ಇಕೋ-ಕ್ಲಬ್‌: ವಿದ್ಯಾರ್ಥಿಗಳಿಂದ ಶ್ರಮದಾನ

KannadaprabhaNewsNetwork |  
Published : Jan 08, 2025, 12:18 AM IST
7ಕೆಎಂಎನ್ ಡಿ24 | Kannada Prabha

ಸಾರಾಂಶ

ಭವಿಷ್ಯದ ಪೀಳಿಗೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಮೂಡಿಸುವಲ್ಲಿ ಇಕೋ- ಕ್ಲಬ್‌ಗಳು ಕೆಲಸ ಮಾಡುತ್ತಿವೆ. ತ್ಯಾಜ್ಯ ವಿಂಗಡಣೆ, ಸಸಿ ನೆಡುವಿಕೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವ ವೈವಿಧ್ಯತೆ ಸಂರಕ್ಷಣೆ ಮಾಡುವುದು ಸೇರಿದಂತೆ ಪರಿಸರ ಸಂಬಂಧಿಸಿದ ಚಟುವಟಿಕೆಗಳನ್ನು ಪಾಲ್ಗೊಳ್ಳುವಿಕೆಯನ್ನು ಒಳಗೊಳ್ಳುವುದು ಇಕೋ- ಕ್ಲಬ್ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಬೆನಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ-ಕ್ಲಬ್‌ನಿಂದ ಮಂಗಳವಾರ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ ನಡೆಯಿತು.

ಮುಖ್ಯ ಶಿಕ್ಷಕ ಶಂಕರೇಗೌಡ ಮಾತನಾಡಿ, ಭವಿಷ್ಯದ ಪೀಳಿಗೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಮೂಡಿಸುವಲ್ಲಿ ಇಕೋ- ಕ್ಲಬ್‌ಗಳು ಕೆಲಸ ಮಾಡುತ್ತಿವೆ. ತ್ಯಾಜ್ಯ ವಿಂಗಡಣೆ, ಸಸಿ ನೆಡುವಿಕೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೀವ ವೈವಿಧ್ಯತೆ ಸಂರಕ್ಷಣೆ ಮಾಡುವುದು ಸೇರಿದಂತೆ ಪರಿಸರ ಸಂಬಂಧಿಸಿದ ಚಟುವಟಿಕೆಗಳನ್ನು ಪಾಲ್ಗೊಳ್ಳುವಿಕೆಯನ್ನು ಒಳಗೊಳ್ಳುವುದು ಇಕೋ- ಕ್ಲಬ್ ಉದ್ದೇಶವಾಗಿದೆ ಎಂದರು.

ಬೆನಮನಹಳ್ಳಿ ಹೊರವಲಯದ ಜಡೆ ಮುನೇಶ್ವರ ಸ್ವಾಮಿ ದೇವಾಲಯದ ಸುತ್ತಮುತ್ತಲಿನ ಅವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಈ ವೇಳೆ ಮುಖ್ಯ ಶಿಕ್ಷಕರಾದ ಶಂಕರೇಗೌಡ, ಎಸ್ಡಿಎಂಸಿ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ಸುನಂದಾ, ಸಿಆರ್‌ಪಿ ಜಿ.ಎಸ್.ಕೃಷ್ಣ, ತಿಮ್ಮಯ್ಯ, ಶಿಕ್ಷಕರಾದ ಮುತ್ತುರಾಜು, ಆಶಾಜ್ಯೋತಿ, ಉಮಾ, ಹರೀಶ್, ಪ್ರದೀಪ್ ಕುಮಾರ್, ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ರವಿ, ಸಾಗರ್, ಕೆಂಪಾಜಮ್ಮ, ಯಶೋಧಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸಂಹವನ ಕೌಶಲ್ಯ ವೃದ್ಧಿಗೆ ಕಿಡ್ಸ್ ಶೋ ಸಹಕಾರಿ: ಸೌಮ್ಯ

ಹಲಗೂರು: ಮಾತುಗಾರಿಕೆ, ಪಠ್ಯ ವಿಷಯಗಳ ಗ್ರಹಿಕೆ, ಸಂವಹನ ಕೌಶಲ್ಯ ಮಗುವಿನ ಕಲಿಕಾಶಕ್ತಿಯನ್ನು ವೃದ್ಧಿಸಲು ಕಿಡ್ಸ್ ಶೋ ಸಹಕಾರಿಯಾಗಲಿದೆ ಎಂದು ಸೆಂಟ್ರಲ್ ಬ್ಯಾಂಕ್ ವ್ಯವಸ್ಥಾಪಕ ಸೌಮ್ಯ ಅಭಿಪ್ರಾಯಪಟ್ಟರು.

ಹಲಗೂರಿನಲ್ಲಿ ವಳ್ಳಳ್ಳಿ ಎಜುಕೇಷನ್‌ ಟ್ರಸ್ಟ್‌ನಿಂದ ಜೆ.ಜೆ.ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ ಕಿಡ್ಸ್ ಶೋಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರ, ಆರೋಗ್ಯ, ನಾಡು-ನುಡಿ, ಸಂಸ್ಕೃತಿ, ಗಣಿತ, ವಿಜ್ಞಾನ ಚಟುವಟಿಕೆಗಳ ಹಲವು ಬಗೆಯ ಮಾದರಿಗಳನ್ನು ಪ್ರದರ್ಶನ ಮಾಡಿ ಪೋಷಕರ ಗಮನ ಸೆಳೆದರು.

ಈ ವೇಳೆ ವಳ್ಳಳ್ಳಿ ಎಜುಕೇಷನ್‌ ಟ್ರಸ್ಟ್ ಕಾರ್ಯದರ್ಶಿ ಕೆ.ಜೆ.ಸೋಮಶೇಖರ್, ಪ್ರಾಂಶುಪಾಲೆ ಕೆ.ಎನ್.ಲಲಿತಾಂಭ, ಮುಖ್ಯ ಶಿಕ್ಷಕಿ ಶಿವಮಣಿ, ಸಂಯೋಜಕ ವಿಕಾಶ್, ಶಿಕ್ಷಕಿಯರಾದ ಶೃತಿ, ಕೋಮಲ, ಶಬ್ರಿನ್, ಶಿಕ್ಷಕಿಯರು ಪೋಷಕರು ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!