ಕೊಪ್ಪಳ: ಬಡವರ ಆರ್ಥಿಕ ಕಲ್ಯಾಣವೇ ಕಾಂಗ್ರೆಸ್ ಧ್ಯೇಯವಾಗಿದೆ. ರಾಜ್ಯದ ಬಡವರಿಗೆ ನಿಯಮಿತವಾಗಿ ಆದಾಯ ಬರಬೇಕು ಎನ್ನುವ ಕಾರಣಕ್ಕಾಗಿಯೇ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಮಾತನಾಡಿ, ಅತ್ಯಂತ ಕಡುಬಡ ರಾಷ್ಟ್ರವಾದ ಭಾರತದಲ್ಲಿ ಜನರು ಊಟಕ್ಕಾಗಿ ಪರಿತಪಿಸುವ ಪರಿಸ್ಥಿತಿ ಇತ್ತು. ದೇಶದಲ್ಲೆಲ್ಲ ಬಡತನ ತಾಂಡವ ಆಡುತ್ತಿತ್ತು. ಸದೃಢ ರಾಷ್ಟ್ರ ನಿರ್ಮಾಣವಾಗಲು ಕಾಂಗ್ರೆಸ್ ಕೊಡುಗೆ ಅಪಾರ ಎಂದು ಹೇಳಿದರು
ಗ್ಯಾರಂಟಿ ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಿಶೇಷ ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಎಐಸಿಸಿ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಟಿ. ಜನಾರ್ದನ ಹುಲಗಿ, ಮುಖಂಡರಾದ ಜುಲ್ಲು ಖಾದರಿ, ಗೂಳಪ್ಪ ಹಲಗೇರಿ, ಭರಮಪ್ಪ ನಗರ, ಸ್ಥಾಯಿ ಸಮಿತಿ ಸದಸ್ಯ ಅಕ್ಬರಪಾಷಾ ಪಲ್ಟನ್, ವೆಂಕಟೇಶ ಕಂಪಸಾಗರ, ಕಾಟನ್ ಪಾಷಾ, ಯಮನಪ್ಪ ಕಬ್ಬೇರ, ಯಂಕಪ್ಪ ಹೊಸಳ್ಳಿ, ಕೃಷ್ಣ ಇಟ್ಟಂಗಿ, ಶ್ರೀನಿವಾಸ ಗುಪ್ತಾ, ಹೊನ್ನರಸಾಬ್, ಗಂಗಾಧರ ಕಬ್ಬೇರ, ಅಶೋಕ ಗೋರಂಟ್ಲಿ, ಮಂಜುನಾಥ ಗೊಂಡಬಾಳ, ಕಾವೇರಿ ರ್ಯಾಗಿ, ಸವಿತಾ ಗೋರಂಟ್ಲಿ ಯಶೋದಾ ಮರಡಿ, ಶಿಲ್ಪಾ ಚನ್ನಪ್ಪ ತಟ್ಟಿ ಇದ್ದರು.