ಪ್ರಸಕ್ತ ವರ್ಷ ಶಿಕ್ಷಣ, ಆರೋಗ್ಯ, ಅರಣ್ಯ ಸಂರಕ್ಷಣೆಯೇ ಮುಖ್ಯ ಗುರಿ

KannadaprabhaNewsNetwork |  
Published : Jul 18, 2026, 02:45 AM IST
ಪೊಟೊ-16ಕೆಎನ್‌ಎಲ್‌ಎಮ್‌1-ನೆಲಮಂಗಲನಗರದ ಬಿ.ಹೆಚ್.ರಸ್ತೆಯ ವಿ.ವಿ.ಎಸ್ ಪಾರ್ಟಿ ಹಾಲ್ನಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಅಯೋಜಿಸಿದ್ದ  ನೂತನ ಪದಗ್ರಹಣ ಕಾರ್ಯಕ್ರಮವನ್ನು  ಜಿಲ್ಲಾ ಪಾಲಕ ರವಿಶಂಕರ್ ಡಾಕೋಜು  ಉದ್ಘಾಪಿಸಿದರು. ಅವರ ಸಮ್ಮುಖದಲ್ಲಿ ಪದಗ್ರಹಣ ಸ್ವೀಕಾರ ಮಾಡಿದರು.ಅವರು  ಸಮ್ಮುಖದಲ್ಲಿ ಪದಗ್ರಹಣ ಸ್ವೀಕಾರ ಮಾಡಿದರು. ನೂತನ ಅದ್ಯಕ್ಷರಾದ ಹನುಮಂತರಾಜು ಹಾಗೂ ಕಾರ್ಯದರ್ಶಿಯಾದ  ನಾಗೇಂದ್ರ ಸೇರಿದಂತೆ ಕ್ಲಬ್‌ ನ    ಪದಾಧಿಕಾರಿಗಳ ಹಾಗೂ ನಿರ್ದೇಶಕರು ನಗರದ ಬಿ.ಹೆಚ್.ರಸ್ತೆಯ ವಿ.ವಿ.ಎಸ್ ಪಾರ್ಟಿ ಹಾಲ್ನಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಅಯೋಜಿಸಿದ್ದ  ನೂತನ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅದ್ಯಕ್ಷರಾದ ಹನುಮಂತರಾಜು ಹಾಗೂ ಕಾರ್ಯದರ್ಶಿಯಾದ  ನಾಗೇಂದ್ರ ಸೇರಿದಂತೆ ಕ್ಲಬ್ನ ಪದಾಧಿಕಾರಿಗಳ ಹಾಗೂ ನಿರ್ದೇಶಕರು  ಇದ್ದರು. | Kannada Prabha

ಸಾರಾಂಶ

ನೆಲಮಂಗಲ: ವಿಶ್ವದಲ್ಲಿ ಶೇ.99.99ರಷ್ಟು ಪೋಲಿಯೋ ಮುಕ್ತ ಸಮಾಜ ನಿರ್ಮಿಸುವಲ್ಲಿ ರೋಟರಿ ಕಾರ್ಯ ಮಹತ್ವದ್ದಾಗಿದೆ. ಈ ಬಾರಿ ಬುಡಕಟ್ಟು ಜನಾಂಗದವರಿಗೆ ಶಿಕ್ಷಣ, ಆರೋಗ್ಯ, ಪ್ರಾಣಿಪಕ್ಷಿ ಹಾಗೂ ಅರಣ್ಯ ಸಂರಕ್ಷಣೆ ಮಾಡುವುದು ಮುಖ್ಯ ಗುರಿ ಎಂದು ರೋಟರಿಯ ಜಿಲ್ಲಾ ಪಾಲಕ ರವಿಶಂಕರ್ ಡಾಕೋಜು ಹೇಳಿದರು

ನೆಲಮಂಗಲ: ವಿಶ್ವದಲ್ಲಿ ಶೇ.99.99ರಷ್ಟು ಪೋಲಿಯೋ ಮುಕ್ತ ಸಮಾಜ ನಿರ್ಮಿಸುವಲ್ಲಿ ರೋಟರಿ ಕಾರ್ಯ ಮಹತ್ವದ್ದಾಗಿದೆ. ಈ ಬಾರಿ ಬುಡಕಟ್ಟು ಜನಾಂಗದವರಿಗೆ ಶಿಕ್ಷಣ, ಆರೋಗ್ಯ, ಪ್ರಾಣಿಪಕ್ಷಿ ಹಾಗೂ ಅರಣ್ಯ ಸಂರಕ್ಷಣೆ ಮಾಡುವುದು ಮುಖ್ಯ ಗುರಿ ಎಂದು ರೋಟರಿಯ ಜಿಲ್ಲಾ ಪಾಲಕ ರವಿಶಂಕರ್ ಡಾಕೋಜು ಹೇಳಿದರು.

ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯ ಅಧ್ಯಕ್ಷ, ಕಾರ್ಯದರ್ಶಿ, ನಿರ್ದೇಶಕರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದೇ ವೇಳೆ ನಿವೃತ್ತ ನ್ಯಾಯಾಧೀಶರಾದ ಸುಜಾತ ಧಯನಂಜಯಸ್ವಾಮಿ, ಗಾಯಕ ಕಡಬಗೆರೆ ಮುನಿರಾಜು ಅವರಿಗೆ ರೋಟರಿ ಸೇವಾ ರತ್ನ ಪ್ರಶಸ್ತಿ, ಪತ್ರಕರ್ತರಾದ ಎನ್.ಜಿ.ಗೋಪಾಲ್, ರಾಜಶೇಖರ್, ರುದ್ರೇಶ್ ಅವರಿಗೆ ಸನ್ಮಾನ, ರೋಟರಿ ಸದಸ್ಯರ ಮಕ್ಕಳಿಗೆ ಪತ್ರಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಗರ ಸಂಚಾರ ಠಾಣೆ ಪೊಲೀಸರಿಗೆ 200ಕ್ಕೂ ಹೆಚ್ಚು ಜಾಕೆಟ್ ವಿತರಣೆ ಹಾಗೂ ಅಂಗನವಾಡಿ ಅಡುಗೆ ಸಿಬ್ಬಂದಿಗೆ ಎಪ್ರಾನ್ ವಿತರಿಸಲಾಯಿತು.

ನೂತನ ಪದಾಧಿಕಾರಿಗಳು: ನೂತನ ಅಧ್ಯಕ್ಷರಾಗಿ ಹನುಮಂತರಾಜು, ಕಾರ್ಯದರ್ಶಿಯಾಗಿ ನಾಗೇಂದ್ರ, ಉಪಾಧ್ಯಕ್ಷ ಕಿರಣಕುಮಾರ್, ಐಪಿಸಿ ಗಂಗಣ್ಣ, ಜಂಟ ಕಾರ್ಯದರ್ಶಿ ನಟರಾಜು, ಖಜಾಂಚಿ ಪ್ರಸನ್ನಕುಮಾರ್, ಎಸ್‌.ಟಿ.ಚಂದ್ರಶೇಖರ್, ಬುಲೆಟೀನ್ ಎಡಿಟರ್ ಕೇಶವಮೂರ್ತಿ, ನಿರ್ದೇಶಕರಾಗಿ ರವಿ, ಕೃಷ್ಣಪ್ಪ, ರಾಕೇಶ್, ವಿಜಯ್‌ಕುಮಾರ್, ಚೌಡಪ್ಪ, ಸುರೇಶ್ , ಪ್ರೇಮಕುಮಾರ್, ನಂದಕುಮಾರ್, ಗೋವಿಂದರಾಜು, ಗಣೇಶಮೂರ್ತಿ, ವಿಜಯ್‌ ವೀಳ್ಯದೆಲೆ ಇತರರು ಪದಗ್ರಹಣ ಸ್ವೀಕರಿಸಿದರು.

ಈ ವೇಳೆ ಜಿಲ್ಲಾ ಸಹ ಕಾರ್ಯಪಾಲ ಜಿ.ಆರ್.ನಾಗರಾಜು, ಜಿಲ್ಲಾ ವಲಯ ಪಾಲಕ ಡಾ.ನಾಗೇಶ್, ಜಿಲ್ಲಾ ಕಾರ್ಯದರ್ಶಿ ಮಹದೇವ ದಂಬಾಳ್, ಜಿಲ್ಲಾ ಸಂಘಟಕ ನವೀನ್‌ ಕುಮಾರ್, ಇನ್ನರ್ ವ್ಹೀಲ್ ಅಧ್ಯಕ್ಷೆ ಲತಾ, ಮಾಜಿ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-16ಕೆಎನ್‌ಎಲ್‌ಎಮ್‌1-

ನೆಲಮಂಗಲದಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಪಾಲಕ ರವಿಶಂಕರ್ ಡಾಕೋಜು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮಾಯಕ ರೈತರ ಮೇಲೆ ದಬ್ಬಾಳಿಕೆ ಖಂಡನೀಯ
ಬಹುಮಾದರಿ ಗಾಯನ ಶೈಲಿಗೆ ಎಸ್.ಜಾನಕಿ ಅನ್ವರ್ಥ