ಅಭಿವೃದ್ಧಿಗೆ ಶಿಕ್ಷಣವೊಂದೇ ಮಾರ್ಗ: ಶಾಸಕ ಎನ್‌.ವೈ.ಗೋಪಾಲಕೃಷ್ಣ

KannadaprabhaNewsNetwork | Published : Jan 20, 2024 2:01 AM

ಸಾರಾಂಶ

ಕೊಂಡ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪಿಎಂಶ್ರೀ ಯೋಜನೆ, ಕಂಪ್ಯೂಟರ್ ಲ್ಯಾಬ್ ಉದ್ಘಾ ಟನಾ ಕಾರ್ಯಕ್ರಮಕ್ಕೆ ಶಾಸಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರುಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಪ್ರದೇಶ ಅಭಿವೃಧ್ಧಿಗೆ ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರು.

ಕೊಂಡ್ಲಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಪಂ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಪಿಎಂಶ್ರೀ ಯೋಜನೆ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಎಂಶ್ರೀ ಯೋಜನೆ ಕೇಂದ್ರ ಸರ್ಕಾರದದ್ದಾಗಿರೂ ರಾಜ್ಯ ಸರಕಾರವು ನಿರ್ವಹಣೆ ಮಾಡಬೇಕಿದೆ. ಯೋಜನೆಯಡಿ ಶಾಲಾ ಕೊಠಡಿ, ದುರಸ್ತಿ, ಕಂಪ್ಯೂಟರ್, ಲ್ಯಾಬ್, ಮಕ್ಕಳ ಆಟೋಪಕರಣ, ಶೈಕ್ಷಣಿಕ ಪೂಕರ ಸಾಮಾಗ್ರಿ ಸೇರಿ ಇನ್ನಿತರ ಅನೇಕ ಸೌಲಭ್ಯ ಪಡೆಯ ಬಹುದಾಗಿದೆ ಎಂದರು.

ರಾಜ್ಯ ಬಜೆಟ್‌ನಲ್ಲಿ ಶೈಕ್ಷಣಿಕ ವಿಷಯಕ್ಕೆ ಆದ್ಯತೆ ನೀಡಬೇಕು. ಕೊಠಡಿಗಳ ನಿರ್ಮಾಣ, ದುರಸ್ತಿ, ಶಿಕ್ಷಕರ ಕೊರತೆ ನೀಗಿಸಲು ಹೆಚ್ಚು ಅವಕಾಶ ನೀಡುವುದರ ಜತೆಯಲ್ಲಿ ಅತಿಥಿ ಶಿಕ್ಷಕರ ಕಾಯಂಗೊಳಿಸಿದರೆ ಮುಖ್ಯಮಂತ್ರಿ ಹೆಸರು ಅಜರಾಮರವಾಗಲಿದೆ ಎನ್ನುವ ಈ ವಿಷಯವನ್ನು ಸಿಎಂ ಜತೆ ಚರ್ಚಿಸಿ ಮನವಿ ಮಾಡಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಪವಿತ್ರಾ, ಎಸ್ಡಿಎಂಸಿ ಅಧ್ಯಕ್ಷ ಎ. ಪ್ರಕಾಶ್, ಗ್ರಾಪಂ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಬಿಇಒ ಇ.ನಿರ್ಮಲಾದೇವಿ, ಬಿಆರ್‌ಸಿ ಕೆ.ತಿಪ್ಪೇಸ್ವಾಮಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಈರಣ್ಣ, ಮುಖ್ಯ ಶಿಕ್ಷಕ ಚಂದ್ರಶೇಖರ್, ಗ್ರಾಪಂ ಸದಸ್ಯರಾದ ಎಸ್.ಕೆ. ನಿಂಗರಾಜ್, ಪಿ. ಶಾಂತಾ, ಚಂದ್ರಶೇಖರ್, ವಿ.ಪಾಲಾಕ್ಷ, ಮುಖಂಡರಾದ ಎಸ್.ಕೆಗುರುಲಿಂಗಪ್ಪ, ವಿ.ಸಿ. ವೆಂಕಟೇಶ್, ಟಿ. ತಿಪ್ಪೇಸ್ವಾಮಿ, ಎಚ್.ಸಿ. ಪ್ರದೀಪ್ ಕುಮಾರ್, ಕೆ.ಸಿ. ಮಂಜುನಾಥ್, ವೈ.ಸುಧರ್ಮ, ಕೆ.ಆರ್. ನಾಗರಾಜ್, ಎಸ್.ಸಿ. ಚಕ್ರಪಾಣಿ, ಬಿ.ಎಸ್. ಮುರುಳೀಕೃಷ್ಣ, ಖಲೀಂವುಲ್ಲಾ, ಮಧುಕುಮಾರ್, ಎಚ್. ಮಹಬೂಬ್ ಖಾನ್, ಜಿ.ಎನ್.ಮೋಹನ್ ಕುಮಾರ್, ಶಿಕ್ಷಕರಾದ ತಿಪ್ಪೇಸ್ವಾಮಿ, ನಾಗರಾಜ್, ಶಾರದಮ್ಮ ಇದ್ದರು.

Share this article