ಕನ್ನಡಪ್ರಭ ವಾರ್ತೆ ಶಹಾಪುರ
ನಗರದ ಸಂಗಮ್ಮ ಬಾಪುಗೌಡ ದರ್ಶನಾಪೂರ ಪಿಯು ಕಾಲೇಜಿನಲ್ಲಿ ನಡೆದ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಸೈನ್ಸ್ ಕಾಲೇಜು ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಈ ಭಾಗದಲ್ಲಿ ಶಿಕ್ಷಣ ಕಲಿಯುವವರ ಮತ್ತು ಶಿಕ್ಷಕರ ಸಂಖ್ಯೆ ಕಡಿಮೆ ಇತ್ತು. ಅದರಲ್ಲಿಯು ಮಹಿಳೆಯರು ಹೆಚ್ಚಿನ ಶಿಕ್ಷಣ ಕಲಿಯಲು ಅವಕಾಶಗಳು ಬಹಳ ಕಡಿಮೆ. ಆದರೆ, ಪುರುಷರಷ್ಟೇ ಮಹಿಳೆಯರಿಗೂ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಸರ್ಕಾರ ಕಲ್ಪಿಸಿಕೊಟ್ಟ ಪರಿಣಾಮ ಮಹಿಳೆಯರು ಶಿಕ್ಷಣದಲ್ಲಿ ಪುರುಷರಿಗಿಂತ ಒಂದು ಹೆಜ್ಜೆ ಮುಂಧಇದ್ದಾರೆ ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಕುಂಬಾರಗೇರಿಯ ಹಿರಿಯ ಮಠದ ಪೀಠಾಧಿಪತಿ ಸೂಗೂರೇಶ್ವರ ಮಹಾಸ್ವಾಮೀಜಿ, ಸಕಾರಾತ್ಮಕ ಚಿಂತನೆಯಿಂದ ಎಂತಹ ಸಮಸ್ಯೆಯನ್ನಾದರೂ ಎದುರಿಸಬಹುದು ಎಂಬ ಮನೋಸ್ಥೈರ್ಯ ಮತ್ತು ಸಂಸ್ಕಾರ ಶಿಕ್ಷಕರು ಮಕ್ಕಳಿಗೆ ಕಲಿಸಿಕೊಟ್ಟಾಗ ಮಾತ್ರ ಅವರ ಜೀವನ ಪರಿಪೂರ್ಣವಾಗುತ್ತದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ದರ್ಶನಾಪೂರ ಗ್ರೂಪ್ ನ ಕಾರ್ಯ ಶ್ಲಾಘನೀಯ ಎಂದರು.
ಸಂಗಮ್ಮ ಬಾಪುಗೌಡ ದರ್ಶನಾಪೂರ ಪಿಯು ಕಾಲೇಜಿನ ಅಧ್ಯಕ್ಷ ಡಾ. ಸುಧತ್ ದರ್ಶನಾಪೂರ, ಬೆಂಗಳೂರಿನ ಗುರುಕುಲ ಅಕಾಡೆಮಿಯ ಸಿಇಒ ಮುರಳಿಧರ ಮುಳ್ಳೂರ್, ಪ್ರಾಂಶುಪಾಲ ಡಾ. ಶಿವರಾಜ್, ತರಬೇತಿ ಸಂಸ್ಥೆಯ ಮುಖ್ಯಸ್ಥ ಡಾ. ಬಸವರಾಜ ಇಜೇರಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು. ಕವಿತಾ ಬಡಿಗೇರ್ ಪ್ರಾರ್ಥಿಸಿದರು. ತಿಪ್ಪೇಸ್ವಾಮಿ ಸ್ವಾಗತಿಸಿದರು.