ಭಗವಂತನ ನಂಬಿಕೆ ಮೂಡಿಸುವುದು ಮಠಗಳ ಕರ್ತವ್ಯ

KannadaprabhaNewsNetwork |  
Published : May 01, 2026, 02:45 AM IST
55 | Kannada Prabha

ಸಾರಾಂಶ

ಸದಾಶಿವ ಸ್ವಾಮೀಜಿಗಳ ಸಂಸ್ಮರಣೋತ್ಸವವು ನಮ್ಮೆಲ್ಲರಿಗೂ ಅತ್ಯಂತ ಭಾವನಾತ್ಮಕ ಹಾಗೂ ಪ್ರೇರಣಾದಾಯಕ ಕ್ಷಣವಾಗಿದೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರಭಗವಂತನ ಬಗ್ಗೆ ಜನರಲ್ಲಿ ಅಚಲವಾದ ನಂಬಿಕೆ, ಭಕ್ತಿ ಮತ್ತು ಆತ್ಮವಿಶ್ವಾಸವನ್ನು ಮೂಡಿಸುವುದು ಧಾರ್ಮಿಕ ಸಂಸ್ಥೆಗಳ ಹಾಗೂ ಮಠಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಕುರುಬೂರು ಗ್ರಾಮದಲ್ಲಿ ಪಟ್ಟದ ಮಠದ ವತಿಯಿಂದ ಆಯೋಜಿಸಿದ್ದ ಶ್ರೀ ಸದಾಶಿವ ಸ್ವಾಮೀಜಿಗಳ ಗದ್ದುಗೆ ಜೀರ್ಣೋದ್ಧಾರ ಹಾಗೂ 15ನೇ ವರ್ಷದ ಸಂಸ್ಮರಣೋತ್ಸವ, ಗುರು ಮಲ್ಲೇಶ್ವರಮೂರ್ತಿ ಪ್ರತಿಷ್ಠಾಪನೆ ಹಾಗೂ 5ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಭಗವಂತನಲ್ಲಿ ನಂಬಿಕೆ ಇಟ್ಟವನಿಗೆ ಬದುಕಿನಲ್ಲಿ ಯಾವುದೇ ಸಂಕಷ್ಟವೂ ಅಸಾಧ್ಯವಲ್ಲ. ಭಕ್ತಿ ಮನುಷ್ಯನ ಮನಸ್ಸಿಗೆ ಶಾಂತಿ, ಧೈರ್ಯ ಮತ್ತು ನೆಮ್ಮದಿಯನ್ನು ನೀಡುತ್ತದೆ. ಆದ್ದರಿಂದ ಸಮಾಜದಲ್ಲಿ ದೇವರ ಬಗ್ಗೆ ಭಕ್ತಿ ಹಾಗೂ ವಿಶ್ವಾಸ ಬೆಳೆಸುವುದು ಅತ್ಯಗತ್ಯ,ಎಂದರು.ಸದಾಶಿವ ಸ್ವಾಮೀಜಿಗಳ ಸಂಸ್ಮರಣೋತ್ಸವವು ನಮ್ಮೆಲ್ಲರಿಗೂ ಅತ್ಯಂತ ಭಾವನಾತ್ಮಕ ಹಾಗೂ ಪ್ರೇರಣಾದಾಯಕ ಕ್ಷಣವಾಗಿದೆ. ಒಬ್ಬ ಮಹಾನ್ ಸಂತ, ಆಧ್ಯಾತ್ಮಿಕ ಚೇತನ, ಸಮಾಜ ಸುಧಾರಕ ಮತ್ತು ಮಾನವತಾವಾದಿಯನ್ನು ಸ್ಮರಿಸುವ ಈ ಪುಣ್ಯ ಸಂದರ್ಭದಲ್ಲಿ ಅವರ ಪವಿತ್ರ ಜೀವನ, ಅಪಾರ ಸೇವೆ ಮತ್ತು ಅಮೂಲ್ಯ ಸಂದೇಶಗಳನ್ನು ನೆನೆಯುವುದು ನಮ್ಮೆಲ್ಲರ ಭಾಗ್ಯವಾಗಿದೆ. ಸದಾಶಿವ ಸ್ವಾಮೀಜಿಗಳವರು ತಮ್ಮ ಇಡೀ ಬದುಕನ್ನು ಸಮಾಜ ಸೇವೆಗೆ, ಧರ್ಮದ ಉಳಿವಿಗೆ ಮತ್ತು ಮಾನವೀಯ ಮೌಲ್ಯಗಳ ಪ್ರತಿಷ್ಠಾಪನೆಗೆ ಸಮರ್ಪಿಸಿದರು ಎಂದರು.ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿ, ಸದಾಶಿವ ಸ್ವಾಮಿಗಳವರ ಸಂಸ್ಮರಣೋತ್ಸವವು ಅವರ ಆದರ್ಶ, ಆಧ್ಯಾತ್ಮಿಕತೆ ಮತ್ತು ಸಮಾಜಸೇವೆಯನ್ನು ಸ್ಮರಿಸುವ ಪವಿತ್ರ ಕಾರ್ಯಕ್ರಮವಾಗಿದೆ. ಅವರ ಜೀವನವು ನಿಸ್ವಾರ್ಥ ಸೇವೆ, ಧರ್ಮಪ್ರಚಾರ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿತ್ತು. ಅವರು ತೋರಿದ ದಾರಿಯಲ್ಲಿ ನಡೆಯುವುದು, ಅವರ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.ಕುರುಬೂರು ಪಟ್ಟದ ಮಠದ ಶ್ರೀ ಮಲ್ಲಿನಾಥ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.ಅಧ್ಯಕ್ಷತೆ ವಹಿಸಿದ್ದ ವಾಟಾಳು ಸೂರ್ಯ ಸಿಂಹಾಸನಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಕನಕಪುರ ದೇಗುಲ ಮಠದ ಡಾ. ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಬೆಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ದೇವನೂರುಮಠದ ಮಹಾಂತ ಸ್ವಾಮೀಜಿ, ಮುಡುಕನಪುರ ಹಲವಾರ ಮಠದ ಷಡಕ್ಷರ ಸ್ವಾಮೀಜಿ, ಮಾಡ್ರಹಳ್ಳಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹುಲಿಯೂರು ದುರ್ಗ ಸಿದ್ದಲಿಂಗ ಮಠದ ಸಿದ್ದಲಿಂಗಶಿವಾನಂದ ಸ್ವಾಮೀಜಿ, ದಂಡಿಕೆರೆ ಮಠದ ಬಸವಲಿಂಗಸ್ವಾಮೀಜಿ ಆಶೀರ್ವಚನ ನೀಡಿದರು.ಗುರುಮಲ್ಲೇಶ್ವರ ಪುತ್ಥಳಿ ಶಿಲ್ಪಿಗಳಾದ ರಾಜೇಶ್, ಗೋಪಾಲ್, ಸಮಾಜ ಸೇವಕ ಗಜೇಂದ್ರ ಹಾಗೂ ರಾಷ್ಟ್ರಮಟ್ಟದ ಖೋಖೋ ಆಟಗಾರ್ತಿ ಚೈತ್ರಾ ಅವರನ್ನು ಸನ್ಮಾನಿಸಲಾಯಿತು.ಶ್ರೀ ಚನ್ನಬಸವ ಸ್ವಾಮೀಜಿ, ನಿಲಸೋಗೆ ದಾಸೋಹ ಮಠದ ಮಲ್ಲಪ್ಪಸ್ವಾಮಿ, ಕೆಆರ್.ಐಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎಸ್.ಎಂ.ಆರ್. ಪ್ರಕಾಶ್, ಕಪ್ಪಸೋಗೆ ಸಿದ್ದಮಲ್ಲಪ್ಪ, ತೊಟ್ಟವಾಡಿ ರವಿ, ತೋಟದಪ್ಪ ಬಸವರಾಜು, ಕುರುಬೂರು ಗ್ರಾಮಸ್ಥರು, ಮುಖಂಡರು, ಯಜಮಾನರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣವನ್ನು ರಾಜ್ಯ ಸರ್ಕಾರ ಕೇಂದ್ರೀಕರಣಗೊಳಿಸಿದೆ
ಸೇವಾ ಮನೋಭಾವದಿಂದ ನರ್ಸಿಂಗ್‌ ವೃತ್ತಿ ಮಾಡಬೇಕು