ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಯುವ ಪೀಳಿಗೆ ಎಚ್ಚೆತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲಬೇಕು. ಯುವ ಜನತೆ ಮಡಿವಾಳ ಮಾಚಿದೇವ ಅವರ ಆದರ್ಶ, ಮೌಲ್ಯಗಳು, ಸಂದೇಶಗಳನ್ನು ಪಾಲಿಸಿ ಜೀವನದಲ್ಲಿ ಅನುಸರಿಸಬೇಕು ಎಂದರು.ಕನ್ನಡ ಉಪನ್ಯಾಸಕ ಸಬ್ಬನಹಳ್ಳಿ ನಾಗರಾಜು ವಿಶೇಷ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂಬ ಭಾವನೆಯನ್ನು ಸಮಾಜಕ್ಕೆ ಸಾರಿದ ಕಾಲಘಟ್ಟದಲ್ಲಿ ಅನುಭವ ಮಂಟಪದಲ್ಲಿ 35 ಮಹಿಳೆಯರು ಸೇರಿದಂತೆ 250 ಶರಣರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರು. ರಾಜರ ಆಡಳಿತ ಕಾಲದಲ್ಲಿ ಸಮ ಸಮಾಜದ ನಿರ್ಮಾಣ ಮಾಡುವಲ್ಲಿ ಶರಣರ ಪಾತ್ರ ಅಪಾರ ಎಂದರು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಾ.ಬಿ.ವಿ.ನಂದೀಶ್. ಮುಖಂಡರಾದ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಡಿ.ರಮೇಶ್, ವೆಂಕಟೇಶ್, ಕಾಂತರಾಜು ಚಿಕ್ಕರಳ್ಳಿ, ಸೋಮಶೇಖರ್, ಸಿದ್ದಶೆಟ್ಟಿ, ಮದ್ದೂರು ಜಯರಾಮು, ಹನುಮಂತು, ತಾಳ ಶಾಸನ ಮೋಹನ್, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.