ಶಿಕ್ಷಣವು ವಿವೇಕವನ್ನು ಕಲಿಸಬೇಕು, ವಿದ್ಯೆಯೇ ವಿನಯದ ಭೂಷಣವಾಗಬೇಕು: ಜಿ.ಎಲ್.ತ್ರಿಪುರಾಂತಕ

KannadaprabhaNewsNetwork |  
Published : Jul 17, 2026, 01:15 AM IST
3 | Kannada Prabha

ಸಾರಾಂಶ

ಸಾಧನೆ ಮಾಡಲು ಬೇಕಾಗಿರುವುದು ಸೌಂದರ್ಯ, ವರ್ಗ, ವರ್ಣ. ದೇಹದ ಅಂಕು- ಡೊಂಕುಗಳಲ್ಲ ಬದಲಾಗಿ ಆತ್ಮಸ್ಥೈರ್ಯ ಸಾಧಿಸುವ ಗುರಿ ಕನಸುಗಳು ಇರಬೇಕು. ಯಶಸ್ಸು ಎಂಬ ಕನಸನ್ನು ಈಡೇರಿಸಿಕೊಳ್ಳಲು ನಿರಂತರ ಪರಿಶ್ರಮ ಮತ್ತು ಪ್ರಯತ್ನದಿಂದ ಗಳಿಸಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ಶಿಕ್ಷಣವು ವಿವೇಕವನ್ನು ಕಲಿಸಬೇಕು. ವಿದ್ಯೆಯೇ ವಿನಯದ ಭೂಷಣವಾಗಬೇಕು ಎಂದು ಸುತ್ತೂರಿನ ಜೆಎಸ್ಎಸ್ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಹಾಗೂ ಲೇಖಕ ಜಿ.ಎಲ್.ತ್ರಿಪುರಾಂತಕ ತಿಳಿಸಿದರು.

ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಪ್ರಥಮ ಬಿ.ಎ ಮತ್ತು ಪ್ರಥಮ ಬಿ.ಕಾಂ. ವಿದ್ಯಾರ್ಥಿನಿಯರಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಶಿಕ್ಷಣದಿಂದ ಉದ್ಯೋಗ ಹಣ ಗಳಿಕೆಯಷ್ಟು ಮುಖ್ಯವಾಗಬಾರದು ಎಂದರು.

ಸಾಧನೆ ಮಾಡಲು ಬೇಕಾಗಿರುವುದು ಸೌಂದರ್ಯ, ವರ್ಗ, ವರ್ಣ. ದೇಹದ ಅಂಕು- ಡೊಂಕುಗಳಲ್ಲ ಬದಲಾಗಿ ಆತ್ಮಸ್ಥೈರ್ಯ ಸಾಧಿಸುವ ಗುರಿ ಕನಸುಗಳು ಇರಬೇಕು. ಯಶಸ್ಸು ಎಂಬ ಕನಸನ್ನು ಈಡೇರಿಸಿಕೊಳ್ಳಲು ನಿರಂತರ ಪರಿಶ್ರಮ ಮತ್ತು ಪ್ರಯತ್ನದಿಂದ ಗಳಿಸಬಹುದು ಎಂದರು.

ನಮ್ಮ ಸಾಧನೆಯು ಮಾತಾಗಬೇಕೇ ಹೊರತು, ಮಾತು ಸಾಧನೆಯಾಗಬಾರದು. ವಿದ್ಯಾರ್ಥಿಗಳು ಓದುವಿನ ಜೊತೆಗೆ ಉನ್ನತ ಕನಸುಗಳನ್ನು ಕಾಣಬೇಕು. ಅವುಗಳ ಈಡೇರಿಕೆಗೆ ಸಮಯ, ಪ್ರಯತ್ನ, ಪರಿಶ್ರಮ ಹಾಗೂ ಧೈರ್ಯ ದೃಢ ಸಂಕಲ್ಪ ಅಗತ್ಯವಾಗಿ ಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ ಮಾತನಾಡಿ, ವಿದ್ಯಾರ್ಥಿನಿಯರು ಶೈಕ್ಷಣಿಕ ಪ್ರಗತಿಗೆ ನಮ್ಮ ಕಾಲೇಜು ಸದಾ ಪ್ರೋತ್ಸಾಹ ನೀಡುತ್ತಿದ್ದು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಕಾಲೇಜಿನ ಶೈಕ್ಷಣಿಕ ಸೌಲಭ್ಯವನ್ನು ಕುರಿತ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಪ್ರಸಾದಮೂರ್ತಿ ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಎಸ್.ಲಕ್ಷ್ಮಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಜಿ.ಎಂ. ಅಶ್ವಿನಿ ಪ್ರಾರ್ಥಿಸಿದರು. ಎನ್.ನಿತ್ಯಾ ಸ್ವಾಗತಿಸಿದರು. ರಶ್ಮಿ ವಂದಿಸಿದರು. ಮಹಾಲಕ್ಷ್ಮಿ ನಿರೂಪಿಸಿದರು.ನಾಳೆ ಯೋಗ ಘಟಿಕೋತ್ಸವ ಸಮಾರಂಭಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಜಿಲ್ಲಾ ಯೋಗ ಸ್ಪೋರ್ಟ್ಸ್ ಫೌಂಡೇಶನ್ ಹಾಗೂ ವರ್ಲ್ಡ್ ಯೋಗ ಅಲಯನ್ಸ್ ಸಹಯೋಗದಲ್ಲಿ ಯೋಗ ಘಟಿಕೋತ್ಸವ ಸಮಾರಂಭವನ್ನು ನಗರದ ಕಲಾಮಂದಿರ ಆವರಣದದ ಕಿರು ರಂಗಮಂದಿರದಲ್ಲಿ ಜು.18ರ ಬೆಳಗ್ಗೆ 8.30ಕ್ಕೆ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಪಿ.ಎನ್. ಗಣೇಶ್ ಕುಮಾರ್ ತಿಳಿಸಿದರು.ಈ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಶಾಸಕ ಟಿ.ಎಸ್. ಶ್ರೀವತ್ಸ ಪದವಿ ಪ್ರದಾನ ಮಾಡುವರು. ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಎಚ್.ಎ.ಶಶಿರೇಖಾ ಮುಖ್ಯ ಭಾಷಣ ಮಾಡುವರು. ಆಧ್ಯಾತ್ಮಿಕ ಚಿಂತಕರಾದ ಸುಚರಿತ ಮಾತಾಜಿ ಸಾನ್ನಿಧ್ಯ ವಹಿಸುವರು. ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು ಅಧ್ಯಕ್ಷತೆ ವಹಿಸುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರದ ಎಂಟು ಮಂದಿ ಸಾಧಕರಿಗೆ ಯೋಗ ಕೌಸ್ತುಭ ಮತ್ತು ಯೋಗ ಮಕರಂದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಸ್ಥೆ ವಿದ್ಯಾರ್ಥಿಗಳಿಂದ ಯೋಗ ನೃತ್ಯ ನಡೆಯಲಿದೆ ಎಂದರು.ಪದಾಧಿಕಾರಿಗಳಾದ ಮೋಹನ್, ಮಂಜುಳಾ, ಗೀತಾ ಕುಮಾರ್, ವಿವೇಕ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇದು ಚೆಕ್ ಪೋಸ್ಟ್? ಅಥವಾ ಬಾರ್‌ ಅಂಡ್ ರೆಸ್ಟೋರೆಂಟ್‌?
ಕಾಂಗ್ರೆಸ್‌ನ ಗಾಯಿತ್ರಿ ಶಾಂತೇಗೌಡ ಬೆಂಬಲಿಗರಿಂದ ಸಂಭ್ರಮಾಚರಣೆ