ಸಾಮಾಜಿಕ ಕೌಶಲಗಳಿಲ್ಲದ ಶಿಕ್ಷಣ ಅರ್ಥಹೀನ: ವಿವೇಕ್ ಆಳ್ವ

KannadaprabhaNewsNetwork |  
Published : Sep 28, 2025, 02:01 AM IST
ಸಮಾಜ ಮಂದಿರದಲ್ಲಿ ಮೂಡುಬಿದಿರೆ ದಸರಾಕೌಶಲ, ಸಂಶೋಧನೆ, ಸಾಮಾಜಿಕ ಕೌಶಲಗಳಿಂದ ಉದ್ಯಮಶೀಲತೆ  : ವಿವೇಕ್ ಆಳ್ವ | Kannada Prabha

ಸಾರಾಂಶ

ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ ಐದು ದಿನಗಳ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವದ ಸಮಾರೋಪ ಸಮಾರಂಭ ನಡೆಯಿತು.

ಮೂಡುಬಿದಿರೆ ಸಮಾಜ ಮಂದಿರ ದಸರಾ ಸಮಾರೋಪ

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಶಾಲಾ ಶಿಕ್ಷಣದಲ್ಲಿ ಕ್ರಾಂತಿಕಾರಿ ಪರಿವರ್ತನೆ, ಸಂಶೋಧನೆಗೆ ಆದ್ಯತೆ, ರಾಷ್ಟ್ರೀಯತೆಯ ಮನೋಭಾವ ಇಂದಿನ ಅಗತ್ಯವಾಗಿದೆ. ಕೌಶಲ ಮಾತ್ರವಲ್ಲ ಸಾಮಾಜಿಕ ಕೌಶಲಗಳಿಲ್ಲದ ಶಿಕ್ಷಣ ಅರ್ಥಹೀನ. ಅದರಿಂದ ಯಾವುದೇ ಲಾಭವಿಲ್ಲ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.

ಅವರು ಶುಕ್ರವಾರ ಸಂಜೆ ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ ಜರುಗಿದ ಐದು ದಿನಗಳ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವದ ಸಮಾರೋಪ ಸಮಾರಂಭದಲ್ಲಿ ಉನ್ನತ ಶಿಕ್ಷಣದ ಸವಾಲುಗಳ ಕುರಿತು ಮಾತನಾಡಿದರು.

ಹಿರಿಯ ಲೆಕ್ಕ ಪರಿಶೋಧಕ ರಘುಪತಿ ಎಸ್. ಭಟ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.ಸಮಾಜ ಮಂದಿರ ಪುರಸ್ಕಾರ:

ವಿವಿಧ ರಂಗಗಳಲ್ಲಿ ಸಾಧನೆಗೈದ ರಾಜೇಶ್ ಆರ್. ಶ್ಯಾನುಭಾಗ್ ( ಛಾಯಾಗ್ರಹಣ) ತಿಲಕ್ ಕುಲಾಲ್ (ಚಿತ್ರಕಲೆ), ಹೆರಾಲ್ಡ್ ತಾವ್ರೋ (ಸಂಗೀತ), ಅಶ್ರಫ್ ವಾಲ್ಪಾಡಿ (ಮಾಧ್ಯಮ), ಪ್ರಕಾಶ್ ಅಮೀನ್ (ಯೋಗ, ಸಂಸ್ಕೃತಿ), ರಾಜೇಶ್ ಪೂಜಾರಿ (ಕಲಾರಂಗ) ಅವರಿಗೆ ಸಮಾಜ ಮಂದಿರ ಗೌರವ ನೀಡಲಾಯಿತು.

ಸಿ.ಎಚ್‌. ಅಬ್ದುಲ್‌ ಗಫೂರ್‌ ಸ್ವಾಗತಿಸಿದರು. ಜತೆಕಾರ್ಯದರ್ಶಿ, ದಸರಾ ಉತ್ಸವ ಸಂಚಾಲಕ ಗಣೇಶ್ ಕಾಮತ್, ಕಾರ್ಯಕ್ರಮ ನಿರೂಪಿಸಿ, ಸನ್ಮಾನಿತರ ವಿವರ ನೀಡಿ ವಂದಿಸಿದರು. ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ