- ಗಣಪತಿ ಪೆಂಡಾಲ್ ಆವರಣದಲ್ಲಿ ನಡೆದ ಹೋಬಳಿ ಮಟ್ಟದ ಜನಸ್ಪಂದನೆ: ಶೇ. 98 ಗ್ಯಾರಂಟಿ ಯೋಜನೆ ಅನುಷ್ಠಾನಕನ್ನಡಪ್ರಭ ವಾರ್ತೆ, ಬೀರೂರು.
ಪಟ್ಟಣದ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ನಡೆದ ಬೀರೂರು ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಡೂರು ತಾಲೂಕಿನಾದ್ಯಂತ ಬಹುತೇಕ ಹೋಬಳಿ ಮಟ್ಟದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಗಿವೆ. ಸಭೆಯಲ್ಲಿ ಯೋಜನೆಗಳಿಂದ ತಾಂತ್ರಿಕವಾಗಿ ವಂಚಿತರಾಗಿರುವ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಗ್ಯಾರಂಟಿ ಯೋಜನೆಗಳ ಜೊತೆ ಯಲ್ಲಿ ಗ್ರಾಮಗಳ ಹಲವು ಜ್ವಲಂತ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸಕಾರಾತ್ಮಾಕವಾಗಿ ಸ್ಪಂದಿಸಿ ಉತ್ತರದೊರಕಿಸಿಕೊಡಲು ಸಾಧ್ಯವಾಗಿದ್ದು, ಬರಪೀಡಿತ ಪ್ರದೇಶವಾದ ತಾಲೂಕಿಗೆ ಗ್ಯಾರಂಟಿ ಯೋಜನೆಗಳು ವರದಾನವಾಗಿ ಬಡಕುಟುಂಬಗಳಿಗೆ ಆಸರೆಯಾಗಿವೆ ಎಂದರು.ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸುಮಾರು 50ಸಾವಿರ ಹಣ ನೀಡುವ ಮೂಲಕ ಆರ್ಥಿಕ ಸಬಲತೆಗೆ ಪ್ರೋತ್ಸಾಹ ನೀಡುತ್ತಿರುವುದು ಬಡಕುಟುಂಬಗಳ ಜೀವನ ನಿರ್ವಹಣೆಗೆ ಹೆಚ್ಚಿನ ಸಹಕಾರಿಯಾಗಿರುವುದಕ್ಕೆ ಫಲಾನುಭವಿಗಳ ಅಭಿಪ್ರಾಯಗಳೇ ಸಾಕ್ಷಿಯಾಗಿದೆ ಎಂದರು.
ಗ್ಯಾರಂಟಿ ಯೋಜನೆಗಳು ಎಂಪಿ ಚುನಾವಣೆ ಬಳಿಕ ರದ್ದುಪಡಿಸಲಾಗುತ್ತದೆ ಎಂದು ಬೊಬ್ಬೆ ಹೊಡೆಯುವ ವಿರೋಧಪಕ್ಷಗಳ ಅಪಪ್ರಚಾರಗಳಿಗೆ ಜನತೆ ಕಿವಿಗೊಡಬೇಡಿ. ಬಡವರ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಸರಕಾರ ಬಂದರೂ ಯಾರಿಂದಲೂ ರದ್ದುಪಡಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಡವರ ಕಾಳಜಿ ಹಿತದೃಷ್ಟಿಯಿಂದ ಆರ್ಥಿಕ ಪುನಶ್ಚೇತನ ಕಂಡುಕೊಳ್ಳಲು ಶ್ರಮಜೀವಿಗಳಿಗೆ ಹೆಚ್ಚು ಫಲಪ್ರದವಾಗಿ ಯೋಜನೆ ಜಾರಿಗೆ ತರಲಾಗಿದೆ ಎಂದರು.ಪ್ರಧಾನಿ ಮೋದಿಯವರು ಮೊದಲು ಗ್ಯಾರಂಟಿ ಯೋಜನೆ ಬಂದಾಗ ವಿರೊಧಿಸುತ್ತಿದ್ದರು. ಆದರೆ ಅವರೇ ಈಗ ಮೋದಿ ಗ್ಯಾರಂಟಿ ಎನ್ನಲು ಪ್ರಾರಂಭಿಸಿದ್ದಾರೆ. ಇದು ಈ ಗ್ಯಾರಂಟಿ ಯೋಜನೆಗಳಿಗಿರುವ ತಾಕತ್ತು ಎಂದರು.
ಸದ್ಯ ಬೀರೂರು ಹೋಬಳಿಯ 6 ಗ್ರಾಮ ಪಂಚಾಯ್ತಿ ಹಾಗೂ ಪಟ್ಟಣ ಸೇರಿ ಗೃಹಲಕ್ಷ್ಮಿ ಯೋಜನೆಯಡಿ 10.084 ಜನ ಮಹಿಳೆಯರು ಅರ್ಜಿ ಸಲ್ಲಿಸಿದ್ದು 9833 ಜನರಿಗೆ ಪ್ರತಿ ತಿಂಗಳು 1.96 ಕೋಟಿ ರು. ಜಮೆಯಾಗುತ್ತಿದೆ. 251 ಜನಕ್ಕೆ ಮಾತ್ರ ತಾಂತ್ರಿಕ ಸಮಸ್ಯೆಯಿಂದ ಹಣ ಬರಲು ವಿಳಂಬವಾಗಿದ್ದು, ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ.
ಗೃಹಜ್ಯೋತಿಯಡಿ 10936 ಮೀಟರ್ ಗುರುತಿಸಲಾಗಿದ್ದು ಅದರಲ್ಲಿ 9357ಜನರಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಶಕ್ತಿ ಯೋಜನೆಯಡಿ ಇದುವರೆಗೂ 5.5ಲಕ್ಷ ಜನ ಮಹಿಳೆಯರು ತಾಲೂಕಿನಿಂದ ವಿವಿಧೆಡೆಗೆ ಸಂಚರಿಸಿದ್ದಾರೆ. ಕಳೆದ 8 ತಿಂಗಳಿಂದ 18.24ಕೋಟಿ ವ್ಯಯವಾಗಿದೆ ಎಂದರು.
ಕುಡಿವ ನೀರಿನ ಟ್ಯಾಂಕರ್ ಮಾಲೀಕರು ತಪ್ಪದೇ ಇದೇ ಸೋಮವಾರ ಸಂಜೆ 5.30ರ ಒಳಗೆ ಟ್ಯಾಂಕರ್ ಗಳನ್ನು ಗ್ರಾಮೀಣ ಕುಡಿಯುವ ನೀರಿನ ಯೋಜನೆ ಇಲಾಖೆಗೆ ಕಡ್ಡಾಯವಾಗಿ ರಿಜಿಸ್ಟರ್ ಮಾಡಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ತಾಪಂ ಇಒ ಸಿ.ಆರ್.ಪ್ರವೀಣ್, ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ, ವೃತ್ತ ನಿರೀಕ್ಷಕ ಶ್ರೀಕಾಂತ್, ಗ್ರಾಪಂ ಅಧ್ಯಕ್ಷರಾದ ಲೋಕೇಶ್, ಸೋಮಶೇಖರ್, ರತ್ನಮ್ಮ ರಾಜಪ್ಪ, ಶಾಂತಮ್ಮ ,ಪುರಸಭೆ ಸದಸ್ಯರಾದ ಬಿ.ಕೆ.ಶಶಿಧರ್, ಎಲೆ ರವಿಕುಮಾರ್, ಜ್ಯೋತಿ ಸಂತೋಷ್ ಕುಮಾರ್, ಜ್ಯೋತಿ ವೆಂಕಟೇಶ್, ವ್ಯವಸ್ಥಾಪಕ ಪ್ರಕಾಶ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಅದ್ಧೂರಿ ಪ್ರಭು, ಸೇರಿದಂತೆ ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಬೀರೂರಿನ ಗಣಪತಿ ಪೆಂಡಾಲ್ ಆವರಣದಲ್ಲಿ ಶನಿವಾರ ನಡೆದ ಬೀರೂರು ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಜನಸ್ಪಂದನಾ ಕಾರ್ಯಕ್ರಮವನ್ನು ಶಾಸಕ ಆನಂದ್ ಉದ್ಘಾಟಿಸಿದರು. ತಹಸೀಲ್ದಾರ್ ಕವಿರಾಜ್, ಇಒ ಪ್ರವೀಣ್ ಕುಮಾರ್, ಮುಖ್ಯಾಧಿಕಾರಿ ವಿ.ಡಿ.ಶಾಂತಲ ಮತ್ತಿತರಿದ್ದರು.