ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೇ ಅಸ್ತ್ರ: ಮಲ್ಲಿಕಾರ್ಜುನ

KannadaprabhaNewsNetwork |  
Published : Jan 02, 2026, 02:30 AM IST
೩೧ಕೆಎಂಎನ್‌ಡಿ-೩ಕಿಕ್ಕೇರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸಂಸ್ಥೆಯಿಂದ ಮಹಿಳಾ ವಿಚಾರಗೋಷ್ಟಿ ಸಮಾರಂಭ ನಡೆಯಿತು. ಮಲ್ಲಿಕಾರ್ಜುನ, ಎ.ಯೋಗೇಶ್, ಕೆ.ಪ್ರಸಾದ್, ಮಂಜು, ಚಲುವನಾರಾಯಣಸ್ವಾಮಿ, ರಮೇಶ್, ನಂದಿನಿ ಇದ್ದರು. | Kannada Prabha

ಸಾರಾಂಶ

ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಶುಚಿತ್ವ, ಕೌಟುಂಬಿಕ ಸಾಮರಸ್ಯ, ಸರ್ಕಾರದ ಯೋಜನೆಗಳನ್ನು ವಾರ್ಷಿಕವಾಗಿ ವಿಚಾರಗೋಷ್ಟಿ ಮೂಲಕ ಸಂಸ್ಥೆ ಜಾಗೃತಿ ಮೂಡಿಸುತ್ತಿದೆ. ಮಹಿಳೆಯರು ಜಾಗೃತರಾದಾಗ ಮಾತ್ರ ಕುಟುಂಬ, ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪುರುಷ ಪ್ರಧಾನ ನಾಡಿನಲ್ಲಿ ಮಹಿಳೆಯರ ಸಬಲೀಕರಣ ಮುಖ್ಯವಾಗಿದ್ದು, ಮಹಿಳೆಯರಿಗೆ ಶಿಕ್ಷಣ ಅಸ್ತ್ರವಾಗಿ ಮುಖ್ಯವಾಹಿನಿಯಲ್ಲಿ ಬರುವಂತೆ ಮಾಡುವುದೇ ಧರ್ಮಸ್ಥಳ ಸಂಸ್ಥೆ ಉದ್ದೇಶವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.

ಪಟ್ಟಣದಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಸಮಾರಂಭದಲ್ಲಿ ಮಾತನಾಡಿ, ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಶುಚಿತ್ವ, ಕೌಟುಂಬಿಕ ಸಾಮರಸ್ಯ, ಸರ್ಕಾರದ ಯೋಜನೆಗಳನ್ನು ವಾರ್ಷಿಕವಾಗಿ ವಿಚಾರಗೋಷ್ಟಿ ಮೂಲಕ ಸಂಸ್ಥೆ ಜಾಗೃತಿ ಮೂಡಿಸುತ್ತಿದೆ. ಮಹಿಳೆಯರು ಜಾಗೃತರಾದಾಗ ಮಾತ್ರ ಕುಟುಂಬ, ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.

ಸಂಸ್ಥೆ ಜಿಲ್ಲಾ ನಿರ್ದೇಶಕ ಎ.ಯೋಗೇಶ್ ಮಾತನಾಡಿ, ಮಹಿಳೆಯರು ಮನೆಯ ಗೋಡೆ ನಡುವೆ ಇರದೆ ಪುರುಷರಂತೆ ಸ್ವಾವಲಂಬಿಯಾಗಿ ಬದುಕಲು ಹೇಮಾವತಿ ಹೆಗ್ಗಡೆ ೧೯೯೩ರಲ್ಲಿ ಆರಂಭಿಸಿದರು. ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರ, ಕಾನೂನು ಅರಿವು, ಪ್ರತಿಭೆ ಗುರುತಿಸುವುದು, ಪೌಷ್ಠಿಕ ಆಹಾರ ತಯಾರಿಕೆ, ಹೆಣ್ಣು ಮಕ್ಕಳಿಗೆ ಶಿಕ್ಷಣದಂತಹ ಅಮೂಲ್ಯ ಸಂಗತಿಗಳ ಅರಿವು ಮೂಡಿದರೆ ಮಾತ್ರ ಮಹಿಳೆಯರು ಸರಿಸಮಾನವಾಗಿ ಬದುಕಲು ಸಾಧ್ಯ.ಇಂತಹ ಕೆಲಸ ಸಂಸ್ಥೆ ಮಾಡುತ್ತಿದೆ ಎಂದು ನುಡಿದರು.

ಕಿಕ್ಕೇರಿ ಕೆಪಿಎಸ್ ಶಾಲೆ ಉಪ ಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಕ್ಕಳ ಶಿಕ್ಷಣದಲ್ಲಿ ಹೆತ್ತವರ ಪಾತ್ರ ಹಾಗೂ ಪಿಎಸ್‌ಐರಮೇಶ್ ಮಹಿಳೆಯರಿಗೆ ಇರುವ ಕಾನೂನು ಅವಕಾಶ ಕುರಿತುಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ದಿನದರ್ಶಿಕೆ, ಧರ್ಮಸ್ಥಳ ಶ್ರೀಮಂಜುನಾಥೇಶ್ವರ ದೇಗುಲದ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಲಾಯಿತು. ರಂಗೋಲಿ, ಪುಷ್ಪಗುಚ್ಛ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಗ್ರಾಪಂಅಧ್ಯಕ್ಷ ಕೆ.ಬಿ. ಚಂದ್ರಶೇಖರ್, ಜಿಲ್ಲಾ ನಿರ್ದೇಶಕ ಮಂಜು, ಯೋಗೇಶ್, ವಕೀಲ ರಘು, ಯೋಜನಾಧಿಕಾರಿ ಪ್ರಸಾದ್, ಮೇಲ್ವಿಚಾರಕರಾದ ಯಶೋದಾ, ನಂದಿನಿ, ಸೇವಾ ಪ್ರತಿನಿಧಿಗಳು, ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?
ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು