ಶಿಕ್ಷಣ ಎನ್ನುವುದು ವ್ಯಾಪಾರ ಅಲ್ಲ: ಹನೀಫ್ ಹಾಜಿ

KannadaprabhaNewsNetwork | Published : Apr 28, 2025 12:53 AM

ಸಾರಾಂಶ

ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಭಾನುವಾರ ದಅವಾ ಕಾಲೇಜು ಕಾನ್ಫರೆನ್ಸ್ ನಡೆಯಿತು.

ಉಳ್ಳಾಲ ದರ್ಗಾ ಉರೂಸ್‌: ದಅವಾ ಕಾಲೇಜು ಕಾನ್ಫರೆನ್ಸ್ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಉಳ್ಳಾಲ

ಶಿಕ್ಷಣ ಎನ್ನುವುದು ವ್ಯಾಪಾರ ಅಲ್ಲ, ಶಿಕ್ಷಣ ಒದಗಿಸುವುದು ನಮ್ಮ ಜವಾಬ್ದಾರಿ ಆಗಿದೆ. ತಾಜುಲ್ ಉಲಮಾ ಶಿಕ್ಷಣ ಅಭಿವೃದ್ಧಿಗೆ ಅಡಿಪಾಯ ಹಾಕಿದ್ದರು. ಈ ಶಿಕ್ಷಣ ವ್ಯವಸ್ಥೆ ಬೆಳವಣಿಗೆ ಆಗಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಹೇಳಿದರು.

ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಭಾನುವಾರ ನಡೆದ ದಅವಾ ಕಾಲೇಜು ಕಾನ್ಫರೆನ್ಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಉದ್ಘಾಟಿಸಿ ಮಾತನಾಡಿ, ಇಸ್ಲಾಮಿನ ನೈಜತೆಯನ್ನು ಮರೆಮಾಚಿ ಸಮುದಾಯದಲ್ಲಿ ಭಿನ್ನಮತ ಸೃಷ್ಟಿ ಆದಾಗ ಇದಕ್ಕೆ ಪರಿಹಾರ ಮಾರ್ಗವಾಗಿ ಪಂಡಿತರು ಸೇರಿ ಅಸ್ತಿತ್ವಕ್ಕೆ ತಂದ ಯೋಜನೆ ಆಗಿದೆ ದ ಅವಾ ಕಾಲೇಜು. ಈ ಕಾಲೇಜಿನಲ್ಲಿ ಕಲಿತರೆ ಇಸ್ಲಾಮಿನ ಸಿದ್ಧಾಂತಗಳ ಬಗ್ಗೆ ಗೊಂದಲ ಇರುವುದಿಲ್ಲ. ಇದರ ಜೊತೆಗೆ ಲೌಕಿಕ ಶಿಕ್ಷಣ ಕೂಡ ಅಗತ್ಯ ಎಂದರು.ದರ್ಗಾ ಸಮಿತಿ ಸದಸ್ಯ ಝಿಯಾದ್ ತಂಙಳ್ ಮಾತನಾಡಿದರು. ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ ದುಆ ನೆರವೇರಿಸಿದರು. ಅಬ್ದುಲ್ ರಶೀದ್ ಸಅದಿ ಬೋಳಿಯಾರ್ ವಿಚಾರ ಮಂಡನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ದರ್ಗಾ ಸಮಿತಿ ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜೊತೆ ಕಾರ್ಯದರ್ಶಿ ಇಸ್ಹಾಖ್, ಮುಸ್ತಾಫ ಮದನಿನಗರ, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಇಂತಿಯಾಝ್, ಸಯ್ಯಿದ್ ಮದನಿ ದಅವಾ ಕಾಲೇಜ್ ಪ್ರೊಫೆಸರ್ ನಜೀಬ್ ನೂರಾನಿ, ಸ್ವಾದಿಕ್ ಇಬ್ರಾಹಿಂ, ಮುಹಮ್ಮದ್ ಮುನೀರ್, ನುಹ್ ಮಾನ್ ನೂರಾನಿ, ಜಮಾಲ್ ಮದನಿ, ಸಿನಾನ್ ಮದನಿ, ಮತ್ತಿತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ಪ್ರಯುಕ್ತ ದ ಅವಾ ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮಗಳು ನಡೆಯಿತು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.

Share this article