ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಪ್ರೇಮಿ ಅರವಿಂದ್ ರಾಘವನ್ 2.50 ಲಕ್ಷ ರು. ಚೆಕ್ ವಿತರಣೆ

KannadaprabhaNewsNetwork |  
Published : Jan 24, 2025, 12:45 AM IST
22ಕೆಎಂಎನ್ ಡಿ19 | Kannada Prabha

ಸಾರಾಂಶ

ಪಾಂಡವಪುರ ತಾಲೂಕಿನ ಮೂಡಲಕೊಪ್ಪಲು ಸರ್ಕಾರಿ ಶಾಲೆಯ ಕೊಠಡಿಗಳು, ಕಾಂಪೌಂಡ್‌ಗೆ ಬಣ್ಣ ಬಳಿಸಲು 1.31 ಲಕ್ಷ ರು., ಎಂ.ಶೆಟ್ಟಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನವೀಕರಣ ಮತ್ತು ಪೇಂಟಿಂಗ್‌ಗಾಗಿ 70 ಸಾವಿರ ರು, ಚಿಕ್ಕಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪೀಠೋಪಕರಣ ಖರೀದಿಗೆ 55,460 ರು.ಗಳ ಚೆಕ್‌ಗಳನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ತಮ್ಮ ಕಚೇರಿಯಲ್ಲಿ ಹಸ್ತಾಂತರ ಮಾಡಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಖ್ಯಾತ ವಕೀಲ, ಶಿಕ್ಷಣ ಪ್ರೇಮಿ ಬೆಂಗಳೂರಿನ ಅರವಿಂದ ರಾಘವನ್ ಗಣರಾಜ್ಯೋತ್ಸವದ ಪ್ರಯುಕ್ತ ಸರ್ಕಾರಿ ಶಾಲೆಗಳ ಬಲವರ್ಧನೆಗೆ 2.50 ಲಕ್ಷ ರು. ಕೊಡುಗೆ ನೀಡಿ ಸಂವಿಧಾನದ ಆಶಯದಂತೆ ಸರ್ಕಾರಿ ಶಾಲೆಗಳು ಬೆಳವಣಿಗೆ ಕಾಣಬೇಕು ಎಂದು ಹಾರೈಸಿದರು.

ಪಾಂಡವಪುರ ತಾಲೂಕಿನ ಮೂಡಲಕೊಪ್ಪಲು ಸರ್ಕಾರಿ ಶಾಲೆಯ ಕೊಠಡಿಗಳು, ಕಾಂಪೌಂಡ್‌ಗೆ ಬಣ್ಣ ಬಳಿಸಲು 1.31 ಲಕ್ಷ ರು., ಎಂ.ಶೆಟ್ಟಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನವೀಕರಣ ಮತ್ತು ಪೇಂಟಿಂಗ್‌ಗಾಗಿ 70 ಸಾವಿರ ರು, ಚಿಕ್ಕಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪೀಠೋಪಕರಣ ಖರೀದಿಗೆ 55,460 ರು.ಗಳ ಚೆಕ್‌ಗಳನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ತಮ್ಮ ಕಚೇರಿಯಲ್ಲಿ ಹಸ್ತಾಂತರ ಮಾಡಿದರು.

ಅರವಿಂದ್ ರಾಘವನ್ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಅವಧಿಯಲ್ಲಿ ಮೇಲುಕೋಟೆ ಸುತ್ತಮುತ್ತಲಿನ ಹಾಗೂ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಸಹಕಾರ ನೀಡುವ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿದ್ದೇನೆ ಎಂದರು.

ಮೇಲುಕೋಟೆ ಶತಮಾನದ ಬಾಲಕರ ಶಾಲೆ, ಮಾಣಿಕ್ಯನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ಮೂಡಲಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು, ಸಮುದಾಯದವರು ಹಾಗೂ ಮಕ್ಕಳ ಅಭಿಮಾನದ ಆಹ್ವಾನದ ಮೇರೆ ಜ.26 ರಂದು ಗಣರಾಜ್ಯೋತ್ಸವದಂದು ಧ್ವಜಾರೋಹಣ ಮಾಡಿ ಮಕ್ಕಳೊಡನೆ ಬೆರೆಯುವ ಕೆಲಸ ಮಾಡುತ್ತಾ ಬಂದಿದ್ದೇನೆ. ಸರ್ಕಾರಿ ಶಾಲೆಗಳ ಬಲವರ್ಧನೆಯೇ ನನ್ನ ಗುರಿ. ಶಾಲೆಗಳಿಗೆ ಆದ್ಯತೆ ಮೇರೆಗೆ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಮೂಡಲಕೊಪ್ಪಲು ಶಾಲೆ ಮುಖ್ಯ ಶಿಕ್ಷಕ ಎಂ.ಡಿ.ಮರಿಸ್ವಾಮಿಗೌಡ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸೋಮಣ್ಣ ಚಿಕ್ಕಕೊಪ್ಪಲು, ಶಾಲೆ ಸಹಶಿಕ್ಷಕ ರಾಘವೇಂದ್ರರಿಗೆ ಚೆಕ್ ಹಸ್ತಾಂತರ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''