್ಷಕರಾದ ನಂದೀಶ, ಸಿಆರ್ ಪಿ ಚಂದ್ರಶೇಖರ್, ಆಲತ್ತೂರು ಶಾಲೆ ಮುಖ್ಯ ಶಿಕ್ಷಕ ಶಿವಸ್ವಾಮಿ, ಎಸ್‌ಡಿ ಎಂಸಿ ಸದಸ್ಯರು, ಪೋಷಕರು,ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ