ಜಗತ್ತನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ

KannadaprabhaNewsNetwork | Published : Feb 3, 2025 12:30 AM

ಸಾರಾಂಶ

ರಿಪ್ಪನ್‍ಪೇಟೆ: ಮೌಲ್ಯಗಳ ಪುನರುತ್ಥಾನಕ್ಕೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಿಪ್ಪನ್‍ಪೇಟೆ: ಮೌಲ್ಯಗಳ ಪುನರುತ್ಥಾನಕ್ಕೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ಹೆದ್ದಾರಿಪುರ ಶ್ರೀರಾಮಕೃಷ್ಣ ಇನ್ಸ್‌ಟಿಟ್ಯೂಟ್ ಫಾರ್ ಸೋಷಿಯಲ್ ಅವೇರ್‍ನೆಸ್ ಶ್ರೀ ಶಿವರಾಮಕೃಷ್ಣ ಇಂಟರ್‌ನ್ಯಾಷನಲ್ ಸ್ಕೂಲ್ ಪೂರ್ವ ಪ್ರಾಥಮಿಕ ಹಿರಿಯ ಪ್ರಾಥಮಿಕ ಅಂಗ್ಲ ಮಾಧ್ಯಮ ಶಾಲೆಯ ಪ್ರತಿಭಾ ಪ್ರದರ್ಶನ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿಕ್ಷಣಕ್ಕೆ ಜಗತ್ತನ್ನು ಬದಲಾಯಿಸುವ ಶಕ್ತಿಯಿದ್ದು, ಆರ್ಥಿಕ ಬೆಳವಣಿಗೆ ಸಾಮಾಜಿಕ ಸಾಮರಸ್ಯ, ಜ್ಞಾನ ಹೀಗೆ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣಕ್ಕೆ ಪೋಷಕ ವರ್ಗ ಮತ್ತು ಶಿಕ್ಷಕ ಸಮೂಹ ಹೆಚ್ಚಿನ ಆಸಕ್ತಿ ವಹಿಸುವಂತಾಗ ಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ವ್ಯಕ್ತಿತ್ವ, ಸಮಯ, ಪ್ರಜ್ಞೆ ಮತ್ತು ನಾಯಕತ್ವ ಗುಣ ಬೆಳಸುವ ಅಗತ್ಯವಿದೆ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಆರಗಜ್ಞಾನೇಂದ್ರ, ವಿದ್ಯಾರ್ಥಿದೆಸೆಯಲ್ಲಿಯೇ ನಮ್ಮ ಮಕ್ಕಳಿಗೆ ರಾಷ್ಟ್ರನಾಯಕ ಮತ್ತು ಕವಿಗಳ ಪರಿಚಯ ಮಾಡಿಸುವ ಮೂಲಕ ಭಾರತೀಯ ಸಂಸ್ಕೃತಿ, ಸನಾತನ ಧರ್ಮದ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಸುಸಂಸ್ಕೃತರನ್ನಾಗಿ ಬೆಳಸಬೇಕು ಎಂದರು.

ಉಜರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್‍ನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಎಚ್.ರಮೇಶ್ ಮಾತನಾಡಿ, ಕಲಿಕೆ ಸಂದರ್ಭದಲ್ಲಿ ಮಕ್ಕಳು ವಿಸ್ತಾರವಾಗಿ ಆಲೋಚಿಸುವ ಮತ್ತು ತಮಗೆ ಲಭ್ಯವಾಗುವ ಹಲವು ಗ್ರಂಥಗಳ, ನೀತಿ ಕಥೆ ಸೇರಿದಂತೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳನ್ನು ಓದಿ ಮನನ ಮಾಡಿಕೊಂಡು ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು. ಓದಿನೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುವಂತೆ ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮಕೃಷ್ಣ ಇನ್ಸ್‌ಟಿಟ್ಯೂಟ್ ಫಾರ್ ಸೋಷಿಯಲ್ ಅವೇರ್‍ನೆಸ್ ವ್ಯವಸ್ಥಾಪಕ ಸಿ.ಕೆ.ಶಿವರಾಮ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಲೂಕು ಪಂಚಾಯ್ತಿ ಮಾಜಿ ಆಧ್ಯಕ್ಷ ವಾಸಪ್ಪಗೌಡರು, ಹೆದ್ದಾರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನಂತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ.ಈಶ್ವರಪ್ಪಗೌಡರು, ಹಾರೋಹಿತ್ತಲು, ಗ್ರಾಪಂ ಮಾಜಿ ಆಧ್ಯಕ್ಷ ಎಚ್.ಕೆ.ನಾಗರಾಜ, ಬಟ್ಟೆಮಲ್ಲಪ್ಪ ವ್ಯಾಸಮಹರ್ಷಿ ಗುರುಕುಲ ಸಂಸ್ಥಾಪಕ ಮಂಜುನಾಥಬ್ಯಾಣದ್, ಅಮೃತ ಗ್ರಾಂಪಂ ಅಧ್ಯಕ್ಷ ಸಚಿನ್‍ಗೌಡ, ಎಂ.ಜಿ.ಅಪೂರ್ವ, ವಿನುತ ಭಾಗವಹಿಸಿದ್ದರು.ಶಿಕ್ಷಕಿ ಜಿ.ವೈ.ರಶ್ಮಿ ಸ್ವಾಗತಿಸಿದರು, ವಿದ್ಯಾ ವಾರ್ಷಿಕ ವರದಿ ಓದಿದರು, ಅನುಶ್ರೀ ನಿರೂಪಿಸಿದರು, ಎಸ್.ಎನ್.ರಶ್ಮಿ ವಂದಿಸಿದರು.ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ನೃತ್ಯ ರೂಪಕ ಜರುಗಿತು.

Share this article