ಶಿಕ್ಷಣವನ್ನು ರಾಜ್ಯ ಸರ್ಕಾರ ಕೇಂದ್ರೀಕರಣಗೊಳಿಸಿದೆ

KannadaprabhaNewsNetwork |  
Published : May 01, 2026, 02:45 AM IST
1 | Kannada Prabha

ಸಾರಾಂಶ

ರಾಜ್ಯ ಸರ್ಕಾರ ತನ್ನ 8ನೇ ಗ್ಯಾರಂಟಿ ಎಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದ ಕುರಿತು ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಜಾಹೀರಾತು ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುವಿಕೇಂದ್ರಿಕರಣ ಗೊಳ್ಳಬೇಕಾದ ಶಿಕ್ಷಣ ಇಂದು ಕೇಂದ್ರೀಕರಣವಾಗುತ್ತಿರುವುದು ನಮ್ಮ ದುರದೃಷ್ಟಕರ ಎಂದು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಆರ್. ಮಹದೇವಪ್ಪ ಅಭಿಪ್ರಾಯಪಟ್ಟರು.ನಗರದ ಎಂಜಿನಿಯರ್‌ ಗಳ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಬಡ ಮಕ್ಕಳ ಶಿಕ್ಷಣ ಕಸಿಯುತ್ತಿರುವ ಸರ್ಕಾರ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ 8ನೇ ಗ್ಯಾರಂಟಿ ಎಂದು ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದ ಕುರಿತು ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಜಾಹೀರಾತು ನೀಡುತ್ತಿದೆ. ಆದರೆ ಶಿಕ್ಷಣವನ್ನು ಕೇಂದ್ರೀಕರಣಗೊಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ದೂರಿದರು.ರಾಜ್ಯ ಸರ್ಕಾರ ಶಿಕ್ಷಣ ತಜ್ಞರು, ವಿದ್ವಾಂಸರು ಮತ್ತು ಶಿಕ್ಷಕರ ವರದಿ ಧಿಕ್ಕರಿಸಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಪ್ರಾರಂಭಿಸಲು ಮುಂದಾಗಿದೆ. ಇದು ಶಿಕ್ಷಣ ವ್ಯವಸ್ಥೆಯ ಅವನತಿಗೆ ಕಾರಣ. ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ಜಾಗೃತರಾಗಬೇಕು ಎಂಬ ಆಶಯ ಹೊಂದಿದ್ದ ಅಂಬೇಡ್ಕರ್ ಪ್ರತಿಯೊಂದು ಊರಿನಲ್ಲೂ ಶಾಲೆ ಇರಬೇಕು ಎಂದು ಹೇಳಿದ್ದರು. ಯಾರು ಅಂಬೇಡ್ಕರ್ ಆಶಯ ಈಡೇರಿಸುತ್ತಾರೆ ಎಂದುಕೊಂಡಿದ್ದೆವೊ ಅವರೇ ಇಂದು ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಲು ಮುಂದಾಗಿದ್ದಾರೆ. ಊರುಗಳಲ್ಲಿದ್ದ ಶಾಲೆಗಳನ್ನು ಮುಚ್ಚಿ ಖಾಸಗಿ ಸಹಭಾಗಿತ್ವದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ತೆರಯಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಅವರು ಕಟುವಾಗಿ ಟೀಕಿಸಿದರು.ಕೆಪಿಎಸ್ ಮ್ಯಾಗ್ನೆಟ್ ಶಾಲೆಯಲ್ಲಿ 6ನೇ ತರಗತಿ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುವುದಾಗಿ ತಮ್ಮ ಜಾಹೀರಾತಿನಲ್ಲಿ ತಿಳಿಸಿಲಾಗಿದೆ. ಎಲ್ಲಾದರೂ 6ನೇ ತರಗತಿ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುವುದುಂಟೆ? ಇನ್ನೂ ಸಾಹಿತ್ಯ, ಸಂಸ್ಕೃತಿ ತಿಳುವಳಿಕೆಯೇ ಇಲ್ಲದ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುತ್ತೇವೆ ಎಂದು ಹೇಳುವುದು ನಾಚಿಕೆಗೆಟ್ಟ ವಿಷಯ ಎಂದು ಅವರು ತಿಳಿಸಿದರು.ಸಣ್ಣ ಮಕ್ಕಳು ಓದು ಕಲಿತು ಐಎಎಸ್, ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ಉನ್ನತ ಮಟ್ಟದ ವ್ಯಾಸಂಗದ ಬಗ್ಗೆ ಆಸಕ್ತಿ ಇಟ್ಟುಕೊಳ್ಳಬೇಕು. ಅದರ ಬದಲು ಈಗಲೇ ಕೌಶಲ್ಯ ತರಬೇತಿ ನೀಡಲು ಮುಂದಾಗುವುದು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಎಂದು ಅವರು ದೂರಿದರು.ಶಿಕ್ಷಣ ಸಚಿವ ಮಧು ಬಂಗಾರಪ್ಪ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕು. ಹಳ್ಳಿ ಮಕ್ಕಳ, ಹಾಡಿ ಮಕ್ಕಳ ಕಷ್ಟ ಅವರ ಹಾಗು ಹೋಗುಗಳು ಶಿಕ್ಷಣ ಸಚಿವರಿಗೆ ಗೊತ್ತೇ ಇಲ್ಲ. ಇಂತಹ ವ್ಯಕ್ತಿಗಳನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದರೆ ಇದೇ ವ್ಯವಸ್ಥೆ ಉದ್ಭವವಾಗಲಿದೆ ಎಂದರು.ಶಿಕ್ಷಣ, ಆರೋಗ್ಯ ಮತ್ತು ಕೃಷಿ ಇಲಾಖೆಗಳನ್ನು ತಿಳುವಳಿಕೆ ಇರುವವರಿಗೆ ನೀಡಿದರೆ ಮಾತ್ರ ಏನಾದರೂ ಸುಧಾರಣೆ ತರಲು ಸಾಧ್ಯ. ಯಾವುದೇ ಶಾಲೆಯಲ್ಲಿ 1, 2, 3 ಮಕ್ಕಳಿದ್ದರೂ ಅಲ್ಲಿ ಶಾಲೆ ಇರಬೇಕು ಆಗ ಮಾತ್ರ ಶಿಕ್ಷಣದ ಅರಿವು ಇರಲಿದೆ ಎಂದು ಹೇಳಿದರು.ಮೈಸೂರು ವಿವಿ ನಿವೃತ್ತ ಹಿರಿಯ ಪ್ರಾಧ್ಯಾಪಕ ಪ್ರೊ.ಡಿ. ಆನಂದ್ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಶಾಲೆ ಆರಂಭದಿಂದ ಯಾರ ಮೇಲೆ ಪರಿಣಾಮ ಬೀರುತ್ತದೆ ಎಂಬ ಎಚ್ಚರಿಕೆ ಸರ್ಕಾರಕ್ಕೆ ಇರಬೇಕು. ಸರ್ಕಾರದ ನೀತಿ ರೂಪಿಸುವವರಿಗೆ ಇದರ ಪರಿಣಾಮದ ಅರಿವು ಗೊತ್ತಿಲ್ಲ. ಅವರೆಲ್ಲರಿಗೂ ಸಾಮಾನ್ಯ ಜನರ ಕಷ್ಟ ಗೊತ್ತಿಲ್ಲ ಎಂದರು.ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಉಪಾಧ್ಯಕ್ಷ ವಿ.ಎನ್. ರಾಜಶೇಖರ್ ವಿಷಯ ಮಂಡಿಸಿದರು. ಎ.ಐ.ಡಿ.ಎಸ್‌.ಒ ಜಿಲ್ಲಾಧ್ಯಕ್ಷೆ ಚಂದ್ರಕಲಾ, ದಸಂಸ ಜಿಲ್ಲಾ ಸಂಚಾಲಕ ಯಡದೊರೆ ಮಹದೇವಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಮೈಸೂರು ವಿವಿ ಸಂಶೋಧಕ ಕಾರ್ತಿಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ನಂದೀಶ್ ಗಾಗೇನಹಳ್ಳಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ನಂಬಿಕೆ ಮೂಡಿಸುವುದು ಮಠಗಳ ಕರ್ತವ್ಯ
ಸೇವಾ ಮನೋಭಾವದಿಂದ ನರ್ಸಿಂಗ್‌ ವೃತ್ತಿ ಮಾಡಬೇಕು