ಹಣ ಅಂತಸ್ತಿನ ಮುಂದೆ ಶಿಕ್ಷಣವೇ ಶ್ರೇಷ್ಠ

KannadaprabhaNewsNetwork | Published : Apr 21, 2025 12:48 AM

ಸಾರಾಂಶ

ಕೊಟ್ಟ ಶಂಕರ್ ಅವರು ದಲಿತರ ಆಶಾಕಿರಣ ಅವರಿಗೆ ಇನ್ನೂ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಸಿಗಲಿ. ಅವರಿಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಕೊಟ್ಟ ಶಂಕರ್ ಅವರು ದಲಿತರ ಆಶಾಕಿರಣ ಅವರಿಗೆ ಇನ್ನೂ ಹೆಚ್ಚು ರಾಜಕೀಯ ಪ್ರಾತಿನಿಧ್ಯ ಸಿಗಲಿ. ಅವರಿಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಅವರು ಭಾನುವಾರ ನಗರದ ಡಾ.ಬಾಬು ಜಗಜೀವನ ರಾಂ ಸಮುದಾಯ ಭವನದಲ್ಲಿ ಕೊಟ್ಟ ಶಂಕರ್ ಸ್ನೇಹ ಬಳಗದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಹಣ ಅಂತಸ್ತು ಶಾಶ್ವತವಲ್ಲ ನಾವು ಪಡೆದ ಶಿಕ್ಷಣ ಎಂದಿಗೂ ಶಾಶ್ವತ. ಅಂತಹ ಶಿಕ್ಷಣದಿಂದ ಹಲವಾರು ವರ್ಷಗಳ ನಿರಂತರ ಅಧ್ಯಯನ, ಸಂಶೋಧನೆಯಿಂದ ಕೊಟ್ಟ ಶಂಕರ್ ಅವರು ತುಮಕೂರು ಜಿಲ್ಲೆಯ ದಲಿತ ಚಳುವಳಿಯ ಚಾರಿತ್ರಿಕ ಅಧ್ಯಯನಕ್ಕೆ ತುಮಕೂರು ವಿವಿಯಿಂದ ಪಿಎಚ್‍ಡಿ ಪದವಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು. ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಡಾ.ಹರೀಶ್ ಕುಮಾರ್ ಅವರು ಮಾತನಾಡಿ ಇತಿಹಾಸದಲ್ಲಿ ದಲಿತ ಮತ್ತು ಶೂದ್ರ ಸಮುದಾಯದವರನ್ನು ಪಟ್ಟಭದ್ರ ಹಿತಾಸಕ್ತಿಗಳು ಅಕ್ಷರದಿಂದ ಹೊರಗಿಟ್ಟಿದ್ದರು. ಅಂಬೇಡ್ಕರ್ ಅವರು ಸಂವಿಧಾನ ರಚಿಸಿ ಎಲ್ಲರಿಗೂ ಶಿಕ್ಷಣದ ಹಕ್ಕು ನೀಡಿದ ಮೇಲೆ ನಾವೆಲ್ಲರೂ ಶಿಕ್ಷಣ ಪಡೆದಿದ್ದೇವೆ. ಡಾ.ಕೊಟ್ಟ ಶಂಕರ್ ಅವರಿಗೆ ಇನ್ನೂ ಸರಕಾರದ ಮಟ್ಟದಲ್ಲಿ ಉನ್ನತ ಹುದ್ದೆಗಳು ದೊರಕಲಿ ಎಂದು ಆಶಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಕೊಟ್ಟ ಶಂಕರ್ ಶಿರಾದಲ್ಲಿ ಸ್ನೇಹ ಬಳಗದವರು ಪಿಎಚ್‍ಡಿ ಪಡೆದ ನೆಪದಲ್ಲಿ ನನಗೆ ಅಭಿನಂದನೆ ಮಾಡುತ್ತಿರುವುದು ಮರೆಯಲು ಸಾಧ್ಯವಿಲ್ಲ. ನನ್ನ ಹೋರಾಟ ಎಂದಿಗೂ ಮುಂದುವರೆಯುತ್ತದೆ. ನನಗೆ ನನ್ನ ಸ್ನೇಹಿತರೆ ನಿಜವಾದ ಸಂಪತ್ತು ಎಂದರು.

ಹಿರಿಯ ದಲಿತ ಹೋರಾಟಗಾರ ಜೆ.ಎನ್ ರಾಜಸಿಂಹ, ಕನಕ ಬ್ಯಾಂಕ್ ಅಧ್ಯಕ್ಷ ಎಸ್ ಎಲ್ ರಂಗನಾಥ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲ ಖಾನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಡಾ.ಚೈತ್ರ ಕೊಟ್ಟ ಶಂಕರ್ಆರ್ ಸಿ ರಾಮಚಂದ್ರಪ್ಪ, ಕೋಟೆ ಲೋಕೇಶ್, ಪಿ.ಆರ್.ಮಂಜುನಾಥ್, ಮೂರ್ತಿ ಮಾಸ್ಟರ್, ನಟರಾಜ್, ವಾಜರಹಳ್ಳಿ ರಮೇಶ್, ರವಿಶಂಕರ್, ರವಿಕುಮಾರ್, ಕುಮಾರ್. ಎನ್, ರಾಮರಾಜ್, ಮಣಿಕಂಠ, ಲಿಂಗರಾಜು, ನವೀನ್ ಕುಮಾರ್, ಶಾಂತಕುಮಾರ್, ಬೇವಿನಹಳ್ಳಿ ಸುದರ್ಶನ್, ಪಿ ಬಿ ನರಸಿಂಹಯ್ಯ,ಮಂಜುನಾಥ್, ಸಂತೋಷ್, ರಾಘವೇಂದ್ರ, ಜಯರಾಮಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

20ಶಿರಾ1: ಶಿರಾ ನಗರದ ಡಾ.ಬಾಬು ಜಗಜೀವನ ರಾಂ ಸಮುದಾಯ ಭವನದಲ್ಲಿ ಕೊಟ್ಟ ಶಂಕರ್ ಸ್ನೇಹ ಬಳಗದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಡಾ.ಕೊಟ್ಟ ಶಂಕರ್ ಅವರಿಗೆ ಶಾಸಕ ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಅವರು ಅಭಿನಂದಿಸಿದರು.

Share this article