ಲಕ್ಷಾಂತರ ಭಕ್ತರ ಮಧ್ಯೆ ನಡೆದ ಎಡೆಯೂರು ರಥೋತ್ಸವ

KannadaprabhaNewsNetwork |  
Published : Apr 06, 2025, 01:47 AM IST
 ಎಡೆಯೂರು ಕ್ಷೇತ್ರದಲ್ಲಿ ನಡೆದ ಮಹಾರಥೋತ್ಸವ  | Kannada Prabha

ಸಾರಾಂಶ

ಪ್ರಸಿದ್ಧ ಪುಣ್ಯ ಕ್ಷೇತ್ರ ಎಡೆಯೂರಿನಲ್ಲಿ ತೋಂಟದ ಶ್ರೀ ಸಿದ್ಧಲಿಂಗೇಶ್ವರರ ಮಹಾರಥೋತ್ಸವ ಲಕ್ಷಾಂತರ ಭಕ್ತಾದಿಗಳ ಜಯಘೋಷಗಳ ಮಧ್ಯೆ ವಿಜೃಂಭಣೆಯಿಂದ ಶನಿವಾರ ನಡೆಯಿತು. ಅಭಿಜಿನ್‌ ಮುಹೂರ್ತದಲ್ಲಿ ನಡೆದ ರಥೋತ್ಸವಕ್ಕೆ ಸಿದ್ಧಗಂಗಾ ಮಠಾಧೀಶ ಶ್ರೀ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು

ಕನ್ನಡಪ್ರಭ ವಾರ್ತೆ ಕುಣಿಗಲ್

ಪ್ರಸಿದ್ಧ ಪುಣ್ಯ ಕ್ಷೇತ್ರ ಎಡೆಯೂರಿನಲ್ಲಿ ತೋಂಟದ ಶ್ರೀ ಸಿದ್ಧಲಿಂಗೇಶ್ವರರ ಮಹಾರಥೋತ್ಸವ ಲಕ್ಷಾಂತರ ಭಕ್ತಾದಿಗಳ ಜಯಘೋಷಗಳ ಮಧ್ಯೆ ವಿಜೃಂಭಣೆಯಿಂದ ಶನಿವಾರ ನಡೆಯಿತು. ಅಭಿಜಿನ್‌ ಮುಹೂರ್ತದಲ್ಲಿ ನಡೆದ ರಥೋತ್ಸವಕ್ಕೆ ಸಿದ್ಧಗಂಗಾ ಮಠಾಧೀಶ ಶ್ರೀ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಶಾಸಕ ಡಾ. ರಂಗನಾಥ್‌ ನ, ಎಡೆಯೂರಿನ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಪ ವಿಭಾಗಾಧಿಕಾರಿ ಗೌತಮ್, ತಹಸೀಲ್ದಾರ್ ರಶ್ಮಿ ಹಾಗೂ ಎಡೆಯೂರು ದೇವಾಲಯದ ಆಡಳಿತ ಅಧಿಕಾರಿಗಳಾದ ಮಹೇಶ್ ಸೇರಿದಂತೆ ಅನೇಕರು ಇದ್ದರು. ಕರ್ನಾಟಕ ಆಂಧ್ರ ತಮಿಳುನಾಡು ಸೇರಿದಂತೆ ಹಲವಾರು ಭಾಗಗಳಿಂದ ಬಂದಿದ್ದ ಅಸಂಖ್ಯಾತ ಸಿದ್ದಲಿಂಗೇಶ್ವರರ ಭಕ್ತರು ಹಣ್ಣು ದವನಗಳನ್ನು ರಥಕ್ಕೆ ಅರ್ಪಿಸುವ ಮುಖಾಂತರ ರಥೋತ್ಸವದಲ್ಲಿ ಭಾಗಿಯಾದರು.

ಸಿದ್ದಲಿಂಗೇಶ್ವರರನ್ನು ಗದ್ದುಗೆಯಿಂದ ಅಲಂಕೃತಗೊಂಡ ಮಂಟಪದಲ್ಲಿ ವಿಗ್ರಹ ರೂಪದಲ್ಲಿ ಕೂರಿಸಿ ರಥದ ಮೇಲ್ಭಾಗಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ವಿವಿಧ ಕಲಾತಂಡಗಳು ವೀರಗಾಸೆ, ಕಹಳೆ, ಕೊಂಬು ಸೇರಿದಂತೆ ನಾದ ಘೋಷ ಜೊತೆಗೆ ವೇದ ಘೋಷವೂ ನಡೆಯಿತು. ಸಿದ್ದಲಿಂಗೇಶ್ವರರ ವಿಗ್ರಹವನ್ನು ರಥದ ಮೇಲೆ ಕೂರಿಸಿದ ನಂತರ ಷಟ್ ಸ್ಥಲ ಧ್ವಜ ಹರಾಜು ಪ್ರಕ್ರಿಯೆ ಪ್ರಾರಂಭವಾಯಿತು. ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಈ ದ್ವಜ ಹರಾಜಿನಲ್ಲಿ ಮೈಸೂರಿನ ಸದಾಶಿವಯ್ಯ ಎಂಬುವರು ಆರು ಲಕ್ಷದ ಐವತ್ತೊಂದು ಸಾವಿರ ರೂಪಾಯಿಗೆ ಹರಾಜಿನಲ್ಲಿ ಪಡೆದರು. ನಂತರ ಅವರನ್ನು ರಥದ ಮೇಲೆ ಕೂರಿಸಿ ಈ ವರ್ಷದ ವಿಶೇಷ ಭಕ್ತರೆಂದು ಪರಿಗಣಿಸುವ ಮುಖಾಂತರ ರಥೋತ್ಸವ ನಡೆಸಲಾಯಿತು. ಎಡೆಯೂರು ಕೈಂಕರ್ಯ ದಾಸೋಹ ಸೇವಾ ಸಮಿತಿಯಿಂದ ನಿರಂತರವಾಗಿ ದಾಸೋಹ ಸೇವೆಯನ್ನು ನಡೆಸಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ