ಸರ್ಕಾರಿ ಕನ್ನಡ ಶಾಲೆಗಳಲ್ಲಿ ರಾಷ್ಟ್ರ ಪ್ರೇಮ ಉತ್ತೇಜಿಸುವ ಶಿಕ್ಷಣ ನೀಡಬೇಕು

KannadaprabhaNewsNetwork |  
Published : Jul 01, 2025, 12:48 AM IST
ಅ | Kannada Prabha

ಸಾರಾಂಶ

ಅಜ್ಜಂಪುರ , ಸರ್ಕಾರಿ ಕನ್ನಡ ಶಾಲೆಗಳಲ್ಲಿ ರಾಷ್ಟ್ರ ಪ್ರೇಮ ಉತ್ತೇಜಿಸುವ ಶಿಕ್ಷಣ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

- ನೊಳಂಬ ಸಮಾಜದಿಂದ ಪ್ರತಿಭಾ ಪುರಸ್ಕಾರ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸಲಹೆ.

ಕನ್ನಡಪ್ರಭ ವಾರ್ತೆ, ಅಜ್ಜಂಪುರ ಸರ್ಕಾರಿ ಕನ್ನಡ ಶಾಲೆಗಳಲ್ಲಿ ರಾಷ್ಟ್ರ ಪ್ರೇಮ ಉತ್ತೇಜಿಸುವ ಶಿಕ್ಷಣ ನೀಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪಟ್ಟಣದ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೊಳಂಬ ಲಿಂಗಾಯತ ಸಂಘ ಉಪಸಮಿತಿ, ಎಸ್ಎಸ್ಎಲ್. ಸಿ. ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಗೌರಮ್ಮ . ಜಿ ಎಸ್ ಸಿದ್ದರಾಮಪ್ಪ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿದರು.

ಕೇಂದ್ರ- ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ಆದ್ಯತೆ ನೀಡಿ ನೆರವು ನೀಡುತ್ತಿವೆ. ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿದ್ದು ಪ್ರತಿ ವರ್ಷ ₹45,000 ಕೋಟಿ ರ್ಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ನೀಡಲಾಗುತ್ತಿದೆ ಆದರೆ ವರ್ಷಕ್ಕೆ 1ಸಾವಿರ ಸರಕಾರಿ ಶಾಲೆಗಳು ಮುಚ್ಚುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ 25 ಶಾಲೆಗಳು ಮುಚ್ಚಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ ಕಳೆದ 11 ವರ್ಷಗಳಿಂದ ಸಮಾಜದಿಂದ ಪ್ರತಿಭಾ ಪುರಸ್ಕಾರ ಜಯಂತಿ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದೊಂದಿಗೆ ನಿಕಟ ಸಂಬಂಧ ಮತ್ತು ಅಭಿವೃದ್ಧಿಗೆ ಶ್ರಮಿಸಿದವರಿಗೆ ಮಾತ್ರ ನಾವು ಆದ್ಯತೆ ನೀಡುತ್ತೇವೆ ಎಂದರು. ಉದ್ಯಮಿ ಜಿ.ಎಸ್ ಓಂಕಾರಮೂರ್ತಿ ಮಾತನಾಡಿ ಕಾನ್ವೆಂಟ್ ಸಂಸ್ಕೃತಿಗೆ ಪೋಷಕರು ಮರಳಾಗುವ ಪರಿಣಾಮ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿದ್ದರೆ ಕೆಲಸ ಗ್ಯಾರಂಟಿ ಎಂದರು.

ನೊಳಂಬ ಲಿಂಗಾಯಿತ ಸಂಘದ ರಾಜ್ಯಾಧ್ಯಕ್ಷ ಬಿ.ಕೆ ಚಂದ್ರಶೇಖರ್ ಮಾತನಾಡಿ ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಕಡೂರು ಯಳನಾಡು ಮಠದ ಶ್ರೀಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ಹಾಗೂ ರಾಜ್ಯ ಬಿಜೆಪಿ ವಕ್ತಾರ ಎಚ್.ಎನ್ ಚಂದ್ರಶೇಖರ್ ಉಪನ್ಯಾಸ ನೀಡಿದರು. ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮುಡುಗೋಡು ಸಹಕಾರ ಸಂಘದ ಅಧ್ಯಕ್ಷ ಓಂಕಾರ ಸ್ವಾಮಿ ದಂದೂರು, ಡಿ.ಎಂ. ಮಧು ಸೊಲ್ಲಾಪುರ ಜಿ. ಈ. ಪ್ರತಾಪ್, ಅಜ್ಜಂಪುರ ಕಾಂತಮಣಿ, ದೊಡ್ಡ ಬೋಕಿಕೆರೆ, ಡಿ. ಈ. ಶರತ್ ಅವರನ್ನು ಗೌರವಿಸಲಾಯಿತು. ಸುಧೀರ್ ಮಂಜುಳ ತಂಡದಿಂದ ಜನಪದ ಗೀತೆಗಳ ಗೀತ ನಡೆಯಿತು. ಮಾಜಿ ಶಾಸಕ ಡಿ. ಎಸ್. ಸುರೇಶ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎನ್‌. ಸಿದ್ದರಾಮಪ್ಪ, ಕೆ.ಆರ್. ಧ್ರುವಕುಮಾರ್, ಎಸ್. ಬಿ. ಆನಂದಪ್ಪ, ಎಸ್. ಶಿವಾನಂದ ಗೌರವ ಕಾರ್ಯದರ್ಶಿ, ಕೆ. ಬಿ. ಶಶಿಧರ್, ಉಪ ಸಮಿತಿ ಅಧ್ಯಕ್ಷ ಎಲ್. ಎಸ್. ಬಸಪ್ಪ, ಕೇಂದ್ರ ಸಮಿತಿ ಸದಸ್ಯ ಎಸ್. ಸಿದ್ದರಾಮಯ್ಯ, ಡಿ. ಎಂ. ಮಧುಸೂಧನ್, ಎಸ್ ಎನ್ ಮಲ್ಲೇಗೌಡ, ಶಿವರಾಜ್, ಕೆ ಗಿರೀಶ್ ಚೌಹಾಣ್, ಎಂ ಕೃಷ್ಣಮೂರ್ತಿ ಹಾಗೂ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ